ಯುಗಾದಿ ಸಂಭ್ರಮಕ್ಕೆ ಕೋವಿಡ್ 19 ಅಡ್ಡಿ
Team Udayavani, Mar 27, 2020, 3:33 PM IST
ತುಮಕೂರು: ಕೋವಿಡ್ 19 ಭೀತಿಗೆ ದೇಶ ಲಾಕ್‌ಡೌನ್ ಆಗಿದ್ದರೂ ಗುರುವಾರ ಕಲ್ಪತರು ನಾಡಿನ ಜನರು ಯುಗಾದಿಯ ಹೊಸತಡಕಿಗೆ ಮಾಂಸ, ಮೀನು ಕೊಳ್ಳಲು ಮಟನ್ ಸ್ಟಾಲ್ ಮುಂದೆ ಸಾಲು ಕಟ್ಟಿ ನಿಂತಿದ್ದರು.
ಯುಗಾದಿ ಮೊದಲ ದಿನ ಸಿಹಿ ಊಟ ಮಾಡಿ ಮಾರನೇ ದಿನ ಕಾರದ ಊಟ ಮಾಡುವುದು ರೂಢಿ. ಆದರೆ ಈ ಬಾರಿ ಹಬ್ಬದ ಸೊಬಗನ್ನು ಕೊರೊನಾ ಹಾಳು ಮಾಡಿದೆ. ಬಂದ್ ವಾತಾವರಣದಿಂದ ಹಬ್ಬದ ಸಂಭ್ರಮ ಮಾಯವಾಗಿದೆ. ಈ ನಡುವೆಯೂ ಜನರು ವರ್ಷ ತಡಕಿಗೆ ಜಿಲ್ಲೆಯಲ್ಲಿ ಮಾಂಸಾಹಾರ ಸೇವಿಸುವವರು ಮಟನ್ ಸ್ಟಾಲ್ ಮುಂದೆ ಸಾಲುಗಟ್ಟಿ ನಿಂತಿದ್ದರು. ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಅಕೋಳಿ ಅಂಗಡಿಗಳು ಬಂದ್ ಆಗಿರುವುದರಿಂದ ಮಟನ್ ಮತ್ತು ಮೀನು ಖರೀದಿಗೆ ಮುಗಿ ಬಿದ್ದರು. ಮಟನ್ ಬೆಲೆ 700 ರೂ. ಇದ್ದರೂ ಜನ ತಲೆ ಕೆಡಿಸಿಕೊಂಡಿರಲಿಲ್ಲ. ಅಂತರ ಕಾಪಾಡಿಕೊಂಡು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು.
ವಾಹನ ಸಂಚಾರ: ಲಾಕ್ ಡೌನ್ ಆದೇಶ ಪಾಲಿಸದೇ ಜನರು ವಾಹನಗಳಲ್ಲಿ ಸಂಚರಿಸುತ್ತಿದದ್ದು ಕಂಡುಬಂತು. ನಗರದ ರಿಂಗ್ ರಸ್ತೆ, ಗುಬ್ಬಿ ಗೇಟ್, ಕುಣಿಗಲ್ ರಸ್ತೆ, ಬಿ.ಎಚ್.ರಸ್ತೆ ಜಾಸ್ ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧ ರಸ್ತೆಗಳಲ್ಲಿ ಕಾರು, ಬೈಕ್‌ಗಳ ಸಂಚಾರ ಯಥಾಸ್ಥಿತಿ ಇತ್ತು. ಕೆಲವು ಕಡೆ ಪೊಲೀಸರಿಂದ ಕೆಲವರಿಗೆ ಲಾಠಿ ರುಚಿ ತೋರಿಸಲಾಯಿತು. ನಗರದ ಕ್ಯಾತ್ಸಂದ್ರ ಟೋಲ್‌ನಲ್ಲಿ ಪೊಲೀಸ್ ಭದ್ರತೆ ಇದ್ದರೂ ಬೆಂಗಳೂರಿನಿಂದ ಕಾರುಗಳಲ್ಲಿ ಜನ ಬರುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.