ಸಮಾಜದ್ರೋಹಿಗಳಿಗೆ ಸಿಎಂ ಬೆಂಬಲ : ಪ್ರಭಾಕರ ಭಟ್ ವಾಗ್ಧಾಳಿ
Team Udayavani, Jan 29, 2018, 6:35 AM IST
ತುಮಕೂರು: ರಾಜ್ಯದಲ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸಮಾಜದಲ್ಲಿ ಅಶಾಂತಿ ಉಂಟು ಮಾಡಿದ ದ್ರೋಹಿಗಳನ್ನು ಬೆಂಬಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಾಗಿದ್ದು ಅಲ್ಪಸಂಖ್ಯಾಕರ ಮೇಲಣ ಪ್ರಕರಣಗಳನ್ನು ವಾಪಸ್ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಮುಗ್ಧ ಎಂದು ಹೇಳುವುದು ಸಿದ್ದರಾಮಯ್ಯ ಅಲ್ಲ ಅದನ್ನು ನ್ಯಾಯಾಲಯ ಹೇಳಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣಮಧ್ಯ ಕ್ಷೇತ್ರೀಯ ಕಾರ್ಯಕಾರಣಿ ಸದಸ್ಯ ಡಾ. ಪ್ರಭಾಕರ ಭಟ್ ತೀವ್ರ ವಾಗ್ಧಾಳಿ ನಡೆಸಿದರು.
ನಗರದ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ರವಿವಾರ ಸಂಜೆ ನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಏರ್ಪಡಿಸಿದ್ದ ಪಥ ಸಂಚಲನದ ನಂತರ ನಡೆದ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಗೆ ಕಾರಣವಾಗಿರುವ ಪಿಎಫ್ಐ ಮತ್ತು ಎಸ್.ಡಿ.ಪಿ.ಐ. ಸದಸ್ಯರ ವಿರುದ್ಧದ ಪ್ರಕರಣಗಳನ್ನು ರಾಜ್ಯ ಸರಕಾರ ವಾಪಸ್ ಪಡೆದಿದ್ದರಿಂದಲೇ ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ರಾಜ್ಯದಲ್ಲಿ ಮತ್ತೆ ಕೋಮುಗಲಭೆಯನ್ನು ಸೃಷ್ಟಿಸಿ ಅಧಿಕಾರ ಗದ್ದುಗೆ ಹಿಡಿಯುವ ಹುನ್ನಾರದಲ್ಲಿ ಸರಕಾರ ತೊಡಗಿದೆ ಎಂದು ಆರೋಪಿಸಿದರು.
ಹಿಂದೂ ಎಂದರೆ ಕೋಮುವಾದಿಗಳು ಎನ್ನುತ್ತಿದ್ದ ಸಿದ್ದರಾಮಯ್ಯ ಇಂದು ನಾನು ಸಾಫ್ಟ್ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶಯವೂ ಇದೇ ಆಗಿದೆ ಈ ದೇಶದಲ್ಲಿ ಇರುವ ಪ್ರತಿಯೊಬ್ಬರು ಹಿಂದೂಗಳಾಗಬೇಕು ಎಂದ ಅವರು ದೇವಾಲಯಗಳಿಗೆ ಹೋಗದೆ ಇದ್ದ ಕಾಂಗ್ರೆಸಿಗರ ದಂಡು ಈಗ ದೇವಾಲಯಗಳಿಗೆ ಹೋಗುತ್ತಿದೆ ಎಂದು ಕಿಚಾಯಿಸಿದರು. ಮಹಿಳೆಯನ್ನು ಪೂಜಿಸಿ ಗೌರವಿಸುವ ಧರ್ಮ ಹಿಂದು ಧರ್ಮ ದೇಶದ ಭೂಮಿಯನ್ನು ಆರಾಧಿಸುವ, ಮಹಾಪುರುಷರ ಪರಂಪರೆಯನ್ನು ಗೌರವಿಸುವ, ಸಂಸ್ಕೃತಿಯನ್ನು ಪೂಜಿಸುವವರು ಮಾತ್ರ ಭಾರತ ಮಾತೆಯ ಹೆಮ್ಮೆಯ ಪುತ್ರರಾಗುತ್ತಾರೆ ಎಂದು ನುಡಿದರು.
ವಿಶ್ವದಲ್ಲಿ ತಮ್ಮ ದೇಶವನ್ನು ತಾಯಿ ಎಂದು ಹೇಳಿರು ವುದು ಭಾರತ ದೇಶದ ಹಿಂದೂಗಳು ಮಾತ್ರ. ಬೇರೆ ದೇಶಗಳಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ನೋಡುತ್ತಾರೆ. ಭಾರತದಲ್ಲಿ ಮಾತ್ರವೇ ಹೆಣ್ಣನ್ನು ತಾಯಿ ಎಂದು ಪೂಜಿಸುವ ಮನೋಭಾವ ಇದೆ ಎಂದ ಅವರು ನಮ್ಮದು ಪ್ರಕೃತಿಯನ್ನು ಆರಾಧನೆ ಮಾಡುವ ದೇಶ. ಭಾರತ ಮಾತೆಯ ಮಣ್ಣಿನ ಕಣಕಣದಲ್ಲೂ ಪಾಪವನ್ನು ತೊಳೆಯುವ ಶಕ್ತಿ ಇದೆ ಎಂದರು. ಹೆಣ್ಣುಮಕ್ಕಳನ್ನು ತಾಯಿ ಎಂದು ಗೌರವಿಸುವ ನಮ್ಮ ನಾಡಿನಲ್ಲಿ ಹೆಣ್ಣುಮಕ್ಕಳನ್ನು ಲವ್ ಜೆಹಾದ್ ಹೆಸರಲ್ಲಿ ಹಿಂಸಿಸಲಾಗುತ್ತಿದೆ ಎಂದವರು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್ ವಿಕ್ರಂ ಗೌಡ ಆಡಿಯೋ!
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.