ಸ್ವಚ್ಛ ಬದುಕು ಉತ್ತಮ ಜೀವನಕ್ಕೆ ದಾರಿ
Team Udayavani, Feb 12, 2019, 7:25 AM IST
ಮಧುಗಿರಿ: ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ವಚ್ಛ ಬದುಕು ಜೀವನಕ್ಕೆ ದಾರಿ ದೀಪವಾಗ ಲಿದ್ದು, ಎಲ್ಲರೂ ಉತ್ತಮ ನಡವಳಿಕೆ ಗಳಿಸ ಬೇಕು ಎಂದು ಬೆಂಗಳೂರು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿ ವಿ.ಪಾತ ರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ, ತುಮಕೂರು ವಿಶ್ವವಿದ್ಯಾಲಯದ ಸಹ ಯೋಗದೊಂದಿಗೆ ಮಿಡಿಗೇಶಿಯ ಪ್ರಥಮ ದರ್ಜೆ ಕಾಲೇಜು ನೇತೃತ್ವದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಕಟ್ಟಲು ಸಾಧ್ಯ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ವಿದ್ಯಾರ್ಥಿಗಳು ಕಲಿಯಬೇಕಾಗಿರುವುದು ಬಹಳಷ್ಟಿದೆ. ಇಲ್ಲಿಂದಲೇ ದೇಶದ ಭವಿಷ್ಯದ ಸಮರ್ಥ ನಾಯಕನ ಉದಯವಾಗಲಿದೆ. ಕಾಯಕವೇ ಕೈಲಾಸ ಎಂದು ದುಡಿದವರು ಶ್ರೀ ಶಿವಕುಮಾರಸ್ವಾಮಿ ಹಾಗೂ ಡಾ.ಎಪಿಜೆ ಅಬ್ದುಲ್ ಕಲಾಂ ರವರು.
ಇವರಂತೆ ನೀವು ಗಳು ಸಮಾಜದ ಆಸ್ತಿಯಾಗಬೇಕು. ಸರ್ವ ಪಲ್ಲಿ ರಾಧಕೃಷ್ಣ ಹೇಳಿದಂತೆ ರಾಷ್ಟ್ರೀಯ ಸಮಗ್ರತೆಯನ್ನು ಉಳಿ ಮತ್ತು ಇಟ್ಟಿಗೆಯಿಂದ ಕಟ್ಟಲು ಸಾಧ್ಯವಿಲ್ಲ. ಬದಲಾಗಿ ಶಿಕ್ಷಣದಿಂದ ಮಾತ್ರ ಕಟ್ಟಲು ಸಾಧ್ಯವೆಂದು. ಅದರಂತೆ ನೀವೂ ಮೌಲ್ಯಯುತ ಶಿಕ್ಷಣವನ್ನು ಇಲ್ಲಿ ಗಳಿಸಬೇಕು ಎಂದು ಸಲಹೆ ನೀಡಿದರು.
ಕೀಳರಿಮೆ ತೊರೆಯಿರಿ: ಕನ್ನಡ ಮಾಧ್ಯಮ ವೆಂದು ಕೀಳರಿಮೆ ತೊರೆಯಿರಿ. ದೇಶದ ಉನ್ನತ ಸ್ಥಾನ ಪಡೆದವರು ಕನ್ನಡ ಮಾಧ್ಯಮ ದಲ್ಲೇ ವ್ಯಾಸಂಗ ಮಾಡಿದವರೆಂದು ಅರಿಯಿರಿ. ಪುಣ್ಯಕೋಟಿಯ ಕಥೆಯಿಂದ ಕ್ರೂರಹುಲಿ ಮನುಷ್ಯತ್ವ ಗಳಿಸಿದ ಹಾಗೂ ಗೌತಮ ಬುದ್ಧನಿಂದ ಕಳ್ಳನಾದ ಅಂಗುಲಿ ಮಾಲಾನನ್ನು ಬದಲಾಯಿಸಿದ ಭೂಮಿ ನಮ್ಮದು. ಇಂಥ ನೈಜ ಸತ್ಯ ಘಟನೆ ತಿಳಿದು, ದೇಶವನ್ನು ಸಮರ್ಥವಾಗಿ ನಡೆಸು ವಂತಾಗಬೇಕು ಎಂದರು.
ಶಿಬಿರಾರ್ಥಿಗಳು ದೇಶದ ಆಸ್ತಿ: ಸಮಾಜ ತಿದ್ದುವ ನಾವುಗಳು ಮೊದಲು ಪರಿಪೂರ್ಣ ವಾಗಿರಬೇಕು. 32ನೇ ವಯಸ್ಸಿಗೆ ವಿಶ್ವಕ್ಕೆ ಭಾರತದ ಸಂಸ್ಕೃತಿ ತಿಳಿಸಿಕೊಟ್ಟ ಮಹಾಜ್ಞಾನಿ ಸ್ವಾಮಿ ವಿವೇಕಾನಂದರು. ಜಗತ್ತಿನಲ್ಲಿ ತನನಾಗಿ ಬದುಕಿದವರು ಅಳಿದು ಹೋಗುತ್ತಾರೆ.
ಆದರೆ, ಸಮಾಜಕ್ಕಾಗಿ ಬದುಕಿದವರು ಎಂದಿಗೂ ಚಿರಸ್ಥಾಯಿಯಾಗಿರುತ್ತಾರೆ. ಆದ್ದ ರಿಂದ ಇಂಥ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಲ್ಲಿ ಭಾಗವಹಿಸುವ ನೀವುಗಳು ನಿಜವಾಗಿ ದೇಶದ ಆಸ್ತಿಗಳು. ನೀವೆಲ್ಲ ಶಿಸ್ತು, ಸಂಯಮ ಹಾಗೂ ಏಕಾಗ್ರತೆಯಿಂದ ಶಿಕ್ಷಣ ಪಡೆದು ಸಮಾಜಕ್ಕೆ ಆಸ್ತಿಯಾಗಬೇಕೆಂದು ಶುಭ ಕೋರಿದರು.
ಸ್ವಚ್ಛತೆಯ ಕಡೆ ಗಮನ ಹರಿಸಿ: ಮಲ್ಲಸಂದ್ರದ ಕುವೆಂಪು ಕಾಲೇಜಿನ ಪ್ರಾಚಾರ್ಯ ಕುಮಾರ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿ ಗಳ ಬದುಕು ಉಜ್ವಲವಾಗಿರುತ್ತದೆ. ಇಲ್ಲಿ ಕಲಿತ ಶಿಕ್ಷಣವನ್ನು ನಿಜವಾಗಿ ಜೀವನದಲ್ಲಿ ಅಳವಡಿಸಿಕೊಂಡರೆ ಭವಿಷ್ಯದ ನಾಯಕರಾಗಲಿದ್ದಾರೆ.
ಗ್ರಾಮೀಣ ಭಾಗದಲ್ಲಿ ಪ್ರತಿಭಾ ವಂತ ವಿದ್ಯಾರ್ಥಿಗಳು ಇರುತ್ತಾರೆ. ಕಾನ್ವೆಂಟ್ ಮಕ್ಕಳಿಗಿಂತ ಹೆಚ್ಚಾಗಿ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಿರುತ್ತಾರೆ. ಕೀಳರಿಮೆ ಬಿಟ್ಟು ಗ್ರಾಮದ ಸ್ವಚ್ಛತೆಯ ಕಡೆ ಗಮನ ಹರಿಸಿ ಎಂದರು.
ವಿಶ್ವಕ್ಕೆ ಗುರು: ಸಂಪನ್ಮೂಲ ವ್ಯಕ್ತಿಯಾದ ಕುಂಚಿಟಿಗರ ನೌಕರರ ಸಂಘದ ಅಧ್ಯಕ್ಷ ಕರೇಗೌಡ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಯಲ್ಲಿ ಯುವಶಕ್ತಿಯ ಪಾತ್ರ ಬಹಳ ಹಿರಿದು. ಈ ಶಕ್ತಿ ಪೂರ್ಣ ಪ್ರಮಾಣದಲ್ಲಿ ವಿನಿಯೋಗ ವಾದರೆ ಭಾರತವು ವಿಶ್ವಕ್ಕೆ ಗುರುವಾಗಲಿದೆ.
ಗ್ರಾಮೀಣ ಭಾಗದ ಮಕ್ಕಳು ಪುಟಿದೆದ್ದರೆ ದೇಶ ಆಳಬಲ್ಲರು. ಅದಕ್ಕೆ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಹಾಗೂ ಮಾಜಿ ಪ್ರಧಾನಿ ದೇವೇಗೌಡರೇ ಸಾಕ್ಷಿಗಳು ಎಂದರು. ನೀವೆಲ್ಲ ಆತ್ಮವಿಶ್ವಾಸದ ಗಣಿಗಳಂತೆ. ಜೇನು ನೊಣ ಹಲವು ಹೂವಿಂದ ಮಕರಂದ ಹೀರಿ ಗೂಡು ಕಟ್ಟುತ್ತದೆ. ಅದರಂತೆ ನೀವು ಹಲವು ಸಾಧಕರ ಮಾರ್ಗದರ್ಶನದಲ್ಲಿ ಉತ್ತಮವಾದ ಭವಿಷ್ಯ ಕಟ್ಟಿಕೊಂಡು ದೇಶದ ಸದೃಢ ನಾಯಕರಾಗಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಟಿ.ಎನ್.ನರಸಿಂಹಮೂರ್ತಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಬದಲಾವಣೆ ತರುವ ಶಕ್ತಿವಂತರಾಗಿರುತ್ತಾರೆ. ಇಲ್ಲಿ ಸ್ನೇಹ, ಸಹಬಾಳ್ವೆ ಹಾಗೂ ನಾಯಕತ್ವದ ಗುಣ ಕಲಿಸಲಾಗುತ್ತದೆ. ಇದು ನಿಮ್ಮ ಬದುಕನ್ನು ಮಾದರಿಯಾಗಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ನಿರ್ದೇಶಕ ನರಸೇಗೌಡ, ರೆಡ್ಡಿಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗರಾಜು, ಮುಖಂಡ ರಾದ ಲಕ್ಷ್ಮೀಕುಮಾರ್, ಸಿದ್ದರಾಜು, ಶಿಬಿರಾಧಿಕಾರಿ ಮುನಿರಾಜು, ಸಿರಿಗೆಜ್ಜೆ ರಮೇಶ್, ಸಹ ಪ್ರಾಧ್ಯಾಪಕ ಸತೀಶ್, ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.