ಹಳ್ಳಿಗರಲ್ಲಿ ಆತಂಕ ಸೃಷ್ಟಿ ಸಿದ ಕೊರೊನಾ!
Team Udayavani, May 12, 2021, 5:51 PM IST
ತುಮಕೂರು: ಸುಡು ಬಿಸಿಲಿನ ಬೇಗೆಯ ನಡುವೆಕೊರಾನಾರ್ಭಟ ಹೆಚ್ಚಾಗುತ್ತಲೇ ಇದ್ದು, ಕಲ್ಪತರು ನಾಡಿನಗ್ರಾಮ, ಗ್ರಾಮದ ಜನ ಕೊರೊನಾ ಸೋಂಕಿಗೆ ತುತ್ತಾಗಿನರಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಇಲ್ಲ. ನಮ್ಮಗೋಳು ಕೇಳ್ಳೋರ್ಯಾರು ಎನ್ನುವ ಸ್ಥಿತಿ ಹಳ್ಳಿ ಜನರಲ್ಲಿಬಂದಿದ್ದು, ಕೊರೊನಾರ್ಭಟಕ್ಕೆ ಬೆಚ್ಚಿ ಹೋಗಿದ್ದಾರೆ. ಜಿಲ್ಲೆಯಲ್ಲಿಯೇ ಸಾವಿರಾರು ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ.
ಸೋಂಕಿನಿಂದ ಮೃತರಸಂಖ್ಯೆಯಲ್ಲಿಯೂ ಗಣನೀಯವಾಗಿ ಏರಿಕೆ ಕಂಡಿದ್ದು,ಜನ ಕೊರೊನಾ ಮಹಾಮಾರಿಯಿಂದಕಂಗಾಲಾಗಿದ್ದಾರೆ. ಎರಡನೇ ಅಲೆಯಲ್ಲಿರೂಪಾಂತರಗೊಂಡ ಕೊರೊನಾ ಭೀತಿಈವರೆಗೆ ನಗರದ ಜನರಲ್ಲಿ ಹೆಚ್ಚುಕಂಡುಬರುತ್ತಿತ್ತು. ಈಗಹಳ್ಳಿ-ಹಳ್ಳಿಗೂ ಸೋಂಕುವ್ಯಾಪಿಸಿರುವುದರಿಂದಕೊರೊನಾ ಕಟ್ಟಿಹಾಕುವುದುಕಷ್ಟವಾಗುತ್ತಿದೆ. ನಗರಪ್ರದೇಶಗಳಲ್ಲಿ ವಿವಿಧಕೆಲಸದಲ್ಲಿ ಇದ್ದ ವಲಸಿಗರುಹಳ್ಳಿಗಳಿಗೆ ಬಂದು ಅಲ್ಲಿಯಜನರಿಗೆ ಸೋಂಕು ಹರಡಿಸಿದ್ದಾರೆ.ಈಗ ಎಲ್ಲ ಕಡೆ ವ್ಯಾಪಿಸುತ್ತಿರುವ 2ನೇಅಲೆ ವೈರಸ್‌ನಿಂದ ಈಗ ಹಳ್ಳಿಯಜನರೂ ಹೆಚ್ಚುಬಲಿಯಾಗುತ್ತಿದ್ದಾರೆ.
121 ಗ್ರಾಪಂ ಕೊರೊನಾ ಹಾಟ್‌ಸ್ಪಾಟ್: ಜಿಲ್ಲೆಯಲ್ಲಿಹೆಚ್ಚು ಕೋವಿಡ್ ಪ್ರಕರಣಪñಯಾೆ¤ ಗಿರುವ 121ಗ್ರಾಪಂಗಳನ್ನು ಕೊರೊನಾಹಾಟ್ ಸ್ಪಾಟ್‌ಪ್ರದೇಶಗಳೆಂದು ಜಿಲ್ಲಾಡಳಿತಗುರುತಿಸಿದೆ. ತುಮಕೂರುತಾಲೂಕಿನ ಬೆಳಗುಂಬ, ಕೆಸ್ತೂರ್,ತಿಮ್ಮರಾಜನಹಳ್ಳಿ, ಕೋರಾ, ಅರಕೆರೆ, ಸ್ವಾಂದೇನಹಳ್ಳಿ,ಊರುಕೆರೆ, ಬೆಳ್ಳಾವಿ, ದೊಡ್ಡನಾರವಂಗಲ, ಬುಗುಡನಹಳ್ಳಿ,ಮಲ್ಲಸಂದ್ರ, ಸೀತಕಲ್ಲು, ಹಿರೇಹಳ್ಳಿ, ಮೈದಾಳ,ಕೆಸರುಮಡು, ಹೊನ್ನುಡಿಕೆ, ಹೊಳಕಲ್, ಪಾಲಸಂದ್ರ,ಹರಳೂರು, ಹೆತ್ತೇನಹಳ್ಳಿ, ಹೆಬ್ಬೂರು, ಗಂಗೋನಹಳ್ಳಿ, ಸಿರಿವರ, ನಾಗವಲ್ಲಿ, ಹೆಗ್ಗೆರೆಗ್ರಾಪಂಗಳನ್ನು ಹಾಟ್‌ಸ್ಪಾಟ್ ಪ್ರದೇಶಗಳೆಂದುಘೋಷಿಸಲಾಗಿದೆ. ಅದರಂತೆಯೇ, ಗುಬ್ಬಿ, ಶಿರಾ,ಕೊರಟಗೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ,ತುರುವೇಕೆರೆ, ಮಧುಗಿರಿ ತಾಲೂಕಿನ ಹಲವುಗ್ರಾಮಗಳನ್ನು ಕೊರೊನಾ ಹಾಟ್‌ಸ್ಪಾಟ್ ಪ್ರದೇಶಗಳೆಂದುಗುರುತಿಸಿ ಕ್ರಮ ಕೈಗೊಂಡಿದೆ.
ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.