ಜಿಲ್ಲೆಯ ಮೊದಲ ಬಲಿಗೆ ಬೆಚ್ಚಿ ಬಿದ್ದ ಜನತೆ
Team Udayavani, Mar 28, 2020, 3:38 PM IST
ತಿಪಟೂರು: ತುಮಕೂರು ಜಿಲ್ಲೆಯಲ್ಲಿ ಕೋವಿಡ್ 19 ಮಹಾ ಮಾರಿಯಿಂದ ಶಿರಾ ಮೂಲದ ವ್ಯಕ್ತಿ ಮೊದಲ ಸಾವಿಗೆ ತಾಲೂಕಿನ ಜನರು ಸಹ ಭಯಭೀತರಾಗಿದ್ದಾರೆ.
ತಿಪಟೂರಿನ ವ್ಯಕ್ತಿ ಬಗ್ಗೆ ಶಂಕೆ: ಕೋವಿಡ್ 19 ಮಹಾಮಾರಿಗೆ ಬಲಿಯಾಗಿರುವ ಶಿರಾ ವ್ಯಕ್ತಿಯ ಜೊತೆ ತಿಪಟೂರಿನ ಗಾಂಧಿ ನಗರದ 53 ವರ್ಷದ ವ್ಯಕ್ತಿಯೊಬ್ಬರೂ ಸಹ ಓಡಾಡಿದ್ದರು ಎಂದು ಕೆಲ ಮಾಧ್ಯಮಗಳ ಸುದ್ದಿಯಂತೂ ತಿಪಟೂರಿನ ಜನತೆಗೆ ನುಂಗಲಾರದ ತುತ್ತಾಗಿದೆ. ಎಲ್ಲರ ಮೊಬೈಲ್‌ನಲ್ಲೂ ಇದೇ ಸುದ್ದಿಯ ತುಣುಕು, ಮಾತು. ಆದರೆ ತಾಲೂಕಿನ ಯಾವ ಅಧಿಕಾರಿಯೂ ದೃಢಪಡಿಸುತ್ತಿಲ್ಲದಿರುವುದು ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದ್ದರೂ ಈ ವ್ಯಕ್ತಿಯನ್ನು ತೀವ್ರ ನಿಗಾದಲ್ಲಿಟ್ಟಿದ್ದು ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.
ಗ್ರಾಮದೊಳಗೆ ಬರದಂತೆ ಬೇಲಿ: ತಾಲೂಕಿನ ಕೆಲ ಗ್ರಾಮ ಗಳಿಗೆ ಹೊರಗಿನವರು ಬಾರದಂತೆ ಮುಳ್ಳುಬೇಲಿ, ತಂತಿಬೇಲಿ, ಕಲ್ಲಿನ ಅಡ್ಡಗೋಡೆ ಇತರೆ ಕ್ರಮಗಳಿಂದ ತಡೆಯೊಡ್ಡಿದ್ದಾರೆ. ಈ ಬಗ್ಗೆ ಗ್ರಾಮದಲ್ಲೇ ಕೆಲವರಿಗೆ ಗೊಂದಲವಿದ್ದು ಕೆಲವರು ತಡೆ ಗೋಡೆ ನಿರ್ಮಿಸಿದ್ದು ಈ ಬಗ್ಗೆ ತಾಲೂಕು ಆಡಳಿತ ಎಚ್ಚೆತ್ತು ಸೂಕ್ತ ಕ್ರಮ ಜರುಗಿಸಬೇಕು.
ಗ್ರಾಮಗಳಲ್ಲಿ ತಿಳಿವಳಿಕೆ: ತಾಲೂಕು ಆಡಳಿತ, ಆರೋಗ್ಯ ಇಲಾಖೆಗಳು ತಾಲೂಕಿನ ವಿವಿಧ ಅಧಿಕಾರಿಗಳ ತಂಡ ರಚಿಸಿ ಪ್ರತಿ ಗ್ರಾಮಗಳಿಗೂ ಗ್ರಾಮ ಪಂಚಾಯಿತಿ ಪಿಡಿಒ ಜೊತೆ ಆರೋಗ್ಯ, ಶಿಕ್ಷಣ ಇತರೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಕೋವಿಡ್ 19 ಮಹಾಮಾರಿ ತಡೆಯ ಬಗ್ಗೆ ಪ್ರಮುಖ ತಿಳಿವಳಿಕೆ ನೀಡಲಾಗುತ್ತಿದ್ದು, ಗ್ರಾಮಗಳಲ್ಲಿ ಯಾವುದಾದರೂ ಅನುಮಾನಿತ ಸೋಕಿತರು ಇದ್ದರೆ ಮಾಹಿತಿ ಕಲೆಹಾಕಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.