ಕೋವಿಡ್‌ ವಿಷಯದಲ್ಲಿ ರಾಜಕೀಯ ಮಾಡಲ್ಲ


Team Udayavani, May 29, 2021, 7:50 PM IST

covid

ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಕಾರಣ ತಮ್ಮ ಕ್ಷೇತ್ರದಲ್ಲಿ ಶಾಸಕರು ಮಹಾಮಾರಿ ಕೊರೊನಾ ನಿಯಂತ್ರಿಸುವಲ್ಲಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದು, ಆಕ್ಸಿಜನ್‌ ಬೆಡ್‌, ಐಸೋಲೇಷನ್‌ವಾರ್ಡ್‌, ಕೋವಿಡ್‌ ಕೇರ್‌ ಸೆಂಟರ್‌, ಖಾಸಗಿ ಕೋವಿಡ್‌ ಆಸ್ಪತ್ರೆ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರಿಗೆ ಹೆಲ್ತ್‌ ಕಿಟ್‌, ನಿರ್ಗತಿಕರು, ಬಡವರಿಗೆ ದಿನಸಿ ಕಿಟ್‌ ವಿತರಿಸುವಮೂಲಕ ಆರ್ಥಿಕ ನೆರವಿಗೂ ಮುಂದಾಗಿದ್ದಾರೆ.

ಉದಯವಾಣಿ ಕಿರು ಸಂದರ್ಶನಲ್ಲಿ ಕೋವಿಡ್‌ ನಿಯಂತ್ರಣದ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕರು ಮಾಹಿತಿ ಹಂಚಿಕೊಂಡಿದ್ದಾರೆ

ಕುಣಿಗಲ್‌: ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವಕಾರಣ ತಮ್ಮ ಕ್ಷೇತ್ರದಲ್ಲಿ ಶಾಸಕರು ಮಹಾಮಾರಿಕೊರೊನಾ ನಿಯಂತ್ರಿಸುವಲ್ಲಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದು, ಆಕ್ಸಿಜನ್‌ ಬೆಡ್‌, ಐಸೋಲೇಷನ್‌ ವಾರ್ಡ್‌, ಕೋವಿಡ್‌ ಕೇರ್‌ಸೆಂಟರ್‌, ಖಾಸಗಿ ಕೋವಿಡ್‌ ಆಸ್ಪತ್ರೆ ಸೇರಿದಂತೆನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿಸೋಂಕಿತರಿಗೆ ಹೆಲ್ತ್‌ ಕಿಟ್‌, ಲಸಿಕೆ ಹಾಕಿಸಿಕೊಳ್ಳುವವರಿಗೆ ಅಗತ್ಯ ವ್ಯವಸ್ಥೆ, ಬ್ಲ್ಯಾಕ್‌ಫಂಗಸ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಆಸ್ಪತ್ರೆ ಹಾಗೂ ಚಿಕಿತ್ಸೆ ವ್ಯವಸ್ಥೆ ಸೇರಿದಂತೆ ಕೊರೊನಾಜಾಗೃತಿ ಮೂಡಿಸುತ್ತಿದ್ದು, ಇದರ ಜತೆಗೆನಿರ್ಗತಿಕರು, ಬಡವರಿಗೆ ದಿನಸಿ ಕಿಟ್‌ ಹಾಗೂಆರ್ಥಿಕ ನೆರವಿಗೂ ಮುಂದಾಗಿದ್ದು ಕೊರೊನಾತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕ ಡಾ.ಎಚ್‌.ಡಿ. ರಂಗನಾಥ್‌ ಉದಯವಾಣಿ ಕಿರುಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸೋಂಕು ನಿಯಂತ್ರಿಸುವ ಹಿನ್ನೆಲೆ ಸೋಂಕಿತರಚಿಕಿತ್ಸೆಗೆ ನೆರವಾಗುವಂತೆ ಮೂರು ಐಸಿಯು ಬೆಡ್‌ವುಳ್ಳ ಕಂಟೈನರ್‌ ಸಿದ್ಧವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವಮಾಧುಸ್ವಾಮಿ ಮೇಲೆ ಒತ್ತಡ ಏರಿಈ ವ್ಯವಸ್ಥೆ ಕಲ್ಪಿಸಿದ್ದೇನೆಂದು ಶಾಸಕರು ತಿಳಿಸಿದ್ದಾರೆ.

ಕೊರೊನಾ ಪರಿಸ್ಥಿತಿ ನಿಮ್ಮ ಕ್ಷೇತ್ರದಲ್ಲಿ ಹೇಗಿದೆ?

ಪರಿಸ್ಥಿತಿ ಸುಧಾರಿಸುತ್ತಿದೆ.ಸೋಂಕಿತರ ಸಂಖ್ಯೆ ಕಡಿಮೆ ಯಾಗುತ್ತಿದೆ. ಸೋಂಕಿ ನಿಂದ ಗುಣಮುಖರಾಗುತ್ತಿರುವವ ಸಂಖ್ಯೆಯೂ ಹೆಚ್ಚಾಗುತ್ತಿದೆ.ಮರಣ ಪ್ರಮಾಣ ಇಳಿಮುಖ ಆಗುತ್ತಿದೆ. ಸರ್ಕಾರದ ಸ್ಪಂದನೆ ಇಲ್ಲದ ಕಾರಣ ಇದು ನನಗೆ ತೃಪ್ತದಾಯಕವಾಗಿಲ್ಲ. ಕೋವಿಡ್‌ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಜನರ ಹಿತಾಸಕ್ತಿ ಮುಖ್ಯ. ಸೇವಾ ಕಾರ್ಯಕ್ಕೆ ಕಾಂಗ್ರೆಸ್‌ಕಾರ್ಯಕರ್ತರ ತಂಡ ರಚನೆ ಮಾಡಿದ್ದೇನೆ.

ಕೋವಿಡ್ಸಂಕಷ್ಟಕ್ಕೆ ಪರಿಹಾರ ಸಿಕ್ಕಿದೆಯೇ?

2ನೇ ಅಲೆ ತೀವ್ರ ಸ್ವರೂಪ ಪಡೆದು ನಿತ್ಯ ನೂರಾರು ಸೋಂಕಿತರು ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಆಕ್ಸಿಜನ್‌ ಬೆಡ್‌ಕೊರತೆ ಉಂಟಾಗಿತ್ತು. ಇದನ್ನುಭರಿಸುವಂತೆ ಸರ್ಕಾರಕ್ಕೆ ಹಾಗೂಜಿಲ್ಲಾಡಳಿತಕ್ಕೆ ಮನವಿಸಲ್ಲಿಸಲಾಗಿತ್ತು.

ಇದರ ಬಗ್ಗೆಸರ್ಕಾರದಿಂದಾಗಲಿ,ಜಿಲ್ಲಾಡಳಿತದಿಂದಾಗಲಿ ಯಾವುದೇಪರಿಹಾರ ಸಿಗಲಿಲ್ಲ. ಆಕ್ಸಿಜನ್‌ ಬೆಡ್‌ಗಾಗಿ ಆಸ್ಪತ್ರೆ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವಜಿ.ಸಿ.ಮಾಧುಸ್ವಾಮಿ ನಮ್ಮಲ್ಲಿ ಆಕ್ಸಿಜನ್‌ ಕೊರತೆ ಇದೆ, ಅದನ್ನುನೀವೆ ಮಾಡಿಕೊಳ್ಳಿ ಎಂದು ಹೇಳಿ ಕೈತೊಳೆದುಕೊಂಡರು. ತಾಲೂಕಿನ ಜನರ ಜೀವ ಉಳಿಸುವ ದಿಸೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 70ಆಕ್ಸಿಜನ್‌ ಬೆಡ್‌, ಸಪ್ತಗಿರಿ ಶಾಸಗಿ ಆಸ್ಪತ್ರೆಯಲ್ಲಿ 20ಆಕ್ಸಿಜನ್‌ ಬೆಡ್‌, ಶಾಮೀರ್‌ ಆಸ್ಪತ್ರೆಯಲ್ಲಿ 10ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಎಂ.ಎಂಆಸ್ಪತ್ರೆಯಲ್ಲಿ 30 ಆಕ್ಸಿಜನ್‌ ಬೆಡ್‌ ವ್ಯವಸ್ಥೆಗೆಮಾತುಕತೆ ನಡೆದಿದ್ದು, ಇದಕ್ಕೆ ಡಾ.ರವಿಕುಮಾರ್‌ಸಹಮತ ವ್ಯಕ್ತ ಪಡಿಸಿದ್ದಾರೆ.

ಕೋವಿಡ್ಆಸ್ಪತ್ರೆ, ಆರೈಕೆ ಕೇಂದ್ರಗಳಿಗೆ ಭೇಟಿಕೊಟ್ಟಿದ್ದೀರಾ?

ಹೌದು ಕೊಟ್ಟಿದ್ದೇನೆ, ನಿತ್ಯ ಆಸ್ಪತ್ರೆಗಳಿಗೂ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಕೋವಿಡ್‌  ಕೇರ್‌ಸೆಂಟರ್‌ಗಳಿಗೂ ಭೇಟಿ ಕೊಟ್ಟು ಮಾಹಿತಿ ಪಡೆಯುತ್ತಿದ್ದೇನೆ. ಗುಣಮಟ್ಟದ ಆಹಾರ ಪೂರೈಕೆ, ಸ್ವತ್ಛತೆ, ಮೂಲ ಸೌಕರ್ಯಕ್ಕೆ ಸೂಚನೆ ನೀಡಿದ್ದೇನೆ.ಸೋಂಕಿತರಿಗೆ ಚಿಕಿತ್ಸೆ ನೀಡಿ ಆತ್ಮಸ್ಥೈರ್ಯತುಂಬುತ್ತಿದ್ದೇನೆ. ವಾರಕ್ಕೊಮ್ಮೆ ಕೋವಿಡ್‌ವಿಚಾರದಲ್ಲಿ ಅಧಿಕಾರಿಗಳ ಹಾಗೂ ಪಿಡಿಒಗಳ ಸಭೆನಡೆಸಿ ಮಾಹಿತಿ ಪಡೆಯುತ್ತಿದ್ದೇನೆ.

ಕೋವಿಡ್ವಿಚಾರದಲ್ಲಿ ಶಾಸಕರಾಗಿ, ಒಬ್ಬವ್ಯಕ್ತಿಯಾಗಿ ಏನು ಕೊಡುಗೆ?
ಶಾಸಕನಾಗಿ ಸೋಂಕಿತರ ಚಿಕಿತ್ಸೆಗೆ ಬೇಕಾದವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಂಡಿದ್ದೇನೆ. ರೋಟರಿ ಬೆಂಗಳೂರು ಸೌತ್‌ ಪರೇಡ್‌ನ‌ವರಿಗೆ ಮನವಿಮಾಡಿ ಈಗಾಗಲೇ 10 ಆಕ್ಸಿಜನ್‌ ಸಾಂದ್ರಕಗಳವ್ಯವಸ್ಥೆ ಮಾಡಿದ್ದೇನೆ.ಇನ್ನೂ ಹತ್ತು ಸಾಂದ್ರಕಗಳು ಬರಲಿದೆ. ಒಂದುಸಾವಿರ ಸೋಂಕಿತರಿಗೆ ಪಲ್ಸ್‌ ಆಕ್ಸಿಮೀಟರ್‌,ಥರ್ಮಮೀಟರ್‌, ಮಾತ್ರೆ, ಮಾಸ್ಕ್ ಸೇರಿದಂತೆಕೋವಿಡ್‌ ಕಿಟ್‌ ನೀಡಲಾಗಿದೆ.

ಡಿಕೆಎಸ್‌ಚಾರಿಟ್ರಬಲ್‌ ಟ್ರಸ್ಟ್‌ ವತಿಯಿಂದ ಆ್ಯಂಬುಲೆನ್ಸ್‌ಹಾಗೂ ಬ್ಲಾ ಕ್ ಫಂಗಸ್ ನಿಂದ ಬಳಲುತ್ತಿರುವ ರೋಗಿಗಳಿಗೆ ಆಸ್ಪತ್ರೆ ವ್ಯವಸ್ಥೆ, ಕೋವಿಡ್‌ಸೋಂಕಿತರ ಮಾಹಿತಿಗಾಗಿ ಸಹಾಯವಾಣಿ ಪ್ರಾರಂಭಿಸಲಾಗಿದೆ.

ಯಾವ ಬೇಡಿಕೆಗಾಗಿ ಸರ್ಕಾರಕ್ಕೆ ಮನವಿಮಾಡಿದ್ದೀರಾ?

ಪಟ್ಟಣದಲ್ಲಿ ಶವ ಸಂಸ್ಕಾರಕ್ಕೆ ವಿದ್ಯುತ್‌  ಚಿತಾಗಾರ ಅಳವಡಿಸಲು ಕಟ್ಟಡ ನಿರ್ಮಾಣವಾಗಿದೆ. ಆದರೆ,ವಿದ್ಯುತ್‌ ಚಿತಾಗಾರಕ್ಕೆ ಬೇಕಾದ ಯಂತ್ರೋಪಕರಣಗಳಿಗೆ ಒಂದು ಕೋಟಿ ರೂ. ಬಿಡಗಡೆ ಹಾಗೂ ಆಕ್ಸಿಜನ್‌ ಪ್ಲಾಟ್‌, ಐಸಿಯು ಬೆಡ್‌ಹೆಚ್ಚಳ, ಮಕ್ಕಳ ಆಸ್ಪತ್ರೆಗೆ ಸರ್ಕಾರಕ್ಕೆ ಮನವಿಮಾಡಲಾಗಿದೆ.

ಕೆ.ಎನ್‌.ಲೋಕೇಶ್

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.