ಪಾಲಿಕೆ ಕೈಗೊಂಡ ಹಲವು ಕ್ರಮಗಳಿಂದ ಸೋಂಕಿನ ಸಂಖ್ಯೆ ಇಳಿಮುಖ
Team Udayavani, May 27, 2021, 11:00 PM IST
ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಹಾಸಿಗೆ ಇಲ್ಲಎಂದು ಜನ ಪರಿತಪ್ಪಿಸುತ್ತಿದ್ದ ವೇಳೆಯಲ್ಲಿ ಜಿಲ್ಲಾಡಳಿತಮತ್ತು ತುಮಕೂರು ಮಹಾನಗರ ಪಾಲಿಕೆಮೇಯರ್, ಉಪಮೇಯರ್, ಪಾಲಿಕೆ ಸದಸ್ಯರು,ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರುಮತ್ತು ಮಾಜಿ ಸಚಿವರು, ಮಾಜಿ ಶಾಸಕರು,ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ವೇಗವಾಗಿ ಹರಡುತ್ತಿದ್ದ ಕೊರೊನಾವನ್ನು ಕಟ್ಟಿಹಾಕುವ ಪ್ರಯತ್ನ ತುಮಕೂರಿನಲ್ಲಿ ನಡೆದಿದ್ದು, ಜನ ಲಾಕ್‌ಡೌನ್‌ನಿಂದ ಹೊರ ಬರದೇಇದ್ದದ್ದು, ಪಾಲಿಕೆ ತೆಗೆದು ಕೊಂಡಿರುವ ಕ್ರಮದಿಂದ ಕೊರೊನಾ ಹಂತ – ಹಂತವಾಗಿ ಕಡಿಮೆ ಯಾಗಲು ಕಾರಣವಾಗಿದೆ.
ತುಮಕೂರು ನಗರದಲ್ಲಿ ಸೋಂಕು ವೇಗವಾಗಿಹರಡಲು ಕಾರಣವೇನು?
ತುಮಕೂರು ನಗರ 18 ಜಿಲ್ಲೆ ಸಂಪರ್ಕ ಕಲ್ಪಿಸುವಪ್ರಮುಖ ಜಿಲ್ಲಾ ಕೇಂದ್ರ. ಇಲ್ಲಿಗೆ ಎಲ್ಲ ಕಡೆಯಿಂದಜನ ಬರುತ್ತಾರೆ. ಜನ ಸಂದಣಿ ಹೆಚ್ಚಿದ್ದರಿಂದಬೆಂಗಳೂರಿನಲ್ಲಿ ಸೋಂಕು ಹೆಚ್ಚು ತಗಲಿದ್ದು, ದಿನವೂಸಾವಿರಾರು ಜನ ಬೆಂಗಳೂರಿಗೆ ಹೋಗಿಬರುತ್ತಿದ್ದರಿಂದ ನಗರದಲ್ಲಿ ಸೋಂಕು ಹೆಚ್ಚುವೇಗವಾಗಿ ಹರಡಲು ಕಾರಣವಾಗಿತ್ತು.
ಕೊರೊನಾ ನಿಯಂತ್ರಣಕ್ಕೆ ನಗರದಲ್ಲಿ ಏನೆಲ್ಲಕ್ರಮ ಕೈಗೊಂಡಿದ್ದೀರಾ?
ಕೊರೊನಾ ಸೋಂಕು ನಗರದಲ್ಲಿ ನಿಯಂತ್ರಣಕ್ಕೆಬರಲು ಸರ್ಕಾರ ಲಾಕ್‌ಡೌನ್ ಮಾಡಿದ್ದು, ಬಹಳಪರಿಣಾಮ ಬೀರಿತು. ಜನರು ಕೊರೊನಾ ನಿಯಮತಪ್ಪದೇ ಪಾಲಿಸಿದರು. ಮಹಾನಗರ ಪಾಲಿಕೆಯಿಂದಹಲವು ಕ್ರಮ ಕೈಗೊಂಡ ಪರಿಣಾಮ ನಿಯಂತ್ರಣವಾಗುತ್ತಿದೆ ಎಂದರೆ ಆಗುವುದಿಲ್ಲ. ನಮ್ಮಲ್ಲಿ ಜಾಗೃತಿಇರಲೇ ಬೇಕು.
ಕೊರೊನಾ 3ನೇ ಅಲೆ ಬರುತ್ತದೆ ಎಂದು ಈಗಾಗಲೇ ತಜ್ಞರು ಹೇಳುತ್ತಿದ್ದಾರೆ. ಅದರ ನಿಯಂತ್ರಣಕ್ಕೆ ಏನು ಕ್ರಮ ಆಗಿದೆ?
ಕೋವಿಡ್ ಮೊದಲ ಅಲೆ ಆಯಿತು.2ನೇ ಅಲೆ ಈಗ ಜನರನ್ನು ಭೀತಿಗೊಳಿಸುತ್ತಿದೆ. ಮುಂದೆ 3ನೇ ಅಲೆ ಬರುತ್ತದೆ ಎಂದುತಜ್ಞರು ಹೇಳುತ್ತಿದ್ದಾರೆ. ಅದರ ನಿಯಂತ್ರಣಕ್ಕೆಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ನಾವುಪಾಲಿಕೆ ವ್ಯಾಪ್ತಿಯಲ್ಲಿ ಮುಂದೆ ಬರುವ ವೇಗತಡೆಯಲು ಕ್ರಮ ಕೈಗೊಂಡಿದ್ದೇವೆ. ಕೊರೊನಾನಿಯಂತ್ರಿಸಲು ಪ್ರತಿಯೊಬ್ಬರೂ ಲಸಿಕೆಪಡೆಯಬೇಕು.
ಜನರನ್ನು ತೀವ್ರವಾಗಿ ಕಾಡುತ್ತಿರುವ ಕೊರೊನಾ ಸೋಂಕಿನ ವೇಳೆ ನಿಮ್ಮ ಜನ ಸೇವೆ ಹೇಗಿದೆ?
ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಜನರೇಹಲವಾರು ಕ್ರಮ ಕೈಗೊಂಡಿದ್ದಾರೆ. ಎಲ್ಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಸ್ವಯಂ ಕಾರ್ಯಪ್ರವೃತ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಕೆಲವು ಕಡೆಕೋವಿಡ್ ಕೇರ್ ಸೆಂಟರ್ ತೆರೆದು ಸೇವೆಮಾಡುತ್ತಿದ್ದಾರೆ. ನಾವು ಜನರಿಗೆ ನಮ್ಮ ಕೈಲಾದ ಎಲ್ಲನೆರವು ನೀಡುತ್ತಿದ್ದೇವೆ. ನಗರದಲ್ಲಿರುವ ಅನೇಕರುತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಇಂತಹಸಂದರ್ಭದಲ್ಲಿ ಸರ್ಕಾರವೇ ಎಲ್ಲವನ್ನು ಮಾಡಲುಸಾಧ್ಯವಿಲ್ಲ. ತಮ್ಮ ಕೈಲಿ ಸಹಾಯ ಮಾಡಲು ಸಾಧ್ಯಇರುವವರು ಸಂಕಷ್ಟದಲ್ಲಿ ಇರುವವರಿಗೆ ಸಹಾಯಮಾಡಿ ಎನ್ನುವುದು ನನ್ನ ಮನವಿ
ನಿಯಂತ್ರಿಸಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ?
ಮಹಾನಗರ ಪಾಲಿಕೆಯಿಂದ ಕೊರೊನಾ ಉನಗರ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತಸೂಚಿಸಿದ ಮಾರ್ಗದರ್ಶನದಂತೆ ತುಮಕೂರು ಮಹಾನಗರಪಾಲಿಕೆಯಿಂದ ಅಗತ್ಯ ಕ್ರಮ ಕೈಗೊಂಡಿದೆ. ನಗರದಲ್ಲಿ ಆಶಾಕಾರ್ಯಕರ್ತರು ಕಡಿಮೆ ಇರುವುದರಿಂದ ಸ್ವಯಂ ಸೇವಕರ ನೆರವುಪಡೆದು ಹೋಂ ಐಸೋಲೇಷನ್ ಇದ್ದವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವಪ್ರಯತ್ನ ನಡೆದಿದೆ. ವಾರ್ಡ್‌ಗಳಲ್ಲಿ ಸ್ಯಾನಟೈಸ್ ಮಾಡಲಾಗಿದೆ.ಕೊರೊನಾ ಪರೀಕ್ಷೆ ಹೆಚ್ಚಿಸಲಾಗಿದೆ.\
ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.