ಕೋವಿಡ್ ನಿಯಮ ಕಡ್ಡಾಯ
ಅಭ್ಯರ್ಥಿ, ಏಜೆಂಟರ ಸಭೆಯಲಿ ಚುನಾವಣಾಧಿಕಾರಿ ನಂದಿನಿದೇವಿ ಮಾಹಿತಿ
Team Udayavani, Oct 28, 2020, 3:14 PM IST
ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿ ಹಾಗೂ ಮಧುಗಿರಿ ಉಪವಿಭಾಗಾಧಿಕಾರಿ ಡಾ. ಕೆ.ನಂದಿನಿದೇವಿ ಹೇಳಿದರು.
ಶಿರಾ ಮಿನಿವಿಧಾನಸೌಧದಲ್ಲಿ ನಡೆದ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳು ಹಾಗೂ ಏಜೆಂಟರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
41 ತಂಡ ರಚನೆ: ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾಲಿಸದಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಮತದಾರರಿಂದ ನಮೂನೆ - 12 ಡಿ ಫಾರಂ ಹಾಗೂ ಅಂಚೆ ಮತದಾನಕ್ಕಾಗಿ 41 ತಂಡಗಳನ್ನು ರಚಿಸಲಾಗಿದ್ದು, ತಂಡದೊಂದಿಗೆ ಸೆಕ್ಟರ್ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು, ವಿಡಿಯೋಗ್ರಾಫರ್, ಬಿಎಲ್‌ಒ ಹಾಗೂ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ ಎಂದರು.
ಪ್ರಚಾರಕ್ಕೆ ಅವಕಾಶವಿರುವುದಿಲ್ಲ: ಅಂಚೆ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುವುದು. ಅಂಚೆ ಮತದಾನ ತಂಡದೊಂದಿಗೆ ಅಭ್ಯರ್ಥಿಗಳ ಏಜೆಂಟರುಗಳು ಹಾಜರಿದ್ದು, ವೀಕ್ಷಣೆ ಮಾಡಬಹುದು. ಆದರೆ ಅಂಚೆ ಮತದಾನದ ವೇಳೆ ಯಾವುದೇ ಪ್ರಚಾರಕ್ಕೆ ಅವಕಾಶವಿರುವುದಿಲ್ಲ ಎಂದರು.
ಮತದಾನದ ರಹಸ್ಯ ಕಾಪಾಡಲಾಗುವುದು: ದಿವ್ಯಾಂಗ ಮತ್ತು 80 ವರ್ಷ ವಯಸ್ಸಿನ ಮತದಾರರು ಮತಚಲಾಯಿಸುವಾಗ ಅಂಚೆ ಪತ್ರದಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಮುಂದೆ ಗುರುತು ಮಾರ್ಕ್ ಹಾಕುವ ಮೂಲಕ ತಮ್ಮ ಮತದಾನವನ್ನು ಘೋಷಣೆ ಮಾಡಿಕೊಳ್ಳುತ್ತಾರೆ. ಅಂಚೆ ಮತದಾರರ ತಂಡವು ಅ. 25 ಹಾಗೂ 26ರಂದು ಭೇಟಿ ನೀಡಿದಾಗ ಮತದಾರರು ಇಲ್ಲದಿದ್ದರೆ ಎರಡನೇ ಬಾರಿ ಅ.30 ಮತ್ತು 31ರಂದು ತಂಡ ಮನೆಗೆ ಭೇಟಿ ನೀಡಲಿದೆ. ಅದೇ ಕೊನೆಯ ಬಾರಿಯಾಗಿರುತ್ತದೆ. ಅಂಚೆ ಮತದಾನದ ಸಮಯದಲ್ಲಿ ವ್ಯತ್ಯಾಸವಾದರೂ ಮತದಾನದ ರಹಸ್ಯವನ್ನು ಕಾಪಾಡಲಾಗುವುದು ಎಂದರು.
ಅಭ್ಯರ್ಥಿಗಳಿಗೆ ಮಾಹಿತಿ: 28 ಲಕ್ಷದಿಂದ 30 ಲಕ್ಷದ 80 ಸಾವಿರದವರೆಗೆ ಚುನಾವಣಾ ವೆಚ್ಚ ಅಧಿಕವಾಗಿರುವ ಬಗ್ಗೆ ಸಭೆಗೆ ತಿಳಿಸಿದರು. ಅಲ್ಲದೆ ನಗದು ವಹಿವಾಟನ್ನು 20 ಸಾವಿರ ರೂ. ಗಳಿಂದ 10 ಸಾವಿರ ರೂ.ಗಳಿಗೆ ಇಳಿಕೆ ಮಾಡಿರುವ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಶಿರಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕಿ ಬಿ.ಮಹೇಶ್ವರಿ, ಚುನಾವಣಾ ವೆಚ್ಚ ವೀಕ್ಷಕ ಮೃತ್ಯುಂಜಯ ಸೇನಿ, ತಹಶೀಲ್ದಾರ್ ಮಮತ ಇದ್ದರು.
ಉಪ ಚುನಾವಣೆ ಎಡಗೈನ ಮಧ್ಯದ ಬೆರಳಿಗೆ ಶಾಹಿ : ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನ.3ರಂದು ನಡೆಯಲಿದ್ದು ಚುನಾವಣಾ ಮತದಾನದಂದು ಮತದಾರರಿಗೆ ಎಡಗೈನ ಮಧ್ಯದ ಬೆರಳಿಗೆ ಶಾಹಿ ಹಾಕಲು ಚುನಾವಣಾ ಆಯೋಗ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ
ಶಿರಾ ಉಪ ಚುನಾವಣೆಯಲ್ಲಿ ಕೋವಿಡ್ ನಿಯಮ ಕಡ್ಡಾಯವಾಗಿರುತ್ತದೆ.ಕೋವಿಡ್ ಸೋಂಕು ಹೆಚ್ಚು ಹರಡುತ್ತಿರುವುದರಿಂದ ಪ್ರತಿಯೊಬ್ಬರೂ ಕೋವಿಡ್ ನಿಯಮ ಪಾಲಿಸಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿರ ಬೇಕು, ಕೋವಿಡ್ ನಿಯಮ ಪಾಲಿಸದೇ ಹೋದರೆ ಅಂತಹ ರಾಜಕೀಯ ಪಕ್ಷಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. – ಡಾ.ಕೆ.ನಂದಿನಿದೇವಿ, ಚುನಾವಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.