ನ್ಯಾಯಯುತ ಪರಿಹಾರ ನೀಡಲು ಆಗ್ರಹ
Team Udayavani, Mar 9, 2022, 2:28 PM IST
ತಿಪಟೂರು: ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ಮನೆ, ನಿವೇಶನ, ಜಮೀನುಗಳನ್ನು ಕಳೆದುಕೊಂಡಭೂ ಸಂತ್ರಸ್ತರಿಗೆ ಕಳೆದ ಆರು ವರ್ಷಗಳಿಂದಲೂಸೂಕ್ತ ಪರಿಹಾರ ನೀಡದೆ ಸತಾಯಿಸುತ್ತಿದ್ದು, ಪರಿಹಾರಕೊಡುವವರೆಗೂ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಹೇಳಿದರು.
ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಭೂಸಂತ್ರಸ್ತರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ತುಮಕೂರಿನಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಾರಂಭಗೊಂಡಿದ್ದು, ಇದರಿಂದನೂರಾರು ರೈತರು ತಮ್ಮ ಜಮೀನು, ಮನೆ, ಅಂಗಡಿ ಮಳಿಗೆಗಳನ್ನು ಕಳೆದುಕೊಂಡಿದ್ದಾರೆ. ಆದರೆ ಆರುವರ್ಷಗಳಿಂದ ನೋಟಿಸ್ ನೀಡಿದ್ದು, ಬಿಟ್ಟರೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.ಭೂ ಕಾಯ್ದೆ ಪ್ರಕಾರ ಭೂಮಿ ಕಳೆದುಕೊಂಡವರಿಗೆಒಂದು ವರ್ಷದೊಳಗೆ ಪರಿಹಾರ ನೀಡಬೇಕು. ಆದರೆ ಇಷ್ಟು ವರ್ಷಗಳಾದರೂ ಜಿಲ್ಲಾಧಿಕಾರಿಗಳಾಗಲಿ, ಸರ್ಕಾರವಾಗಲಿ ಯಾವುದೇ ಪರಿಹಾರ ನೀಡಲುಕ್ರಮ ಕೈಗೊಳ್ಳದೆ ರೈತರ ಜೀವನವನ್ನು ಸಂಕಷ್ಟಕ್ಕೀಡು ಮಾಡಿದೆ.
ಉಡಾಫೆ ಉತ್ತರ: ಭೂಮಿಯನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರ ಗಗನ ಕುಸುಮವಾಗಿದ್ದು, ಸರ್ಕಾರ ಕಣ್ಣೊರೆಸುವ ಕೆಲಸ ಬಿಟ್ಟು ನ್ಯಾಯಯುತಪರಿಹಾರ ನೀಡಬೇಕು. ಸಂಬಂಧಪಟ್ಟ ಇಲಾಖೆಗಳಿಗೆಪ್ರತಿನಿತ್ಯ ಅಲೆಯುವಂತಾಗಿದ್ದು, ಅಧಿಕಾರಿಗಳಉಡಾಫೆ ಉತ್ತರದಿಂದ ರೈತರು ಬೇಸತ್ತಿದ್ದಾರೆ. ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿ ಸರ್ವೆಮಾಡಿ ಕೈಚೆಲ್ಲಿ ಕುಳಿತಿದ್ದು, ಇತ್ತ ಮನೆ ಇಲ್ಲದೇಬೀದಿಯಲ್ಲಿ ಜೀವನ ನಿರ್ವಹಿಸುವಂತಾಗಿದೆ ಎಂದು ದೂರಿದರು.
ಭೂಮಿಯಲ್ಲಿ ಬೆಳೆ ಬೆಳೆಯಲು ಆಗುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಲೋನ್ ತೆಗೆದುಕೊಳ್ಳಲು ಹೋದರೆಭೂಮಿ ನೋಟಿಫಿಕೇಷನ್ ಆಗಿದೆ ಎಂದುಹೇಳುತ್ತಾರೆ. ಇದರಿಂದ ಭೂಮಿ ಇದ್ದೂಇಲ್ಲದಂತಾಗಿದೆ ಎಂದರು.
ಹೋರಾಟ ಎಚ್ಚರಿಕೆ: ತುಮಕೂರು, ಶಿವಮೊಗ್ಗ ಮತ್ತಿತರ ಎಲ್ಲಾ ಕಡೆಗಳಲ್ಲಿ ಈಗಾಗಲೇ ಪರಿಹಾರ ನೀಡಲಾಗಿದೆ. ಈ ಭಾಗದ ರೈತರನ್ನು ಜನಪ್ರತಿನಿಧಿಗಳುಏಕೆ ಕಡೆಗಣಿಸುತ್ತಿದ್ದಾರೆಂದು ತಿಳಿಯುತ್ತಿಲ್ಲ.ಭೂಸ್ವಾಧೀನ ಮಾಡಿ ರೈತರಿಗೆ ನೋಟಿಸ್‌ನೀಡಿದಾಗಿನಿಂದಲೂ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಾ ಬಂದಿದ್ದರೂ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರನ್ನುಒಗ್ಗೂಡಿಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭೂಮಿ ಕಳೆದುಕೊಂಡಸಂತ್ರಸ್ತರಾದ ಲಕ್ಷ್ಮೀಶ್, ಶಶಿಧರ್, ದೇವರಾಜು, ಪ್ರಕಾಶ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಂತ್ರಸ್ತರು ಭಾಗವಹಿಸಿ ತಮ್ಮ ನೋವು ತೋಡಿಕೊಂಡರು.
ಕಚೇರಿಗೆ ಅಲೆದಾಟ : ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜುಮಾತನಾಡಿ, ಭೂಮಿ ಸರ್ವೆ ಮಾಡಿ ಆರು ವರ್ಷಗಳಾದರೂ ಪರಿಹಾರ ನೀಡಿಲ್ಲ.ಇಲಾಖೆಗಳಿಗೆ ಅಲೆದು ಅಲೆದು ಸಾಕಾಗಿದೆ.ನಿಟ್ಟೂರು, ಮಲ್ಲಸಂದ್ರ ಭಾಗದಲ್ಲಿ ಪರಿಹಾರನೀಡಲಾಗಿದೆ. ಈ ಭಾಗದ ಜನರಿಗೆ ಅನ್ಯಾಯಮಾಡುತ್ತಿದ್ದು, ಇದೇ ರೀತಿ ಮುಂದುವರಿದರೆಸಾವಿರಾರು ರೈತರ ಜೊತೆಗೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಜೀವನ ನಿರ್ವಹಣೆ ಹೇಗೆ? :
ಜಿಪಂ ಮಾಜಿ ಸದಸ್ಯ ಪಂಚಾಕ್ಷರಿ ಮಾತನಾಡಿ, ಭೂಮಿ ಕೊಡಲು ನಾವೇನು ತಕರಾರು ಮಾಡಿಲ್ಲ, ಸರ್ಕಾರ ನೀಡಿದ ಬೆಲೆಗೆ ನಮ್ಮ ಭೂಮಿಯನ್ನು ನೀಡುತ್ತಿದ್ದೇವೆ. ಭೂಮಿ ಕೊಟ್ಟರೂ ಹಣ ಕೊಡದಿದ್ದರೆ ಜೀವನ ನಿರ್ವಹಿಸುವುದು ಹೇಗೆ? ಸರ್ಕಾರ,ಜನಪ್ರತಿನಿಧಿಗಳು ಹಾಗೂ ಭೂಸ್ವಾಧೀನಾಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ರಸ್ತೆಯಲ್ಲಿಕುಳಿತು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಗಳನ್ನೇ ಸ್ಥಳಕ್ಕೆ ಕರೆಯಿಸುತ್ತೇವೆಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.