ಕೋವಿಡ್ 19 ವಾರಿಯರ‍್ಸ್‌ಗೆ ಸನ್ಮಾನ
Team Udayavani, Jun 12, 2020, 6:41 AM IST
ಕೊರಟಗೆರೆ: ದೇಶದ ಕೋಟ್ಯಂತರ ಜನ ಸಾಮಾನ್ಯರ ಆರೋಗ್ಯ ಭದ್ರತೆ ಮತ್ತು ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೋವಿಡ್ 19 ಸೈನಿಕರ ಗೌರವಿಸುವುದರ ಜೊತೆ ಸರ್ಕಾರದ ಆದೇಶ ಪಾಲನೆ ಮಾಡು ವುದು ನಮ್ಮ ಕರ್ತವ್ಯ ಎಂದು ಕೊರಟ ಗೆರೆ ಎಂಎನ್‌ಜೆ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥಗೌಡ ಹೇಳಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಮತ್ತು ಅರಸಾಪುರ ಗ್ರಾಪಂ ವ್ಯಾಪ್ತಿಯ ಕೋವಿಡ್ 19 ಸೈನಿಕರಿಗೆ ಕೊರಟಗೆರೆ ಎಂಎನ್‌ಜೆ ಗ್ರೂಪಿನಿಂದ ಏರ್ಪಡಿಸ ಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತ ನಾಡಿ, ನಮ್ಮ ಆರೋಗ್ಯ ರಕ್ಷಣೆಗಾಗಿ ಮನೆಯಲ್ಲಿ ಸುರಕ್ಷಿತವಾಗಿ ಇದ್ದೇವೆ. ಆದರೇ ಆರೋಗ್ಯ, ಪೊಲೀಸ್, ಕಂದಾಯ, ಗ್ರಾ ಪಂ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ತಂಡ ನಮ್ಮ ರಕ್ಷಣೆಗಾಗಿ ಹಗಲಿರುಳೂ ದುಡಿಯುತ್ತಿದ್ದಾರೆ ಎಂದರು.
ಭೈರೇನಹಳ್ಳಿ ವೈದ್ಯ ಡಾ.ಉಮೇಶ್ ಮಾತನಾಡಿ, ಜೀವದ ಭಯವನ್ನೇ ಲೆಕ್ಕಿ ಸದೇ ನಿರತರಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಗುರುತಿಸುವ ಕೆಲಸ ನಿಜವಾ ಗಿಯೂ ಸಂತಸ ತಂದಿದೆ. ಜನಸಾಮಾ ನ್ಯರು ಸರ್ಕಾರದ ಸಲಹೆ ಸೂಚನೆ ಪಾಲನೆ ಮಾಡಿ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕಾಗಿದೆ ಎಂದರು. ಪಿಡಿಒ, ಕಾರ್ಯದರ್ಶಿ, ಆಶಾಕಾರ್ಯಕರ್ತೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ 50ಕ್ಕೂ ಹೆಚ್ಚು ಕೋವಿಡ್ 19 ಸೈನಿಕರಿಗೆ ಛತ್ರಿ ಮತ್ತು ಮಹಿಳೆಯರಿಗೆ ಸೀರೆ ಉಡುಗೂರೆ ನೀಡಿ ಸನ್ಮಾನಿಸಿದರು.
ಬೈಚಾಪುರ ಗ್ರಾಪಂ ಸದಸ್ಯ ವೆಂಕಟಾ ರೆಡ್ಡಿ, ಎಎಸ್‌ಐ ಮಂಜುನಾಥ, ಅರಾಸ ಪುರ ಗ್ರಾಪಂ ಅಧ್ಯಕ್ಷೆ ಹನುಮಕ್ಕ, ಬೈಚಾ ಪುರ ಗ್ರಾಪಂ ಅಧ್ಯಕ್ಷೆ ಗಿರಿಯಮ್ಮ, ಸದಸ್ಯ ರಾದ ಹೊನ್ನಪ್ಪ, ವೆಂಕಟಾರೆಡ್ಡಿ, ವಿಎಸ್ ಎಸ್‌ಎನ್ ಅಧ್ಯಕ್ಷ ರಾಜಣ್ಣ, ರವಿಕುಮಾರ್, ನರಸಿಂಹಮೂರ್ತಿ, ನಾಗರಾಜು, ಅನಂತ ರಾಜು, ಅಕ್ಕಿಸ್ವಾಮಿ, ನವೀನ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.