ಲಸಿಕೆ ಕೊರತೆಯಾದರೆ ಜಿಲ್ಲಾಡಳಿತದಿಂದ ಕ್ರಮ
Team Udayavani, Feb 1, 2022, 2:26 PM IST
ತುಮಕೂರು: ಜಿಲೆಯಲ್ಲಿ ಕೋವಿಡ್ ಲಸಿಕಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಿಗದಿತ ಗುರಿಯನ್ನು ತಲುಪುವ ಹಂತದಲ್ಲಿದ್ದು, ಲಸಿಕೆ ಕೊರತೆಯುಂಟಾದರೆಪೂರೈಸಲು ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ವೀಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇಶೇ.101ರಷ್ಟು ಮೊದಲನೇ ಡೋಸ್, ಶೇ.85ರಷ್ಟುಎರಡನೇ ಡೋಸ್ ಲಸಿಕಾ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಇರುವ ಲಸಿಕಾ ಪ್ರಕ್ರಿಯೆಯನ್ನುಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದುತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಶೇ.51ರಷ್ಟು ಪ್ರಗತಿ: ಜಿಲ್ಲೆಯಲ್ಲಿ ಬೂಸ್ಟರ್ ಡೋಸ್‌ಲಸಿಕಾ ಪ್ರಕ್ರಿಯೆಯಲ್ಲಿ ಶೇ.51ರಷ್ಟು ಪ್ರಗತಿಸಾಧಿಸಿದ್ದು, ಅರ್ಹತೆ ಹೊಂದಿರುವ 21 ಸಾವಿರಫಲಾನುಭವಿಗಳಿಗೆ ಶೀಘ್ರವೇ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಬೇಕು. ಬೂಸ್ಟರ್ ಡೋಸ್ ನೀಡುವಲ್ಲಿಹಿಂದುಳಿದಿರುವ ತಾಲೂಕುಗಳ ವೈದ್ಯಾಧಿಕಾರಿಗಳಿಗೆ ಲಸಿಕಾ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮವಹಿಸ ಬೇಕು ಎಂದು ತಿಳಿದರು.
ಗ್ರಾಮ ಒನ್ ಕೇಂದ್ರಕ್ಕೆ ಕ್ರಮವಹಿಸಿ: ಮುಖ್ಯ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ಜಿಲ್ಲೆಯಲ್ಲಿ ಫೆ.15ರೊಳಗೆ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆಯಾ ತಾಲೂಕುಗಳ ತಹಶಿಲ್ದಾರ್‌ಗಳು ಸೂಕ್ತ ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.
ತಂತ್ರಜ್ಞಾನದ ಉಪಯೋಗ ಪಡೆದುಕೊಳ್ಳಿ: ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಕೋವಿಡ್ -19 ಸಂಬಂಧ ಮೊಬೈಲ್‌ನಲ್ಲಿ ಹೋಂ ಐಸೋಲೇಷನ್ ಆ್ಯಪ್ ಲಭ್ಯವಿದ್ದು, ಪಾಸಿಟೀವ್ ಬಂದವರಿಗೆ ನೀಡುವ ಔಷಧಗಳ ಕಿಟ್ ಮಾಹಿತಿಯನ್ನು ಆ್ಯಪ್‌ನಲ್ಲಿ ನಮೂದಿಸಲು ಅವಕಾಶವಿದೆ. ಅಧಿಕಾರಿಗಳು ಈ ತಂತ್ರಜ್ಞಾನದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆಸರ್ಕಾರ ಪರಿಹಾರ ನೀಡುತ್ತಿದ್ದು, ಅದಕ್ಕಾಗಿಯೇ ರೂಪಿಸಿರುವ ಪರಿಹಾರ ಪೋರ್ಟಲ್‌ನಲ್ಲಿಮೃತರ ಮಾಹಿತಿಯನ್ನು ನೀಡಬೇಕು. ಆದರೆ, ಅಧಿಕಾರಿಗಳು ನಿಗದಿತ ನಮೂನೆಯಲ್ಲಿ ಎಸ್.ಆರ್.ಎಫ್.ಐ.ಡಿ. ಮೃತರ ಪೋಷಕ, ಸಂಬಂಧಿಕರ ಹೆಸರನ್ನು ಭರ್ತಿ ಮಾಡದೇ ಕಳುಹಿಸುತ್ತಿದ್ದು, ಇದರಿಂದ ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಗಳುಂಟಾಗುತ್ತಿವೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ, ತಹಶೀಲ್ದಾರ್‌ಗಳು ಹೆಚ್ಚಿನ ಗಮನವಹಿಸಬೇಕು ಎಂದು ತಿಳಿಸಿದರು.
ಪ್ರಕರಣ ಇತ್ಯರ್ಥಕ್ಕೆ ಕ್ರಮಕೈಗೊಳ್ಳಿ: ಕಳೆದ ನವೆಂಬರ್‌ನಲ್ಲಿ ಸುರಿದ ಮಹಾಮಳೆಯಿಂದಾಗಿ ಜಿಲ್ಲೆಯಲ್ಲಿ ಸಂಪೂರ್ಣ ಹಾನಿಗೀಡಾದ ಎ ಮತ್ತು ಬಿ ಗುಂಪಿನ ಮನೆಗಳ ಜಿಪಿಎಸ್ ಮಾಡಿಸುವಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.ಪೈಕಿ-ಪಹಣಿ, ಒಟ್ಟು ಗೂಡಿಸುವಿಕೆ, ಪಹಣಿನ ಕಾಲಂ3/9 ಮಿಸ್‌ಮ್ಯಾಚ್, ಭೂಮಿ ಪೆಂಡೆನ್ಸಿ ಕೆಲಸಗಳು ಬಾಕಿ ಇದ್ದು, ಪ್ರಕರಣಗಳನ್ನು ಶೀಘ್ರಇತ್ಯರ್ಥಪಡಿಸಲು ಕ್ರಮಕೈಗೊಳ್ಳಬೇಕು. ಕಂದಾಯ ಗ್ರಾಮಗಳ ರಚನೆ ಸಂಬಂಧ ಆಯಾ ತಹಶೀಲ್ದಾರ್ ಗಳು ಹೆಚ್ಚಿನ ಗಮನ ವಹಿಸಬೇಕು ಎಂದು ಹೇಳಿದರು.
ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಭೂಮಿಯನ್ನು ಕಾಯ್ದಿರಿಸುವಿಕೆ, ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಸೇರಿದಂತೆ ವಿವಿಧ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ.ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಹಾಜರಿದ್ದರು.
ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳು ಕೊರತೆಯಾದರೆಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಲ್ಲಿರಾಷ್ಟ್ರೀಯ ಹೆಲ್ತ್ ಮಿಶನ್(ಓಊಒ)ನಡಿ ಔಷಧಿಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗುವುದು. -ಡಾ.ಕೆ.ವಿದ್ಯಾಕುಮಾರಿ, ಜಿಪಂ ಸಿಇಒ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.