ಗ್ರಾಮಗಳ ಅಭಿವೃದ್ಧಿಗೆ ಬದ್ಧ
ದೊಡ್ಡಯಲ್ಕೂರಿನಲ್ಲಿ ಕಾಮಗಾರಿಗೆ ಶಾಸಕ ವೀರಭದ್ರಯ್ಯ ಚಾಲನೆ
Team Udayavani, Aug 16, 2019, 4:25 PM IST
ಮಧುಗಿರಿಯ ದೊಡ್ಡಯಲ್ಕೂರಿನಲ್ಲಿ 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ ವೀರಭದ್ರಯ್ಯ ಹಾಗೂ ಮುಖಂಡರು ಚಾಲನೆ ನೀಡಿದರು.
ಮಧುಗಿರಿ: ಗ್ರಾಮಗಳ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು. ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ದೊಡ್ಡ ಯಲ್ಕೂರು ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದ ಸರ್ವತೋಮುಖ ಅಭಿವೃದ್ಧಿ: ಈ ಕಾಮಗಾರಿಯನ್ನು ಹಿಂದೆಯೇ ಮಾಡಿದ್ದು, ಮತ್ತೆ ಮಾಡು ತ್ತಿದ್ದಾರೆಂಬ ಪ್ರತಿಪಕ್ಷದವರ ಟೀಕೆಗೆ ಉತ್ತರಿಸಿದ ಶಾಸಕರು, ಇಂತಹ ಕೆಲಸ ನನ್ನ ಪಕ್ಷದ ಕಾರ್ಯಕರ್ತರಿಗಷ್ಟೇ ಅಲ್ಲ. ಅವರು ಹಿಂದೆ ಗ್ರಾಮದಲ್ಲಿ ನಮ್ಮ ಪಕ್ಷದವರ ಮನೆಯ ಮುಂದೆ ಸಿಸಿ ರಸ್ತೆ ಮಾಡದೆ ಕೆಟ್ಟ ರಾಜಕೀಯ ಮಾಡಿದ್ದರು. ಆದರೆ ಹಿಂದೆ ಬಿಟ್ಟಿದ್ದ ಸಿಸಿ ರಸ್ತೆಯನ್ನು ಈ ಕಾಮಗಾರಿಯಲ್ಲಿ ಸೇರಿಸಿದ್ದೇವೆ. ನಾನೂ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವಂತೆ ತಿಳಿಸಿ ದ್ದೇನೆ. ನನ್ನಲ್ಲಿ ಅಭಿವೃದ್ಧಿ ವಿಚಾರ ದಲ್ಲಿ ರಾಜಕೀಯವಿಲ್ಲ. ಕಳಪೆ ಹಾಗೂ ನಕಲಿ ಕಾಮಗಾರಿಗೆ ನನ್ನ ಅವಧಿಯಲ್ಲಿ ಅವ ಕಾಶವಿಲ್ಲ. ಹಿಂದೆ ಅನಿತಾ ಕುಮಾರ ಸ್ವಾಮಿ ಕಾಲದಲ್ಲಿ ಅನುದಾನ ಬಿಡುಗಡೆ ಯಾಗಿದ್ದು, ಹಿಂದಿನ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದರು. ಆದ ರಂತೆ ನಾನೂ ಅದರಲ್ಲಿ ತಪ್ಪು ಹುಡುಕು ವವರು ರಾಜಕೀಯ ಇಚ್ಛಾಶಕ್ತಿಯಿಲ್ಲದ ವರು ಎಂದು ಕಾಂಗ್ರೆಸ್ ಮುಖಂಡರನ್ನು ಕುಟುಕಿದರು.
ಕಾಮಗಾರಿ ಪಾರದರ್ಶಕ: ಜಿಲ್ಲಾ ಪಂಚಾಯಿತಿ ಸದಸ್ಯ ಕಾಂಗ್ರೆಸ್ ಮುಖಂಡ ಕೆಂಚಮಾರಯ್ಯ ಮಾತ ನಾಡಿ, ಒಂದು ಗ್ರಾಮದ ಸರ್ವತೋ ಮುಖ ಅಭಿವೃದ್ಧಿಯೇ ಈ ಯೋಜ ನೆಯ ಮೂಲ ಉದ್ದೇಶ. ಕಾಮಗಾರಿ ಎಲ್ಲವೂ ಪಾರದರ್ಶಕವಾಗಿ ನಡೆಯ ಲಿದೆ. ಯಾರೂ ಇಂತವರ ಮಾತಿಗೆ ಕಿವಿ ಗೊಡಬಾರದು. ಗ್ರಾಮದ ಅಭಿ ವೃದ್ಧಿಯೇ ಮುಖ್ಯವಾಗಿದೆ. ಏರಿ ಮೇಲೆ ನಿಂತು ಪ್ರಚಾರ ಪಡೆಯುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸ್ವಪಕ್ಷದ ಕೆಲ ಮುಖಂಡರಿಗೆ ಟಾಂಗ್ ನೀಡಿದರು. ತಹಶೀಲ್ದಾರ್ ನಂದೀಶ್, ತಾಪಂ ಇಒ ದೊಡ್ಡಸಿದ್ದಯ್ಯ, ಮಾಜಿ ಜಿ.ಪಂ.ಸದಸ್ಯ ವೆಂಕಟರಂಗಾರೆಡ್ಡಿ, ಗ್ರಾ.ಪಂ.ಸದಸ್ಯ ಅಂಜನಮೂರ್ತಿ, ಡೇರಿ ಅಧ್ಯಕ್ಷ ಕೃಷ್ಣಮೂರ್ತಿ, ಜೆಡಿಎಸ್ ಹೋಬಳಿ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ರಾಜ್‌ಮೋಹನ್, ಸತೀಶ್, ಚಂದ್ರಣ್ಣ, ರಿಜ್ವಾನ್, ಜಬೀ, ಸಿದ್ದಪ್ಪ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.