ರಿಪೇರಿಗೆ ಹೋದ ಆ್ಯಂಬುಲೆನ್ಸ್ ವಾಪಸ್ ಬಂದಿಲ್ಲ
Team Udayavani, Jun 3, 2021, 6:33 PM IST
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಕೋವಿಡ್‌ರೋಗಿಗಳನ್ನು ಕೋವಿಡ್ ಸೆಂಟರ್‌ಗಳಿಗೆ ಕರೆದೊಯ್ಯಲು, ಗುಣಮುಖರಾದವರನ್ನು ಮನೆಗೆಬಿಡಲು ತುರ್ತು ವಾಹನದ ಅವಶ್ಯಕತೆ ಇದೆ.ಸೋಂಕಿತರು ಕೋವಿಡ್ ಸೆಂಟರ್‌ಗೆ ಹೋಗಲು ಸಮಸ್ಯೆ ಉಂಟಾಗಿದೆ.ತಾಲೂಕಿನಲ್ಲಿ ಪ್ರತಿದಿನ ಕೋವಿಡ್ ಪಾಸಿಟಿವ್‌ಕೇಸ್ ದಾಖಲಾಗುತ್ತಿದ್ದು, ಮನೆಯಲ್ಲಿ ಐಸೋಲೇಷನ್‌ಗೆ ಅನುಕೂಲವಿಲ್ಲದವರುಕೋವಿಡ್ ಸೆಂಟರ್‌ಗೆ ದಾಖಲಾಗುತ್ತಿದ್ದಾರೆ.
ಕೋವಿಡ್ ಕೇಂದ್ರದಿಂದ ಪ್ರತಿದಿನ ಹಲವಾರುಸೋಂಕಿತರು ಗುಣಮುಖರಾಗಿ ಮನೆಗೆಹಿಂದಿರುಗುತ್ತಿದ್ದು, ಇವರಿಗೆ ಸಾರಿಗೆ ಸಮಸ್ಯೆಉಂಟಾಗುತ್ತಿದೆ. ಸೋಂಕಿತರು ಎಂಬ ಕಾರಣಕ್ಕೆಖಾಸಗಿ ವಾಹನಗಳು ಇವರನ್ನು ವಾಹನಕ್ಕೆ ಹತ್ತಿ ಸಲುಹಿಂಜರಿಯುತ್ತಿದ್ದು, ಇದರಿಂದ ಆಸ್ಪತ್ರೆಯ ಆ್ಯಂಬುಲೆನ್ಸ್‌ಗೆ ಹಲವಾರು ಗಂಟೆ ಕಾಯ್ದುಕುಳಿತುಕೊಳ್ಳುವ ಅನಿವಾರ್ಯ ಉಂಟಾಗಿದೆ.
ಆ್ಯಂಬುಲೆನ್ಸ್ ವಾಪಸ್ ಬಂದಿಲ್ಲ: ತಾಲೂಕುಆಸ್ಪತ್ರೆಯಲ್ಲಿ 5 ಆ್ಯಂಬುಲೆನ್ಸ್‌ಗಳಿದ್ದು, ಇವುಗಳ ಪೈಕಿಎರಡು ಆ್ಯಂಬುಲೆನ್ಸ್ ರಿಪೇರಿಗೆ ಹೋಗಿ ಹಲವಾರುತಿಂಗಳು ಕಳೆದಿದೆ. ಸದ್ಯ ಇರುವ 3 ಆ್ಯಂಬುಲೆನ್ಸ್‌ತುರ್ತು ರೋಗಿಗಳನ್ನು ದೂರದ ಆಸ್ಪತ್ರೆಗೆ ಬಿಡಲು,ಸಾವನಪ್ಪಿದ ರೋಗಿಯನ್ನು ಶವ ಸಂಸ್ಕಾರ ಮಾಡಲುಸೇರಿದಂತೆ ಕೊರೊನಾ ಸೋಂಕಿತರನ್ನು ಕೋವಿಡ್ ಸೆಂಟರ್‌ಗೆ ಹೋಗಲು ಕಾರ್ಯನಿರ್ವಹಿಸುತ್ತಿವೆ.
ಆ್ಯಂಬುಲೆನ್ಸ್‌ಗಳು ತುರ್ತು ಕೆಲಸಕ್ಕೆ ಹೋದಸಂದರ್ಭದಲ್ಲಿ ಕೋವಿಡ್ ಸೆಂಟರ್‌ನಿಂದಬಿಡುಗಡೆಕೊಂಡ ಹಾಗೂ ಸೋಂಕಿತರನ್ನುಕರೆದೊಯ್ಯಲು ವಾಹನ ಇಲ್ಲವಾಗಿವೆ. ಇದರಿಂದಕೋವಿಡ್ ರೋಗಿಗಳು ವಾಹನಕ್ಕಾಗಿ ಪರದಾಡುವಸ್ಥಿತಿ ಉಂಟಾಗಿದೆ.ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕೋವಿಡ್‌ಸೆಂಟರ್‌ಗಳಿಗೆ ಬಿಡಲು ಸಹ ವಾಹನದ ಸಮಸ್ಯೆ ಉಂಟಾಗಿದೆ. ಕೋವಿಡ್ ಕೇಂದ್ರಗಳು ಕಾರ್ಯನಿರ್ವಹಿಸುವವರಿಗೆಪಾಸಿಟಿವ್‌ವ್ಯಕ್ತಿಗಳನ್ನುಹಾಗೂಗುಣಮುಖರಾದ ವ್ಯಕ್ತಿಗಳ ಸಂಚಾರಕ್ಕೆ ಪ್ರತೇಕ ವಾಹನ ಸೌಕರ್ಯ ಅಗತ್ಯವಾಗಿದೆ. ಇದರಿಂದಸೋಂಕಿತರಿಗೆ ಅನುಕೂಲವಾಗುತ್ತದೆ ಎಂದುಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೇತನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.