ಜಿಲ್ಲೆಯಲ್ಲಿ ಭೀತಿ ಹುಟ್ಟಿಸಿದ ಬ್ರಿಟನ್ ಬೈರಸ್
Team Udayavani, Dec 23, 2020, 4:32 PM IST
ತುಮಕೂರು: ಕಲ್ಪತರು ನಾಡಿನಲ್ಲಿ ಈ ಚಳಿಗಾಲದಲ್ಲಿ ಹೆಚ್ಚಾಗುತ್ತದೆ ಎಂದು ಕೊಂಡಿದ್ದ ಕೋವಿಡ್ ಈಗ ನಿಯಂತ್ರಣದಲ್ಲಿದೆ. ಈಗ ಪ್ರತಿದಿನ ಕೇವಲ ಮೂವತ್ತು ನಲವತ್ತು ಜನರಿಗೆ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿದೆ, ಸೋಂಕಿನಿಂದ ಮೃತರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಇಳಿಕೆ ಕಂಡಿದ್ದು, ಜನ ಕೋವಿಡ್ ಮರೆತು ಎಂದಿನಂತೆ ಜೀವನ ಆರಂಭಿಸಿದ್ದಾರೆ ಆದರೆ ಈಗ ಜಿಲ್ಲೆಯ ಜನರಿಗೆ ಎರಡನೇ ಅಲೆಯಲ್ಲಿ ರೂಪಾಂತರ ಗೊಂಡ ಕೊರೊನಾ ಭೀತಿ ಶುರುವಾಗಿದೆ.
ತುಮಕೂರಿಗೆ ಬೇರೆ ಬೇರೆ ಕೆಲಸಗಳಿಗಾಗಿ ವಿದೇಶಗಳಿಂದ ಬರುವ ಜನರಿಂದ ಮತ್ತು ವಿದೇಶಕ್ಕೆ ಹೋಗಿ ಬರುವ ಕೈಗಾರಿಕೋದ್ಯಮಿಗಳು, ಉದ್ಯೋಗದಲ್ಲಿ ಇರುವವರು ಮತ್ತು ಓದುತ್ತಿರುವವರುಹಾಗೂ ಇಲ್ಲಿಗೆ ವಿದೇಶದಿಂದ ಓದಲು ಬರುತ್ತಿರುವವರಿಂದ ಕೋವಿಡ್ ಎರಡನೇ ಅಲೆ ಪ್ರಾರಂಭವಾಗುತ್ತದೆ ಎನ್ನುವ ಆತಂಕ ಇಲ್ಲಿಯ ಜನರನ್ನು ಕಾಡುತ್ತಿದೆ.
ಜನರಲ್ಲಿ ಹೆಚ್ಚಿದ ಆತಂಕ: ಕಳೆದ ಹತ್ತು ತಿಂಗಳಿನಿಂದ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ತನ್ನ ತೀವ್ರತೆ ಹೆಚ್ಚಿಸಿಕೊಂಡು ಎಲ್ಲಾ ಜನರಲ್ಲಿ ಭೀತಿ ಗೊಳಿಸಿ 440 ಜನರನ್ನುಬಲಿಪಡೆದಿರುವ ವೈರಸ್ ಹರಡುವಿಕೆ ಈಗ ಕಡಿಮೆಯಾಗುತ್ತಿದೆ ಎಂದು ಜನ ನೆಮ್ಮದಿಯಿಂದ ಬದುಕುಕಟ್ಟಿಕೊಳ್ಳಲು ಆರಂಭಿಸಿದ್ದಾರೆ. ಆದರೆ ಈಗ ವಿದೇಶಗಳಲ್ಲಿ ಕಾಣಿಸಿ ಕೊಳ್ಳುತ್ತಿರುವ ಕೋವಿಡ್ ಎರಡನೇ ಅಲೆಯ ವೈರಸ್ ಜಿಲ್ಲೆಯಲ್ಲಿ ಎಲ್ಲಿ ಹರಡುತ್ತದೆಯೋ ಎನ್ನುವ ಆತಂಕ ಹೆಚ್ಚಿದೆ.
ದಿನೇ ದಿನೆ ಸೋಂಕು ಕಡಿಮೆ: ಈಗ ಬರುತ್ತಿರುವ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಒಂದು ದಿನಕ್ಕೆ ಕನಿಷ್ಠ 30 ರಿಂದ 40ರ ಒಳಗೆ ಕೋವಿಡ್ ಸೋಂಕಿತರುಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಮಂಗಳವಾರದ ವರೆಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು 22,965 ಇದ್ದು ಇದೇ ರೀತಿ ಜಿಲ್ಲೆಯಲ್ಲಿ ಕೋವಿಡ್ ತನ್ನ ವ್ಯಾಪ್ತಿಯನ್ನು ಕಡಿಮೆ ಮಾಡುತ್ತಾ ಹೋದರೆ 2021 ರ ಜನವರಿಅಂತ್ಯಕ್ಕೆ ಜಿಲ್ಲೆಯಲ್ಲಿ ಸೋಂಕು ಇನ್ನೂಕಡಿಮೆಯಾಗುವ ಸಾಧ್ಯತೆ ನಿಚ್ವಳ ವಾಗಿದೆ. ಆದರೆ ಈಗ ವಿದೇಶದಲ್ಲಿ ಕಾಡುತ್ತಿರುವ ಎರಡನೇ ಅವಾಂತರದ ಕೋವಿಡ್ ವೈರಸ್ ವಿದೇಶಗಳಿಂದ ಜಿಲ್ಲೆಗೆ ಹೆಚ್ಚುಬರುವ ಜನರಿಂದ ಹರಡುತ್ತದೆಯೋ ಎನ್ನುವ ಅನುಮಾನ ಮೂಡುತ್ತಿದೆ.
ಲಂಡನ್ ನಿಂದ ಐವರು ತುಮಕೂರಿಗೆ: ಕೋವಿಡ್ ವೈರಸ್ ಜಿಲ್ಲೆಯಲ್ಲಿ ಕಡಿಮೆ ಯಾಗುತ್ತಿರುವಾಗ ಜಿಲ್ಲೆಗೆ ವಿದೇಶದಿಂದ ಬರುವವರಿಂದ ರೋಗ ಹರಡಬಹುದು ಎನ್ನುವ ಆತಂಕ ಹೆಚ್ಚಾಗಿದೆ. ಕೋವಿಡ್ ವೈರಸ್‌ನ ಎರಡನೇ ಅಲೆ ಹರಡುತ್ತಿರುವ ವೇಳೆಯಲ್ಲಿ ಅಲ್ಲಿಯ ವಿಮಾನ ನಿಲ್ದಾಣದಿಂದ ತುಮಕೂರು ಮರಳೂರು ದಿಣ್ಣೆಗೆ ನಾಲ್ಕು ಜನ ಮತ್ತು ತಿಪಟೂರಿಗೆ ಒಬ್ಬರು ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ತುಮಕೂರಿಗೆ ಲಂಡನ್ ವಿಮಾನ ನಿಲ್ದಾಣದಿಂದ ಐವರು ಬಂದಿದ್ದಾರೆ,ಅದರಲ್ಲಿ ತುಮಕೂರಿನ ಮರಳೂರು ದಿಣ್ಣೆಯ ಪತಿ,ಪತ್ನಿ ಮತ್ತುಇಬ್ಬರುಮಕ್ಕಳು, ತಿಪಟೂರಿಗೆ ಒಬ್ಬರು ಬಂದಿದ್ದಾರೆ, ಅವರ ಮೂಗು ಮತ್ತು ಗಂಟಲು ಮಾದರಿ ತೆಗೆದು ಪರೀಕ್ಷೆಗೆ ನೀಡಲಾಗಿದೆ. ವರದಿಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು. -ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆದೊರಕುತ್ತಿದೆ. ಜನರು ಕೋವಿಡ್ ರೋಗ ಲಕ್ಷಣಬಂದ ತಕ್ಷಣತಪಾಸಣೆ ಮಾಡಿಸಿ ಕೊಂಡು ಚಿಕಿತ್ಸೆಪಡೆಯಿರಿ,ಈವರೆಗೆ 22,157ಜನರು ಗುಣಮುಖರಾಗಿ ಮನೆಗೆಹೋಗಿದ್ದಾರೆ. ಮೃತಪಟ್ಟಿರುವವರು ಕೋವಿಡ್ ಜೊತೆಗೆಬೇರೆ ರೋಗಗಳು ಇದ್ದವರು ಹೆಚ್ಚು ಮೃತರಾಗಿದ್ದಾರೆ ಜನರು ಜಾಗೃತೆಯಿಂದಇರಬೇಕು.–ಡಾ.ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ
-ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.