ಕೊಬ್ಬರಿ ಬೆಲೆ ಏರಿಕೆಯಿಂದ ತೆಂಗು ಬೆಳೆಗಾರರ ಮೊಗದಲ್ಲಿ ಸಂತಸ
Team Udayavani, May 26, 2021, 7:29 PM IST
ತಿಪಟೂರು: ಹಳ್ಳಿಗಳಲ್ಲಿ ಕೊರೊನಾ ಆರ್ಭಟಜೋರಾಗಿದ್ದು, ರೈತರು ಬೆಳೆಯುತ್ತಿರುವ ತರಕಾರಿ,ಹೂ, ಹಣ್ಣು ಸೇರಿದಂತೆ ಸಾಕಷ್ಟು ಬೆಳೆ ಹಾಗೂಉತ್ಪನ್ನಗಳ ಬೆಲೆ ತೀವ್ರ ಕುಸಿತದ ನಡುವೆ ತೆಂಗುಬೆಳೆಗಾರರಿಗೆ ಮಾತ್ರ ಬಂಫರ್ ಆಫರ್ ಎನ್ನುವಂತೆತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿಧಾರಣೆ 17 ಸಾವಿರ ರೂ.ದಾಟುವ ಮೂಲಕತೆಂಗು ಬೆಳೆಗಾರರ ಮುಖದಲ್ಲಿ ಸಂತಸ ತಂದಿದೆ.
ಕಳೆದ 1 ವರ್ಷದ ಹಿಂದೆ ಕ್ವಿಂಟಲ್ ಕೊಬ್ಬರಿಬೆಲೆ 16 ಸಾವಿರ ರೂ . ಇತ್ತು. ನಂತ ರ, ಕ ನಿಷ್ಟ 8ಸಾವಿರಕೆ R ಇಳಿದಿತ್ತು. ಆದರೆ, ಕಳೆದ 6ತಿಂಗಳಿಂದಲೂ ಕೊಬ್ಬರಿ ಬೆಲೆ ಸ್ಪಲ್ಪ ವೇಚೇñ ರಿಸಿಕೊಳ್ಳುತ್ತಾ, ಇದೀಗ ಮಾರುಕಟ್ಟೆಯಲ್ಲಿ ಕೊಬ್ಬರಿ ಖರೀದಿ 17 ಸಾವಿÃ Ã ೂ. ದಾಟಿದೆ.ಕೊಬ್ಬರಿ ಬೆಲೆ ದೀಪಾವಳಿ ಹಬ್ಬದ ಸಮಯದಲ್ಲಿಮಾತ್ರ ಮಾರುಕಟ್ಟೆಯ ಮಾಮೂಲಿ ದರಕ್ಕಿಂತಶೇ.30ರಿಂದ 40ರಷ್ಟು ಏರಿಕೆಯಾಗುವ ವಾಡಿಕೆ ಹಲವಾರು ದಶಕಗಳಿಂದ ನಡೆದುಕೊಂಡು ಬರು ತ್ತಿದ್ದು,ಇತ್ತೀಚಿನ ವರ್ಷಗಳಲ್ಲಿ ದೀಪಾವಳಿಯ ಮುಂಚೆಹಾಗೂ ನಂತರವೂ ಬೆಲೆ ಒಂದೇ ರೀತಿಯಲ್ಲಿ ಏರಿಕೆಆಗುವ ಮೂಲಕ ಅಚ್ಚರಿ ಮೂಡಿಸಿದೆ.
ರೈತರ ಬಳಿ ದಾಸ್ತಾನು ಇಲ್ಲ: ಕೊಬ್ಬರಿ ಬೆಲೆ ನಿರೀಕ್ಷೆಮೀರಿ ಏರಿಕೆಯಾಗುತ್ತಿದ್ದರೂ ಸಾಕಷ್ಟು ರೈತರ ಬಳಿಕೊಬ್ಬರಿ ದಾಸ್ತಾನು ಇಲ್ಲ. ಮಳೆ ಅಭಾವ, ರೋಗ,ಅಂತರ್ಜಲದ ಕೊರತೆಗಳ ನಡುವೆ ಈಗಾಗಲೇ ತೆಂಗು ಸಾಕಷ್ಟು ಕಡೆ ನಾಶದ ಅಂಚಿಗೆ ತಲುಪಿದೆ.ಆದರೆ, ಹೇಮಾವತಿ ನೀರು ಹರಿಯುವ ಪ್ರದೇಶಸೇರಿದಂತೆ ಕೆರೆಕಟ್ಟೆಗಳಲ್ಲಿ ನೀರಿರುವ ಪ್ರದೇಶಗಳಲ್ಲಿಮಾತ್ರ ತೆಂಗು ಬೆಳೆ ಚೆನ್ನಾಗಿದ್ದು, ಇಳುವರಿಯೂಸಾಕಷ್ಟು ಇರುವುದರಿಂದ ಅವರಿಗೆ ಮಾತ್ರ ದಾಖಲೆಕೊಬ್ಬರಿ ಬೆಲೆ ಸಿಗುತ್ತಿದೆ. ಉಳಿದವರು ಭ್ರಮನಿರಶನ ರಾಗಿರುವುದು ಕಂಡು ಬರುತ್ತಿದೆ.
ಆದರೆ,ಕೆಲ ದೊಡ್ಡ ರೈತರು ಹಾಗೂ ವರ್ತಕರ ಬಳಿ ಕೊಬ್ಬರಿದಾಸ್ತಾನು ಇದ್ದು ದಾಖಲೆ ಬೆಲೆ ಉಳ್ಳವರಿಗೇಸಿಗುತ್ತಿರುವುದು ಸಣ್ಣ ಮತ್ತು ಮಧ್ಯಮ ರೈತರಲ್ಲಿನೋವು ತಂದಿದೆ. ಸದ್ಯ ಬೆಲೆ ಇದೇ ರೀತಿ ಏರುತ್ತಾಹೋದರೆ ಮುಂದಿನ ಕೆಲವೇ ವಾರಗಳಲ್ಲಿ ಕ್ವಿಂಟಲ್‌ಬೆಲೆ 20 ಸಾವಿರ ಗಡಿ ಮುಟ್ಟಬಹುದೆಂಬುದುಮಾರುಕಟ್ಟೆಯ ತಜ್ಞರ ಮಾತಾಗಿದೆ.ತೋಟಗಳಲ್ಲಿ ಫಸಲು ಇಲ್ಲ: ಕೊಬ್ಬರಿ ಬೆಲೆ ನಮ್ಮನಿರೀಕ್ಷೆ ಮೀರಿ ಹೆಚ್ಚಿದೆ. ಆದರೆ, ನಮ್ಮ ಬಳಿ ಕೊಬ್ಬರಿಇಲ್ಲ. ಕಳೆದ ಹಲವಾರು ವರ್ಷಗಳಿಂದಲೂ ಮಳೆಇಲ್ಲದೆ ತೆಂಗಿನ ತೋಟಗಳಲ್ಲಿ ಫಸಲೇ ಇಲ್ಲ.ಅಂತರ್ ಜಲವೂ ಬತ್ತಿರುವುದರಿಂದ ನಮ್ಮತೋಟಗಳು ಒಣಗುವ ಹಂತಕ್ಕೆ ಬಂದಿದ್ದು,ನಮಗೂ ಹೇಮಾವತಿ ನೀರಿದ್ದರೆ ಅಥವಾ ಮಳೆಚೆನ್ನಾಗಿ ಬಂದಿದ್ದರೆ ದಾಖಲೆ ಬೆಲೆ ಸಿಗುತ್ತಿತ್ತು.ಆದರೆ, ಏನು ಮಾಡುವುದು. ನಮ್ಮ ಬಳಿಕೊಬ್ಬರಿಯೂ ಇಲ್ಲ ಬೆಲೆಯೂ ಸಿಗುತ್ತಿಲ್ಲ.ಇದನ್ನೆಲ್ಲಾ ನೋಡಿ ನಮ್ಮ ಹೊಟ್ಟೆ ಉರಿಯುತ್ತಿದೆಎನ್ನುತ್ತಿದ್ದಾರೆಕೊಬ್ಬರಿ ಇಲ್ಲದಿರುವ ರೈತರು.
ಬಿ.ರಂಗಸ್ವಾಮಿ, ತಿಪಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.