ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕು: ಸಿದ್ಧಗಂಗಾ ಸ್ವಾಮೀಜಿ
Team Udayavani, Mar 15, 2022, 1:34 PM IST
ತುಮಕೂರು: ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕು. ಪೂರ್ಣಪೀಠದ ಆದೇಶ ಬಂದಿದೆ. ಯಾವುದೆ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದೆ ಶಾಂತಿಯುತ ವಾತಾವರಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಸಿದ್ಧಗಂಗಾಮಠಾಧ್ಯಕ್ಷ ಶ್ರೀ ಸಿದ್ಧಗಂಗಾ ಸ್ವಾಮೀಜಿ ಹೇಳಿದರು.
ಹೈಕೋರ್ಟ್ ತೀರ್ಪಿನ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀರ್ಘ ಚರ್ಚೆ, ವಾದ ಪ್ರತಿವಾದ ಆಲಿಸಿ ಕೋರ್ಟ್ ಇಂದು ಮಹತ್ವದ ತೀರ್ಪು ಕೊಟ್ಟಿದೆ. ಕಳೆದ 15 ದಿನಗಳ ಕಾಲ ಸಮಯವಕಾಶದ ನಂತರ ಇವತ್ತು ತೀರ್ಪು ಪ್ರಕಟವಾಗಿದೆ. ಸರ್ಕಾರ ಹೊರಡಿಸಿದ ವಸ್ತ್ರ ಸಂಹಿತೆ ಕಾನೂನು ಪಾಲನೆ ಮಾಡಬೇಕು ಎಂದು ತೀರ್ಪು ಕೊಟ್ಟಿದೆ ಎಂದಿದ್ದಾರೆ.
ಇದನ್ನೂ ಓದಿ:ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ: ಪ್ರಧಾನಿ ಮೋದಿ ಘೋಷಣೆ
ಶಿಸ್ತು ನಿಯಮ ಪಾಲನೆ ಮಾಡಿ ಕರ್ನಾಟಕದ ಸಂಸ್ಕೃತಿ ಪರಂಪರೆ ಎತ್ತಿ ಹಿಡಿದು ಶಾಂತಿಯುತವಾಗಿರಬೇಕು. ಶಾಲೆ ಎಂದಮೇಲೆ ಎಲ್ಲರೂ ಪ್ರೀತಿ ವಿಶ್ವಾಸ ದಿಂದ ಇರಬೇಕು. ಯಾವುದೇ ಕಾರಣಕ್ಕೂ ಬೆರೆಯದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸ್ವಾಮೀಜಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.