ಕೊಟ್ಟ ಭರವಸೆ ಈಡೇರಿಸಿದ ಸರ್ಕಾರ ನಮ್ಮದು
Team Udayavani, Oct 24, 2020, 4:46 PM IST
ಬರಗೂರು: ನಾನು ಸರ್ಕಾರದಲ್ಲಿ ಮಜಾ ಮಾಡಿಕೊಂಡಿರಲಿಲ್ಲ. 5 ವರ್ಷಗಳ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ 65 ಭರವಸೆಗಳನ್ನು ಈಡೇರಿಸಿದಂತ ಸರ್ಕಾರ ಇದ್ದರೆ ಕರ್ನಾಟಕದ ಇತಿಹಾಸದಲ್ಲಿ ಅದು ಸಿದ್ಧರಾಮಯ್ಯ ಕಾಂಗ್ರೆಸ್ ಸರ್ಕಾರ ಎಂಬುದನ್ನು ಹೆಗ್ಗಳಿಕೆಯಿಂದ ಹೇಳಲು ಬಯಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಶಿರಾ ತಾಲೂಕು ಬರಗೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ ಉಪಚುನಾವಣಾ ಪ್ರಚಾರದ ವೇಳೆ ರೋಡ್ ಶೋ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಆರ್.ಆರ್.ನಗರ ಹಾಗೂ ಶಿರಾ ತಾಲೂಕಿನ ಎರಡು ಕಡೆ ಉಪಚುನಾವಣೆ ನಡೆಯುತ್ತಿದೆ. ಆರ್. ಆರ್.ನಗರದಲ್ಲಿ ನಮ್ಮದೇ ಪಕ್ಷದಲ್ಲಿದ್ದ ಮುನಿರತ್ನ ಪಕ್ಷಕ್ಕೆ ದ್ರೋಹ ಬಗೆದು, ಚೂರಿ ಹಾಕಿ, ಯಡಿಯೂರಪ್ಪರ ಆಪರೇಷನ್ ಕಮಲಕ್ಕೆ ಬಲಿಯಾಗಿ ಪಕ್ಷ ಬಿಟ್ಟು ರಾಜೀನಾಮೆ ಕೊಟ್ಟು ಹೋದರು ಎಂದು ಕಿಡಿಕಾರಿದರು.
ಶಿರಾದಲ್ಲಿ ಸತ್ಯನಾರಾಯಣರ ನಿಧನದಿಂದಾಗಿಚುನಾವಣೆ ನಡೆಯುತ್ತಿದೆ. ಜಯಚಂದ್ರ ಕಳೆದ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಜೆಡಿಎಸ್, ಬಿಜೆಪಿ ಪಕ್ಷಗಳ ಅಪ ಪ್ರಚಾರದಿಂದ ಸೋತರು.ನನ್ನನ್ನೂ ಸಹ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಪಪ್ರಚಾರ ಮಾಡಿ ನಾನುಮುಖ್ಯಮಂತ್ರಿಯಾಗುತ್ತೇನೆಂಬ ಅಸೂಯೆಯಿಂದ ಸೋಲಿಸಿದರು ಎಂದರು.
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಒಂದೇಗಂಟೆಯಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದೆ. ಕೂಲಿ ಮಾಡುವವರ ಕಷ್ಟ, ಜಮೀನು ಇಲ್ಲದೇ ಇರುವವರ ಕಷ್ಟ, ಒಂದೊತ್ತು ಊಟಕ್ಕೂ ಗತಿ ಇಲ್ಲದವರ ಕಷ್ಟಗಳನ್ನು ಅರಿತು ಈ ನಿರ್ಧಾರಕ್ಕೆ ಬಂದೆ. ಮುಂದೆಯೂ ಕೂಡ ಎರಡೊತ್ತು ಊಟ ಮಾಡಲೇಬೇಕು. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡಬೇಕೆಂದು 7 ಕೆ.ಜಿ ಅಕ್ಕಿ ಉಚಿತವಾಗಿ ಕೊಟ್ಟ ಮೊದಲ ಸರ್ಕಾರ ನಮ್ಮದು. ಅದನ್ನು ಇಂದಿನ ಯಡಿಯೂರಪ್ಪ ಸರ್ಕಾರ5 ಕೆ.ಜಿ.ಗೆ ಇಳಿಸಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಕಳೆದ 70 ವರ್ಷಗಳಿಂದ ಹಲವು ಶಾಸಕರು ಬಂದು ಹೋಗಿದ್ದಾರೆ. ನನ್ನ ಹತ್ತು ವರ್ಷಗಳ ಅವಧಿಯಲ್ಲಿ ಅನೇಕ ಸಾಕ್ಷಿ ಗುಡ್ಡಗಳು ತಲೆ ಎತ್ತಿವೆ. ಭದ್ರಾ ಮೇಲ್ದಂಡೆ ಯೋಜನೆಗೆ ಆರೂವರೆ ಸಾವಿರ ಕೋಟಿ ಆದರೂ ಸರಿ ಜಯಚಂದ್ರರಿಗೆ ದುಡ್ಡು ತರುವುದು ಗೊತ್ತು. ಖರ್ಚು ಮಾಡುವುದೂ ಗೊತ್ತು ಕಾಮಗಾರಿಗೆ ಮಂಜೂರಾತಿ ನೀಡಿದ ದಾರಾಳ ಮುಖ್ಯಮಂತ್ರಿ ಸಿಗದೇ ಇದ್ದಿದ್ದರೆ ಭದ್ರಾ ಮೇಲ್ದಂಡೆ ನೀರು ಕನಸಾಗುತ್ತಿತ್ತು. ಉಳಿದ ಎರಡು ವರ್ಷಗಳಲ್ಲಿ ನೀರಾವರಿ ಕಾಮಗಾರಿಗಳನ್ನು ಮುಗಿಸ ಬೇಕಾದರೆ ಮತ್ತೂಮ್ಮೆ ಶಿರಾ ತಾಲೂಕಿನ ಜನತೆ ನನ್ನನ್ನು ಗೆಲ್ಲಿಸಿ ವಿರೋಧ ಪಕ್ಷದ ಸಾಲಿನಲ್ಲಿ ಕೂತು ಹೋರಾಟ ಮಾಡುವ ಶಕ್ತಿ ಕೊಡಬೇಕೆಂದು ಮನವಿ ಮಾಡಿದರು.
ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವರಾದ ಉಮಾಶ್ರೀ, ತಿಮ್ಮಾಪುರ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜು, ಕಾಂಗ್ರೆಸ್ ಯುವ ಮುಖಂಡ ಬಿ.ಹಲುಗುಂಡೇಗೌಡ, ಕಲ್ಕೆರೆ ರವಿಕುಮಾರ್, ಬಿ.ಎಸ್.ನಾಗಭೂಷಣ್, ಶ್ರೀನಿವಾಸ್ ,ದೊಡ್ಡಬಾಣಗೆರೆ ಸಿ.ರಾಮಕೃಷ್ಣಪ್ಪ, ಬಿ.ಸಿ.ಸತೀಶ್, ಹಾರೋಗೆರೆ ಮಹೇಶ್, ದಾಸರಹಳ್ಳಿ ಶ್ರೀನಿವಾಸ್‌ಗೌಡ, ಲತೀಫ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.