ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಗೆ ಗ್ರಾಮಾಭಿವೃದ್ದಿ ಯೋಜನೆಯಿಂದ ಮನೆ ನಿರ್ಮಾಣ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಗ್ರಾಮಸ್ಥರ ಸಹಕಾರ
Team Udayavani, Jan 8, 2023, 8:31 PM IST
ಕೊರಟಗೆರೆ: ತಾಲೂಕಿನ ಸಿ.ಎನ್ ದುರ್ಗಾ ಹೋಬಳಿಯ ಅಗ್ರಹಾರ ಗ್ರಾ.ಪಂ ನ ಅಜ್ಜಿಹಳ್ಳಿ ಗ್ರಾಮದಲ್ಲಿ ಅತೀ ದುರ್ಬಲ ಮತ್ತು ಅಸಹಾಯಕ ಸ್ಥಿತಿಯಲ್ಲಿ ಮತ್ತು ಕುಟುಂಬ ಸದಸ್ಯರು ಯಾರೂ ಇಲ್ಲದ ಒಬ್ಬಂಟಿಯಾಗಿ ವಾಸವಿರುವ ದೊಡ್ಡಕ್ಕ ಎಂಬುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಗ್ರಾಮಸ್ಥರ ವತಿಯಿಂದ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮೊದಲಿಗೆ ವೈಯಕ್ತಿಕ ಸಮೀಕ್ಷೆ ನಡೆಸಿದಾಗ 50 ಕುಟುಂಬಗಳು ಬೆಳಕಿಗೆ ಬಂದವು. ನಂತರ ನಿರ್ಗತಿಕರು , ಅಸಹಾಯಕರು ಎಂಬ ಸಮೀಕ್ಷೆ ಮಾಡಿದಾಗ 20,000 ಕುಟುಂಬಗಳು ಸಮಸ್ಯೆಗಳಿಂದ ಇದ್ದವು. ಅದನ್ನು ಗಮನಿಸಿದ ಮಾತೃ ಶ್ರೀ ಅಮ್ಮನವರು ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಅನೇಕ ಸಹಾಯ ಮಾಡಲು ಆರಂಭಿಸಿದರು. ಈ ವರ್ಷದಲ್ಲಿ ರಾಜ್ಯಾದ್ಯಂತ ಸುಮಾರು 1000 ಮನೆಗಳನ್ನು ನಿರ್ಮಾಣ ಮಾಡಬೇಕು ಎಂಬ ಸಲಹೆಯನ್ನು ಮಾತೃ ಶ್ರೀ ಯವರು ಸಲಹೆ ನೀಡಿದರು. ಇದಕ್ಕಾಗಿ ಸುಮಾರು 10 ಕೋಟಿ ರೂ ಹಣವನ್ನು ವಿನಿಮಯ ಮಾಡಲು ಮಾರ್ಗದರ್ಶನ ನೀಡಿದ್ದಾರೆ. ಅದೇ ರೀತಿ ತಾಲೂಕಿನ ಅಜ್ಜಿಹಳ್ಳಿಯ ದೊಡ್ಡಕ್ಕ ಎಂಬುವವರು ಬಹಳ ಸಮಸ್ಯೆಯಿಂದ ಇದ್ದರು. ಇದನ್ನು ಗಮನಿಸಿದ ನಮ್ಮ ಯೋಜನೆಯ ಜ್ಞಾನ ವಿಕಾಸ ಸಮನ್ವಯಾಧಿಕಾರಿಯವರು ಗಮನಿಸಿ ಪೂಜ್ಯರಿಗೆ ಮತ್ತು ಮಾತೃಶ್ರೀಯವರಿಗೆ ವರದಿಯನ್ನು ಒಪ್ಪಿಸಿ ಎಲ್ಲಾ ಗ್ರಾಮಸ್ಥರ ಸಹಕಾರದಿಂದ ವ್ಯವಸ್ಥಿತವಾದ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಅವರಿಗೆ ಹಸ್ತಾಂತರ ಮಾಡಿದ್ದೇವೆ.ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಸುಮಾರು 20.000 ಕುಟುಂಬಗಳನ್ನು ಗುರ್ತಿಸಿ ಅವರಿಗೆ 750 ರೂ ನಿಂದ 1000 ಸಾವಿರ ರೂ ವರೆಗೆ ಮಾಸಾಶನ ನೀಡುತ್ತಿದ್ದೇವೆ. ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಸುಮಾರು ಹತ್ತು ಸಾವಿರ ಮಂದಿಗೆ ವಿಲ್ ಚೇರ್ ಗಳನ್ನು ನೀಡಲಾಗಿದೆ.ವಾತ್ಸಲ್ಯ ಕಾರ್ಯಕ್ರಮ ದಡಿಯಲ್ಲಿ ಅತೀ ದುರ್ಬಲ ಮತ್ತು ಅಸಹಾಯ ಸ್ಥಿತಿಯಲ್ಲಿರುವ ಕುಟುಂಬದವರಿಗೆ ಚಾಪೆ , ಹೊದಿಕೆ , ಪಾತ್ರೆ ,ಬಟ್ಟೆ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ ಮಹಿಳೆಯರ , ರೈತರ , ಯುವಕ – ಯುವತಿಯರ ಸಬಲೀಕರಣಕ್ಕೆ ಪೂರಕವಾಗಿ ಸಂಸ್ಥೆಯು ಕೆಲಸ ಮಾಡುತ್ತಿದೆ.ಕೊರಟಗೆರೆ ತಾಲೂಕಿನಲ್ಲಿ 2300 ಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳು ಚಾಲ್ತಿಯಲ್ಲಿವೆ. ಸುಮಾರು 16000 ಸದಸ್ಯರಿದ್ದು ಇವರು ಜೀವನ ಮಟ್ಟದಲ್ಲಿ ಸುಧಾರಣೆಯಾಗಲು ಸ್ವಾಭಿಮಾನಿಗಳಾಗಿ ಮತ್ತು ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳಲು ಪೂಜ್ಯ ಶ್ರೀ ಮತ್ತು ಮಾತೃಶ್ರೀಯವರು ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಒಳ್ಳೆಯ ಸಮಾಜ ಸೇವೆಗಳನ್ನು ಮಾಡಿಕೊಂಡು ಬರುತ್ತಿದೆ. ನಮ್ಮ ಅಜ್ಜಿಹಳ್ಳಿ ಗ್ರಾಮದಲ್ಲಿ ದೊಡ್ಡಕ್ಕ ಎಂಬುವವರಿಗೆ ಯಾರು ಇಲ್ಲದಿರುವುದರಿಂದ ಸುಮಾರು ದಿನಗಳಿಂದ ಮಳೆ , ಗಾಳಿ , ಬಿಸಿಲು ಲೆಕ್ಕಿಸದೇ ಪೆಟ್ಟಿಗೆ ಅಂಗಡಿಯಲ್ಲಿ ವಾಸವಾಗಿದ್ದರು.ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಗ್ರಾಮಸ್ಥರ ವತಿಯಿಂದ ಸುಮಾರು 1.20.000 ರೂ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿ ಅವರಿಗೆ ಹಸ್ತಾಂತರ ಮಾಡಲಾಯಿತು.
ನನಗೆ ಕೆಲಸ ಮಾಡಲು ಆಗುವುದಿಲ್ಲ. ನನಗೆ ಕಿವಿ ಕೇಳಿಸುವುದಿಲ್ಲ ಸ್ವಾಮಿ ನನಗೆ ಯಾರು ಇಲ್ಲ. ನನಗೆ ಎಲ್ಲಾ ನೀವೆ. ನನಗೆ ನಿರ್ಮಿಸಿ ಕೊಟ್ಟಂತಹ ಪೂಜ್ಯರಿಗೆ ಮತ್ತು ಮಾತೃ ಶ್ರೀ ಅಮ್ಮನವರಿಗೆ ಹಾಗೂ ಗ್ರಾ.ಪಂ ಯವರಿಗೆ ಧನ್ಯವಾದಗಳು.—ದೊಡ್ಡಕ್ಕ ಅಜ್ಜಿಹಳ್ಳಿ ಗ್ರಾಮ.
ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕ ಶೀನಪ್ಪ , ಜಿಲ್ಲಾ ನಿರ್ದೇಶಕ ದಿನೇಶ್ , ಪ್ರಾದೇಶಿಕ ಸಮನ್ವಯಧಿಕಾರಿ ದೀಪಾ , ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ , ಒಕ್ಕೂಟದ ಅಧ್ಯಕ್ಷ ಪುಟ್ಟರಾಜು , ತಾಲೂಕಿನ ಸಮನ್ವಯಾಧಿಕಾರಿ ಶೃತಿ ,ಗ್ರಾ.ಪಂ ಅಧ್ಯಕ್ಷ ರತ್ನಮ್ಮ ರಮೇಶ್ ,ಗ್ರಾ.ಪಂ ಸದಸ್ಯ ಪುಷ್ಪ ರವಿಕುಮಾರ್ , ವಲಯ ಮೇಲ್ವಿಚಾರಕ ರವೀಂದ್ರ ಮತ್ತು ಸ್ಥಳೀಯರು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ:ಜೆಟ್ಟಿ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಅಜ್ಜಿಹಳ್ಳಿ ಗ್ರಾಮದ ಒಂಟಿಯಾಗಿ ವಾಸವಾಗಿರುವ ಮಹಿಳೆ ದೊಡ್ಡಕ್ಕ ರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಜಿಲ್ಲಾ ನಿರ್ದೇಶಕ ದಿನೇಶ್ ಹಾಗೂ ತಾಲೂಕು ನಿರ್ದೇಶಕ ಬಾಲಕೃಷ್ಣ ರವರು ಮನೆ ಹಸ್ತಾಂತರ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.