ತೆಂಗಿಗೆ ರೋಗಬಾಧೆ; ರೈತರಲ್ಲಿ ಆತಂಕ


Team Udayavani, Jul 2, 2023, 3:55 PM IST

tdy-18

ತುಮಕೂರು: ಉತ್ಕೃಷ್ಟವಾದ ತೆಂಗು ಬೆಳೆಯುವ ತುಮಕೂರು ಜಿಲ್ಲೆ ತೆಂಗು ಬೆಳೆಗಾರರ ಬದುಕು ಇಂದು ಬೆಲೆ ಕುಸಿತ, ರೋಗ ಭಾದೆ, ಮಳೆಯ ಕೊರತೆ, ಅಂತರ್ಜಲ ಕುಸಿತದಿಂದ ಮೂರಾಬಟ್ಟೆಯಾಗಿದೆ. ಮಾಡಿದ ಸಾಲವನ್ನೂ ತೀರಿಸಲಾಗದ ಸಂಕಷ್ಟ ಸ್ಥಿತಿಯಲ್ಲಿ ರೈತರಿದ್ದು ರೈತರ ನೆರವಿಗೆ ಬರಬೇಕಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಅನ್ನದಾತರನ್ನು ನಿರ್ಲಕ್ಷಿಸಿವೆ.

ಈ ನಡುವೆ ತೆಂಗಿಗೆ ಕಾಣಸಿಕೊಂಡ ರೋಗಬಾಧೆಯಿಂದ ತೆಂಗು ಬೆಳೆ ಗಾರರು ಮತ್ತಷ್ಟು ಕಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯ ವಾಣಿಜ್ಯ ಬೆಳೆ ತೆಂಗಿಗೆ ಕಳೆದ ಹಲವು ವರ್ಷಗಳಿಂದ ಅನೇಕ ರೋಗರುಜಿನಗಳು ಹರಡಿ ತೆಂಗು ಬೆಳೆ ಕುಸಿಯುತ್ತಾ ಹೋಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು, ಸಾಲಸೋಲ ಮಾಡಿ ತೆಂಗಿನ ಮರ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ರೈತರು ತಲುಪಿದ್ದಾರೆ. ಜಿಲ್ಲೆಯಲ್ಲಿ 1,47,733 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇದರಲ್ಲಿ ಜಿಲ್ಲೆಯ ಚಿ.ನಾ. ಹಳ್ಳಿ ತಾಲೂಕಿನಲ್ಲಿ 30,361ಹೆಕ್ಟೇರ್‌, ತಿಪಟೂರಿನಲ್ಲಿ 34,055 ಹೆಕ್ಟೇರ್‌, ತುರುವೇಕೆರೆಯಲ್ಲಿ 24,893 ಹೆಕ್ಟೇರ್‌, ಗುಬ್ಬಿ ತಾಲೂಕಿನಲ್ಲಿ 29,126 ಹೆಕ್ಟೇರ್‌, ತುಮಕೂರಿನಲ್ಲಿ 11,597ಹೆಕ್ಟೇರ್‌, ಶಿರಾದಲ್ಲಿ 8,044 ಹೆಕ್ಟೇರ್‌, ಕುಣಿಗಲ್‌ 6,787 ಹೆಕ್ಟೇರ್‌, ಕೊರಟಗೆರೆ 1,396, ಮಧುಗಿರಿ 887, ಪಾವಗಡ 587 ಹೆಕ್ಟೇರ್‌ ಪ್ರದೇಶಗಳಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 5-6 ವರ್ಷಗಳಿಂದ ಸಮರ್ಪಕ ವಾಗಿ ಮಳೆಯಿಲ್ಲದೆ ಬರಗಾಲದ ದವಡೆಯಲ್ಲಿ ಸಿಲುಕಿದ ರೈತರಿಗೆ ಕಳೆದ 2022-23ರಲ್ಲಿ ಸುರಿದ ಮಳೆ ಸ್ವಲ್ಪ ನೆಮ್ಮದಿ ತಂದಿತ್ತು.

ಆದರೂ, ಕೆಲವು ಕಡೆಗಳಲ್ಲಿ ಸರಿಯಾಗಿ ಮಳೆ ಬಾರದೇ ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಶ್ರಮಪಡುತ್ತಿದ್ದಾರೆ. ಇಲ್ಲಿಯವರೆಗೆ ನುಸಿ ಪೀಡೆರೋಗ ತೆಂಗು ಇಳುವರಿ ಕುಸಿತಕ್ಕೆ ಕಾರಣವಾಗಿತ್ತು. ಈಗ ಕಪ್ಪು ತಲೆ ಹುಳುರೋಗಬಾಧೆ ಈಗ ಕಾಣಸಿ ಕೊಂಡು ಸಾವಿರಾರು ಹೆಕ್ಟೇರ್‌ ತೆಂಗು ಒಣಗುತ್ತಿದೆ. ಜತೆಗೆ ರಸ ಒಡೆಯುವ ರೋಗ, ಕೆಂಪು ತಲೆ ಹುಳು ರೋಗದಿಂದ ತೆಂಗು ಬೆಳೆ ಉಳಿಸಿಕೊಳ್ಳಬೇಕು ಎಂದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಲ್ಲದೆ ಅಣವೆ ರೋಗ ಕಾಣಸಿಕೊಂಡಿದೆ ಇದರಿಂದ ತೆಂಗಿನ ಮರಗಳಿಗೆ ತೊಂದರೆ ಉಂಟಾಗುತ್ತಿದೆ. ಇದೆಲ್ಲದರ ನಡುವೆ ಕೊಬ್ಬರಿ ಬೆಲೆ ಕುಸಿತದಿಂದಾಗಿ ಸಾವಿರಾರು ರೈತರು ಕೊಬ್ಬರಿಗೆ ಬೆಲೆ ನೀಡಿ ತೆಂಗು ಬೆಳೆ ಉಳಿಸಿ ಎಂದು ಹೋರಾಟಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿಯೂ ಸಕಾಲದಲ್ಲಿ ಮಳೆ ಎಲ್ಲೆಡೆ ಬಂದಿಲ್ಲ ತೆಂಗು ಬೆಳೆಯುವ ರೈತರು ತೋಟಗಾರಿಕಾ ಬೆಳೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 45 ಸಾವಿರಕ್ಕೂ ಅಧಿಕ ತೋಟಗಾರಿಕಾ ಬೆಳೆ ಒಣಗಿದೆ.

ಹಲವು ವರ್ಷಗಳಿಂದ ಮಳೆಯಿಲ್ಲದೆ ಸಂಕಷ್ಟದಲ್ಲೇ ಇರುವ ತೆಂಗು ಬೆಳೆಗಾರರನ್ನು ಉಳಿಸಲು ಸರ್ಕಾರಗಳು ರೈತರ ನೆರವಿಗೆ ಬರಬೇಕು. ತೆಂಗು ಬೆಳೆಯಿಂದ ನಷ್ಟವಾಗಿರುವ ರೈತರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಅವರನ್ನು ಮೇಲಕ್ಕೆತ್ತಬೇಕು. ತೆಂಗಿಗೆ ಬೆಂಬಲ ಬೆಳೆ ನೀಡಬೇಕೆಂದು ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ-ರಾಜ್ಯ ಸರ್ಕಾರಗಳು ಈವರೆಗೆ ಸ್ಪಂದಿಸದಿರುವುದು ವಿಪರ್ಯಾಸ.

ತುಮಕೂರು ಜಿಲ್ಲೆಯ ವಿವಿಧೆಡೆ ತೆಂಗಿನ ಕಾಂಡದಲ್ಲಿ ರಸ ಸೋರುವ ಬಾಧೆ ಮತ್ತು ಅಣಬೆ ರೋಗ ಕಾಣಸಿ ಕೊಂಡಿದೆ. ಇದಕ್ಕೆ ತಜ್ಞರು ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದಾರೆ. ಔಷಧೋಪಚಾರ ಮಾಡುವ ಬಗ್ಗೆ ಅರಿವು ಮೂಡಿಸಲಾಗು ತ್ತಿದೆ. ತೆಂಗು ಬೆಳೆಗಾರ ರೈತರು ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ. ತೋಟ ಗಾರಿಕೆ ಇಲಾಖೆಯಿಂದ ಬೆಳೆಗಾರರಿಗೆ ಎಲ್ಲಾ ರೀತಿ ಸಲಹೆ ನೀಡಲಾಗುವುದು. ● ಡಾ.ಬಿ.ರಘು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು

ತೆಂಗು ಬೆಳೆಗಾರರು ಇಂದು ಸಂಕಷ್ಟ ಅನುಭವಿಸುವ ಸ್ಥಿತಿ ಬಂದಿದೆ. ಒಂದು ಕಡೆ ಕೊಬ್ಬರಿ ಬೆಲೆ ಕುಸಿತ ಇನ್ನೊಂದು ಕಡೆ ನಾವು ನಿರೀಕ್ಷಿಸುವಷ್ಟು ಮಳೆಯಿಲ್ಲ. ಜೊತೆಗೆ ತೆಂಗಿನ ಮರಗಳಿಗೆ ರಸಸೋರುವ ರೋಗ, ಅಣಬೆ ರೋಗ ಕಾಣಸಿಕೊಂಡಿದೆ ಇದರಿಂದ ಸಂಕಷ್ಟ ಎದುರಾಗಿದೆ. ● ಹಾಗಲವಾಡಿ ಮಹೇಶ್‌, ತೆಂಗು ಬೆಳೆಗಾರ

– ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

ಸರಕಾರಿ ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Government: ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Social-Media

Social Networks Use: ಸಾಮಾಜಿಕ ಜಾಲತಾಣ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಡಿವಾಣ!

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

Mahalaya

Mahalaya Shraddha: ಋಣಮುಕ್ತಗೊಳಿಸಿ, ವಂಶವನ್ನು ಬೆಳಗಿಸುವ ಮಹಾಲಯ ಕಾರ್ಯ

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

GRUHALAKHMI

Congress Guarantee: ರಾಜ್ಯದ 1.82 ಲಕ್ಷ ಗೃಹಲಕ್ಷ್ಮೀಯರಿಗೆ ಇನ್ನೂ 1 ಕಂತೂ ಸಿಕ್ಕಿಲ್ಲ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal

Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ

V.-Somanna

Railway Development: ರಾಜ್ಯದಲ್ಲಿ ರೈಲ್ವೇ ಕ್ರಾಂತಿಗೆ ಬದ್ಧ: ಕೇಂದ್ರ ಸಚಿವ ಸೋಮಣ್ಣ

1-cantar

Kunigal; ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಮೃ*ತ್ಯು

12-madhugiri

Tumkur:ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಬಿದ್ದು ಆತ್ಮಹತ್ಯೆ

9-koratagere

Koratagere: ನರೇಗಾ ಕಾಮಗಾರಿ ಹಣ ದುರುಪಯೋಗ, ಗ್ರಾ.ಪಂ. ಪಿಡಿಓ ಅಮಾನತು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

ಸರಕಾರಿ ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Government: ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

Social-Media

Social Networks Use: ಸಾಮಾಜಿಕ ಜಾಲತಾಣ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಡಿವಾಣ!

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

Mahalaya

Mahalaya Shraddha: ಋಣಮುಕ್ತಗೊಳಿಸಿ, ವಂಶವನ್ನು ಬೆಳಗಿಸುವ ಮಹಾಲಯ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.