ರಾಜಕೀಯ ಬಣಗಳ ಪೈಪೋಟಿ: ಆಸ್ಪತ್ರೆ ಸೇವೆಗೆ ದಕ್ಕಿದ 6 ಆ್ಯಂಬುಲೆನ್ಸ್
Team Udayavani, May 27, 2021, 8:12 PM IST
ತಿಪಟೂರು: ಕೊರೊನಾ ಸೋಂಕು ತಡೆಗಟ್ಟಲುಎಲ್ಲರೂ ರಾಜಕೀಯ, ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟುಒಗ್ಗಟ್ಟು ಪ್ರದರ್ಶಿಸುವುದರೊಂದಿಗೆ ಶ್ರಮಿಸುತ್ತಿದ್ದರೆ,ತಿಪಟೂರು ಕಾಂಗ್ರೆಸ್ ಮಾತ್ರ ರಾಜಕೀಯಪೈಪೋಟಿಯಿಂದ ಕೊರೊನಾಗೆ ಶ್ರಮಿಸುತ್ತಿದೆಎಂದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ತಾಲೂಕಿನ ಕಾಂಗ್ರೆಸ್‌ನಲ್ಲಿ ಒಟ್ಟು ನಾಲ್ಕುಬಣಗಳಿದ್ದು, ಸದ್ಯಕ್ಕೆ 3 ಬಣ ಆ್ಯಕ್ಟೀವ್ ಆಗಿರುವುದುಸ್ಪಷ್ಟವಾಗಿ ಕಂಡು ಬರುತ್ತಿದೆ. ಈ ಮೂರುಬಣಗಳಲ್ಲಿ ಎರಡು ಬಣಗಳಿಂದ ಬುಧವಾರ ರಾಜಕೀಯ ಪೈಪೋಟಿ ನಡೆದು ನಗರದ ಸಾರ್ವಜನಿಕಆಸ್ಪತ್ರೆಗೆ ಒಟ್ಟು 6 ಆ್ಯಂಬುಲೆನ್ಸ್ ರೋಗಿಗಳಸೇವೆಗೆಂದು ನೀಡಲಾಯಿತು.
ತಾಲೂಕಿನ ಕಾಂಗ್ರೆಸ್ ಒಟ್ಟು ನಾಲ್ಕು ಬಣಗಳಿದ್ದು,ಇವುಗಳಲ್ಲಿ ಮಾಜಿ ಶಾಸಕ ಕೆ. ಷಡಕ್ಷರಿ ಒಂದು ಬಣ,ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ಒಂದು ಬಣ, ಹಾಲಿ ಕೆಪಿಸಿಸಿ ರಾಜ್ಯಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಒಂದು ಬಣ ಹಾಗೂ ಮಾಜಿಶಾಸಕ ಬಿ.ನಂಜಾಮರಿ ಬಣ ಸೇರಿ ನಾಲ್ಕು ಬಣಗಳಿವೆ.
ಈ ಬಣಗಳಲ್ಲಿ ಬುಧವಾರ ಮಾಜಿ ಶಾಸಕ ಕೆ.ಷಡಕ್ಷರಿ ಬಣ 3 ಆ್ಯಂಬುಲೆನ್ಸ್ ರೋಗಿಗಳ ಸೇವೆಗೆನೀಡಲಾಗುವುದೆಂದು ತಿಳಿಸಿತ್ತು. ಹಾಗಾಗಿ ತುರ್ತುಎಚ್ಚರಗೊಂಡ ಮುಖಂಡ ಕೆ.ಟಿ. ಶಾಂತಕುಮಾರ್‌ತಮ್ಮ ಬಣದಿಂದಲೂ 3 ಆ್ಯಂಬುಲೆನ್ಸ್ ರೋಗಿಗಳಸೇವೆಗೆ ನೀಡಲು ತೀರ್ಮಾನಿಸಿಕೊಂಡು,
ಮಾಜಿಶಾಸಕ ಕೆ. ಷಡಕ್ಷರಿ ಬಣ ಸರ್ಕಾರಿ ಆಸ್ಪತ್ರೆ ಮುಂಭಾಗಆ್ಯಂಬುಲೆನ್ಸ್ ನೀಡಿದ ಅರ್ಧಗಂಟೆಯೊಳಗಡೆಕೆ.ಟಿ. ಶಾಂತಕುಮಾರ್ ಬಣವೂ 3 ಆ್ಯಂಬುಲೆನ್ಸ್‌ಅದೇ ವೇದಿಕೆಯಲ್ಲಿ ನೀಡಿತು.4ನೇ ಬಣದ ಸೇವೆ ಶೂನ್ಯ, ಆರೋಪ: ಮಾಜಿಶಾಸಕ ಕೆ. ಷಡಕ್ಷರಿ ಬಣದಿಂದ ಮೊದಲ ಬಾರಿಗೆಪತ್ರಕರ್ತರಿಗೆ, ಪೊಲೀಸರಿಗೆ, ಪೌರ ಕಾರ್ಮಿಕರಿಗೆಮಾಸ್ಕ್, ಫೇಸ್‌ಶೀಲ್ಡ್, ಸ್ಯಾನಿಟೈಸರ್, ಸಾರ್ವಜನಿಕಆಸ್ಪತ್ರೆ ರೋಗಿಗಳ ಸೇವೆಗೆಂದು 2 ಆ್ಯಂಬುಲೆನ್ಸ್, 1ಶವ ಸಾಗಿಸುವ ಆ್ಯಂಬುಲೆನ್ಸ್ ಸೇರಿ 3 ಆ್ಯಂಬುಲೆನ್ಸ್‌ನೀಡಿದೆ. ಮಾಜಿ ಟೂಡಾ ಅಧ್ಯಕ್ಷ ಶಶಿಧರ್ ಬಣದಿಂದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂಸಿಬ್ಬಂದಿಗೆ 3 ಸಾವಿರ ಮಾಸ್ಕ್ ನೀಡಲಾಗಿದೆ.
ಆದರೆ,ಕೇವಲ ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕರಮುಂದೆ ಪ್ರದರ್ಶನಗೊಳ್ಳುವ 4ನೇ ಬಣದಿಂದಕೋವಿಡ್ ಸೇವೆಗೆ ಯಾವುದೇ ಕೊಡುಗೆ ಕಾಣಬರುತ್ತಿಲ್ಲ ಎಂಬುದು ಆ್ಯಕ್ಟೀವ್ ಆಗಿರುವ 3ಬಣಗಳ ಆರೋಪವಾಗಿದೆ.ಒಟ್ಟಾರೆ ಕಾಂಗ್ರೆಸ್ ಬಣ ರಾಜಕೀಯದಿಂದ ಸಾರ್ವಜನಿಕ ಆಸ್ಪತ್ರೆಗೆ ಒಟ್ಟು 6 ಆ್ಯಂಬುಲೆನ್ಸ್ ಸೇವೆಗೆ ಸಿಕ್ಕಿರುವುದು ಸ್ಪಷ್ಟ. ಆದರೆ, ಸದ್ಯ ಸೋಂಕಿತರ ಪ್ರಮಾಣತುಸು ಇಳಿಕೆಯಾಗುತ್ತಿದೆ.
ಕಳೆದ 15ದಿನದ ಹಿಂದೆಸೋಂಕಿತರ ಹಾಗೂ ಸಾವು- ನೋವಿನ ಪ್ರಮಾಣವಿಪರೀತವಾಗಿತ್ತು. ಆ ಸಮಯ ದಲ್ಲಿ ಈ ಬಣಆ್ಯಂಬುಲೆನ್ಸ್ ನೀಡಿದ್ದರೆ ಸಂಕಷ್ಟದಲ್ಲಿದ್ದವರಿಗೆ ಹೆಚ್ಚುಅನುಕೂಲವಾಗುತ್ತಿತ್ತು ಎಂಬುದು ಆಸ್ಪತ್ರೆ ಆವರಣದಲ್ಲಿದ್ದ ಸಾರ್ವಜನಿಕರ, ಸೋಂಕಿತರ ಹಾಗೂ ಎರಡೂಬಣದ ಕೆಲ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಬಿ.ರಂಗಸ್ವಾಮಿ, ತಿಪಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.