ನಗರದ ಉದ್ಯಾನವನಗಳು ಸ್ಮಾರ್ಟ್
Team Udayavani, Dec 4, 2019, 4:30 PM IST
ತುಮಕೂರು: ಧಾರ್ಮಿಕ, ಶೈಕ್ಷಣಿಕ ನಗರ ತುಮಕೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳ ಜೊತೆಗೆ ನಗರವನ್ನು ಸುಂದರಗೊಳಿಸಲು ನಗರದಲ್ಲಿರುವ ಪಾರ್ಕ್‌ಗಳ ಅಭಿವೃದ್ಧಿಗೆ ಯೋಜನೆ ಸಿದ್ಧ ಪಡಿಸಿದ್ದು, 25 ಕೋಟಿ ರೂ. ವೆಚ್ಚದಲ್ಲಿ ಹಸಿರೀಕರಣ ಮಾಡಲು ಉದ್ಯಾನವನಗಳ ಅಭಿವೃದ್ಧಿಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಮುಂದಾಗಿದ್ದಾರೆ.
ನಗರವನ್ನು ಸುಂದರೀಕರಣಗೊಳಿಸುವ ಸಲುವಾಗಿ ಸ್ಮಾರ್ಟ್ ಸಿಟಿಯು ಹಸಿರೀಕರಣ ಯೋಜನೆಯಡಿ 25 ಕೋಟಿ ರೂ. ವೆಚ್ಚದಲ್ಲಿ ಆಯ್ದ ಉದ್ಯಾನ ವನಗಳಿಗೆ ಕಾಯಕಲ್ಪ ನೀಡಲು ಹೆಜ್ಜೆಯಿಟ್ಟಿದ್ದು, ಉದ್ಯಾನವನಗಳಿಗೆ ಹೊಸ ರೂಪ ನೀಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಉದ್ಯಾನವನಗಳ ನವೀಕರಣದಿಂದ ಹೆಚ್ಚುತ್ತಿರುವ ತಾಪಮಾನಕ್ಕೆ ಕಡಿವಾಣ ಹಾಕಬಹುದಾಗಿದೆ. ಉದ್ಯಾನವನಗಳಲ್ಲಿ ಎಲ್ಲ ವಯೋಮಾನದವರಿಗೆ ಸರಿಹೊಂದುವ ವಾತಾವರಣ, ಪರಿಸರ ಸ್ನೇಹಿಯಾದ ಸೌಲಭ್ಯಗಳನ್ನು ಒದಗಿಸಲು ಸ್ಮಾರ್ಟ್ ಸಿಟಿ ಕಾರ್ಯ ಯೋಜನೆ ಸಿದ್ಧಪಡಿಸಿದೆ.
ವಿವಿಧ ಉದ್ಯಾನವನಗಳ ಆಯ್ಕೆ: ಮೊದಲ ಹಂತದಲ್ಲಿ ನಗರದ ಆದರ್ಶನಗರ, ಸೋಮೇಶ್ವರಪುರಮತ್ತು ಕುವೆಂಪುನಗರ ಉದ್ಯಾನವನಗಳ ಅಭಿವೃದ್ಧ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ. ಸಪ್ತಗಿರಿ ಬಡಾವಣೆ, ಅಮರಜ್ಯೋತಿ ನಗರ, ಗೋಕುಲ ಎಕ್ಸ್‌ಟೆನ್ಷನ್ , ಜಯನಗರ ಮತ್ತು ಮಹಾ ಲಕ್ಷ್ಮೀ ನಗರದ ಉದ್ಯಾನಗಳ ನವೀಕರಣ ಮಾಡಲಾಗುತ್ತಿದೆ. ಅಲ್ಲದೆ ದೇವರಾಯಪಟ್ಟಣ, ಗೋಕುಲ ಬಡಾ ವಣೆ, ಮಂಜುನಾಥ ನಗರ, ಮರಳೇನಹಳ್ಳಿ, ಶಿವರಾಮಕಾರಂತ ಉದ್ಯಾನವನ, ಎಸ್‌ಎಸ್‌ಪುರಂ, ಸುಕೃತ ಆಸ್ಪತ್ರೆ ಹಿಂಭಾಗ, ಗಂಗೋತ್ರಿ ರಸ್ತೆ, ಗಂಗಸಂದ್ರದ ಜಿಎಸ್‌ಬಿ ಉದ್ಯಾನವನ ಹಾಗೂ ಸದಾಶಿವ ನಗರದ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಲು ಆಯ್ಕೆ ಮಾಡಲಾಗಿದ್ದು, ಅವುಗಳಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿಯ ಎಂ.ಡಿ ಮತ್ತು ಸಿಇಒ ವಿ.ಅಜಯ್‌ತಿಳಿಸಿದ್ದಾರೆ.
ವಿಷಯಾಧಾರಿತ ಉದ್ಯಾನವನಗಳು: ನಗರದ ಉದ್ಯಾನವನಗಳನ್ನು ಫಿಟ್‌ನೆಸ್ ಉದ್ಯಾನವನ, ವಿಜ್ಙಾನ ಉದ್ಯಾನವನ, ಮಹಿಳಾ ಉದ್ಯಾನವನ, ವಿವಿಧ ಹೂಗಳ ಉದ್ಯಾನವನ, ಶಿಲ್ಪಿಗಳ ಉದ್ಯಾ ನವನ, ಸಾಮಾಜಿಕ ಜಾಲತಾಣಗಳ ಉದ್ಯಾನವನ, ಹಸಿರು ಉದ್ಯಾನವನ, ಸೈನ್ಸ್ ಹಾಗೂ ಆರ್ಕಿಟೆಕ್ಚರ್ ಥೀಮ್ ಪಾರ್ಕ್, ವಾಟರ್ ಪಾರ್ಕ್ ಸೇರಿದಂತೆ ವಿವಿಧ ವಿಷಯಾಧಾರಿತವಾಗಿ ಅಭಿವೃದ್ಧಿಪಡಿಸುತ್ತಿರುವುದು ವಿಶೇಷವಾಗಿದೆ.
ಯೋಜನೆ ಸಿದ್ಧ: ತುಮಕೂರು ಸ್ಮಾರ್ಟ್ ಸಿಟಿಯ ಯೋಜನಾ ನಿರ್ವಹಣಾ ಸಲಹೆದಾರ ಸಂಸ್ಥೆಯಾದ ಐಪಿಇ ಗ್ಲೋಬಲ್ ಲಿಮಿಟೆಡ್ ಹಾಗೂ ಗ್ರಾಂಟ್ ಥಾನನ್ ಎಲ್‌ಎಲ್ ಆರ್ಯವರ್ತ ಡಿಸೈನ್ ಕನ್ಸಲ್ಟೆಂಟ್ಸ್ ಎಲ್‌ಎಲ್‌ಪಿಯ ನುರಿತ ತಜ್ಞರ ತಂಡದಿಂದ ಈಪಿ ಉದ್ಯಾನವನಗಳ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ.
ಉದ್ಯಾನವನದ ಹಸಿರು ಮತ್ತು ತಂಪಾದ ವಾತಾವರಣದಲ್ಲಿ ವ್ಯಾಯಾಮ ಮಾಡುವುದು ಖುಷಿ ಕೊಡುತ್ತದೆ. ಮಹಿಳೆಯರು ಮತ್ತು ಯುವತಿಯರುಉದ್ಯಾನವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಉಪಕರಣಗಳನ್ನು ಬಳಸಿ ವ್ಯಾಯಾಮ
ಮಾಡುವುದಕ್ಕೆ ಯಾವುದೇ ಮುಜುಗರ ಎನಿಸುವುದಿಲ್ಲ ಎನ್ನುತ್ತಾರೆ ನಾಗರಿಕರು.
ಸೈನ್ಸ್ ಹಾಗೂ ಆರ್ಕಿಟೆಕ್ಚರ್ ಥೀಮ್ ಪಾರ್ಕ್: ವಿಜ್ಙಾನ, ಭೌತಶಾಸ್ತ್ರ, ತಂತ್ರಜ್ಙಾನದ ಅರಿವು ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಟ್ ವತಿಯಿಂದತುಮಕೂರು ನಗರದಲ್ಲಿ ವಿಜ್ಙಾನ ಮತ್ತು ಭೌತಶಾಸ್ತ್ರವನ್ನು ಬೋಧಿ ಸುವ ಸೈನ್ಸ್ ಥೀಮ್ ಪಾರ್ಕ್ ಅನ್ನು ನಿರ್ಮಾಣವಾಗಲಿದೆ. ಸಾಮಾನ್ಯವಾಗಿ ಪಾರ್ಕ್‌ನಲ್ಲಿ ಬಗೆ ಬಗೆಯ ಬಣ್ಣದ ಹೂವಿನ ಗಿಡಗಳು, ವಾಕಿಂಗ್ ಪಾಥ್, ಮಕ್ಕಳ ಮನರಂಜನೆಯ ಆಟೋಪಕರಣಗಳು ಇರುತ್ತವೆ. ಆದರೆ ಈ ಸೈನ್ಸ್ ಥೀಮ್‌ಪಾರ್ಕ್‌ನಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರ ಮೆದುಳಿಗೆ ಮನರಂಜನೆ ಒದಗಿಸುವ ಅನೇಕ ವಿಜ್ಙಾನ ಮತ್ತು ಭೌತಶಾಸ್ತ್ರವನ್ನು ಭೋಧಿಸುವ ಆಟಗಳು, ಸಾಹಸವನ್ನು ಕಾಣಬಹುದಾಗಿದೆ. ಅಲ್ಲದೆ ಅಮಾನಿಕರೆ ಕೆಇಬಿ ಜಂಕ್ಷನ್ ಬಳಿರುವ ಮಕ್ಕಳ ಆಟದ ಪ್ರದೇಶಲ್ಲಿ ಡಬಲ್ ಎಂಡ್ ಕೋನ್, ವೋರ್ಟೆಕ್ಸ್, ಲೂಪ್ ದಿ ಲೂಪ್, ಸುಂದಿಯಲ್, ನ್ಯೂಟನ್ ಕಲರ್ ಡಿಸ್ಕ್, ಶಕ್ತಿಯ ಸಂರಕ್ಷಣೆ, ಪೂಲ್ಲಿ ಮತ್ತು ಪೂಲ್ಲಿ ಬ್ಲಾಕ್, ಮ್ಯೂಸಿಕಲ್ ಟ್ಯೂಬ್‌ಗಳು, ಆ, ಲಿಥೋಫೋನ್, ಸ್ವಿಂಗ್ ಪೆಂಡ್ಯುಲಮ್ ಸೇರಿದಂತೆ 23 ವಿಜ್ಙಾನ ಸಲಕರಣೆ ಗಳನ್ನು ಪ್ರದರ್ಶನ ಮಾಡಲಾಗಿದೆ.
ಮಹಿಳಾ ಉದ್ಯಾನವನಗಳು: ನಗರದಲ್ಲಿ ಕೆಲ ಉದ್ಯಾನವನಗಳನ್ನು ವುಮೆನ್ಸ್ ಥೀಮ್ ಪಾರ್ಕ್ ಅನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದ್ದು, ಮಹಿಳಾ ಉದ್ಯಾನವನಗಳಲ್ಲಿ ಮಹಿಳಾ ಹೋರಾಟ ಗಾರರ ಭಾವಚಿತ್ರಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿ ಪ್ರದರ್ಶಿಸಲಾಗುವುದು. ಅಲ್ಲದೆ ಜಿಲ್ಲೆಯ ಹಾಗೂ ರಾಜ್ಯದ ಮಹಿಳಾ ಕವಿಯಿತ್ರಿ ಸೇರಿದಂತೆ ರಾಜ್ಯಕ್ಕಾಗಿ ಹೋರಾಡಿದ ವೀರವನಿತೆಯರ ಬಗ್ಗೆ ಮಾಹಿತಿ ಪ್ರಚುರ ಪಡಿಸಲಾಗುವುದು.
ಹೂಗಳ ಉದ್ಯಾನವನ : ಹೂಗಳ ಉದ್ಯಾನವನದಲ್ಲಿ ವಿವಿಧ ರೀತಿಯ ವಿಶಿಷ್ಟವಾದ ಹೂಗಳನ್ನು ಪ್ರದರ್ಶಿಸಲಾಗುವುದು. ಬೆಂಗಳೂರಿನ ಲಾಲ್‌ಭಾಗ್ ನಂತೆ ಈ ಉದ್ಯಾನವನವನ್ನು ಅಭಿವೃದ್ಧಿ ಮಾಡಲಾಗುವುದು. ಉದ್ಯಾನವನದಲ್ಲಿನ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಅಲಂಕಾರಿಕ ಗಿಡಗಳನ್ನು ನೆಟ್ಟು, ಹುಲ್ಲು ಹಾಸುವ ಕಾರ್ಯವನ್ನು ತೋಟಗಾರಿಕೆಇಲಾಖೆ ಮಾಡಲಿದೆ. ಬಳಿಕ ಉದ್ಯಾನವನಗಳ ನಿರ್ವಹಣೆಯನ್ನು ಮಹಾನಗರ ಪಾಲಿಕೆ ಮಾಡಲಿದೆ ಎಂದು ತಿಳಿಸಿದ್ದಾರೆ.
-ಚಿ.ನಿ.ಪುರುಷೋತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.