ಮೃತ ವಾರಿಯರ್ಸ್ ಕುಟುಂಬಕ್ಕೆ ಸಿಗದ ಪರಿಹಾರ

ಕೋವಿಡ್ ಮಹಾಮಾರಿಗೆ ಕಲ್ಪತರು ನಾಡಿನಲ್ಲಿ ಏಳು ಮಂದಿ ಬಲಿ, ಹಲವು ವಾರಿರ್ಸ್ ಗೆ ಸೋಂಕು

Team Udayavani, Oct 19, 2020, 4:50 PM IST

ಮೃತ ವಾರಿಯರ್ಸ್ ಕುಟುಂಬಕ್ಕೆ ಸಿಗದ ಪರಿಹಾರ

ಕಲ್ಪತರು ನಾಡಿನಲ್ಲಿ ಕೋವಿಡ್ ಅಟ್ಟಹಾಸವನ್ನು ಇನ್ನೂ ನಿಲ್ಲಿಸಿಲ್ಲ, 18 ಸಾವಿರಕ್ಕೂ ಹೆಚ್ಚು ಜನ ಸೋಂಕಿನಿಂದ ನರಳುತ್ತಿದ್ದಾರೆ. ಕೋವಿಡ್‌ನಿಂದ 380ಕ್ಕೂ ಹೆಚ್ಚು ಜನ ಉಸಿರು ಚೆಲ್ಲಿದ್ದಾರೆ. ಇವರಲ್ಲಿ ಸೋಂಕಿತರನ್ನು ನೋಡಿಕೊಳ್ಳುವ ವೈದ್ಯರು,ಪೊಲೀಸರು, ಶಿಕ್ಷಕರು ಇತರೆ ವಾರಿಯರ್ಸ್‌ಗಳು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಇನ್ನೂ ಪರಿಹಾರ ದೊರೆಕಿಲ

ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದು ಈ ಮಹಾಮಾರಿಗೆ ಈವರೆಗೆ 380ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ.

ಅದರಲ್ಲಿ ಕೋವಿಡ್ ವಾರಿಯರ್ಸ್‌ ಗಳಾಗಿ ಕೆಲಸ ಮಾಡಿದ್ದ 7ಮಂದಿಯೂ ಹುತಾತ್ಮರಾಗಿದ್ದಾರೆ. ವಿಶ್ವವ್ಯಾಪಿ ತೀವ್ರವಾಗಿ ಹರಡುತ್ತಿರುವ ಕೋವಿಡ್ ಮಹಾಮಾರಿ ಈಗ ದೇಶದಲ್ಲಿ, ರಾಜ್ಯದಲ್ಲಿ ನಮ್ಮ ಜಿಲ್ಲೆಯಲ್ಲಿಯೂ ತೀವ್ರವಾಗಿ ವ್ಯಾಪಿಸುತ್ತಿದೆ. ಕೊರೊನಾ ದಿಂದ ಜನರನ್ನು ಗುಣ ಮುಖ ಮಾಡಲು ಶ್ರಮಿಸುತ್ತಿರುವ ಕೋವಿಡ್ ವಾರಿಯರ್ಸ್‌ಗಳನ್ನೂ ಬಿಡದೇ ಈ ಮಹಾಮಾರಿ ತನ್ನ ಆರ್ಭಟ ಪ್ರದರ್ಶಿಸಿ ಅವರ ಜೀವವನ್ನೂ ಬಲಿ ತೆಗೆದುಕೊಂಡಿದೆ.

ಜಿಲ್ಲೆಯಲ್ಲಿ ಈವರೆಗೆ ಹತ್ತಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್ ಕಾಣಿಸಿ ಕೊಂಡಿದ್ದು ಅವರಲ್ಲಿ ಗುಬ್ಬಿ ಮತ್ತು ಕುಣಿಗಲ್‌ನ ಇಬ್ಬರು ವೈದ್ಯರು ಮೃತಪಟ್ಟಿದ್ದಾರೆ. ಇದಲ್ಲದೇ ಕೋವಿಡ್ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿರುವ ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸರು, ಪತ್ರಕರ್ತರು, ಚಾಲಕರು, ನಿರ್ವಾಹಕರು, ಶಿಕ್ಷಕರು, ಉಪನ್ಯಾಸಕರು ಕೊರೊನಾ ದಿಂದ ತೊಂದರೆ ಅನುಭವಿಸಿ ಕೆಲವರು ನಿಧನಹೊಂದಿದ್ದಾರೆ.

ಇಬ್ಬರು ವೈದ್ಯರ ಸಾವು: ಜನಮಾನಸದಲ್ಲಿ ವೈದ್ಯೋನಾರಾಯಣೋ ಹರಿ ಎಂಬನುಡಿಯಿದೆ, ಅನಾರೋಗ್ಯದಿಂದ ಆಸ್ಪತ್ರೆಗೆ ಸೇರುವ ರೋಗಿಯನ್ನು ತಾವು ನೀಡುವ ಚಿಕಿತ್ಸೆ ಮೂಲಕ ಗುಣಪಡಿಸುತ್ತಾರೆ. ಈಗ ವಿಶ್ವವ್ಯಾಪಿ ಹರಡಿರುವ ಕೋವಿಡ್ ಮಹಾಮಾರಿಯಿಂದ ಜನರನ್ನು ರಕ್ಷಿಸಲು ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆಯಲ್ಲಿ ಜಿಲ್ಲೆಯ ಕುಣಿಗಲ್‌ ಮತ್ತು ಗುಬ್ಬಿಯ ವೈದ್ಯರು ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದು ಇನ್ನೂ ಹಲವು ವೈದ್ಯರಿಗೆ ಸೋಂಕು ತಗಲಿದ್ದರೂ ಚಿಕಿತ್ಸೆಯಿಂದ ಗುಣ ಮುಖರಾಗಿದ್ದಾರೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ: ವೈದ್ಯರ ರೀತಿಯಲ್ಲಿಯೇ ಕೆಲಸ ಮಾಡುತ್ತಾ ಸದಾ ಕೋವಿಡ್ ಸೋಂಕಿತರ ಆರೈಕೆ ಮಾಡುವ ನರ್ಸ್ ಗಳು, ಮನೆ ಮನೆಗೆ ತೆರಳಿ ಜನರಲ್ಲಿ ಅರಿವು ಮೂಡಿಸುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಸೇರಿದಂತೆ ಆರೋಗ್ಯಇಲಾಖೆಯಲ್ಲಿ ಕೆಲಸ ಮಾಡುವ ಅನೇಕರು ಕೋವಿಡ್ ಮಹಾಮಾರಿ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದಾರೆ, ಇಂದಿಗೂ ಆತಂಕದ ನಡುವೆಯೇ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನೆರವಾಗುತ್ತಿದ್ದಾರೆ.

ಇಬ್ಬರು ಪೊಲೀಸರ ಸಾವು: ಕೋವಿಡ್ ವಾರಿಯರ್ಸ್‌ ಗಳಾಗಿ ಪೊಲೀಸರುಕೆಲಸ ಮಾಡುತ್ತಿದ್ದಾರೆ ಲಾಕ್‌ ಡೌನ್‌ ವೇಳೆಯಲ್ಲಿ ಜನರಲ್ಲಿ ಅರಿವು ಮೂಡಿಸಿ ಕ್ವಾರಂಟೈನ್‌ ಪ್ರದೇಶದಲ್ಲಿ ಕೆಲಸ ಮಾಡಿ ಇಂದಿಗೂ ಕೋವಿಡ್ ವಾರಿಯರ್ಸ್‌ ಗಳಾಗಿ ಕೆಲಸ ಮಾಡುತ್ತಿದ್ದಾರೆ, ಕೆಲಸ ಮಾಡುವ ವೇಳೆಯಲ್ಲಿ ಅನೇಕ ಪೊಲೀಸರಿಗೂ ಕೋವಿಡ್ ಸೋಂಕು ಕಾಣಿಸಿ ಕೊಂಡಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಮೂವರು ಶಿಕ್ಷಕರ ಸಾವು: ಸರ್ಕಾರವಿದ್ಯಾಗಮದ ಮೂಲಕ ಮಕ್ಕಳಿಗೆ ಸಾಮಾಜಿಕ ಅಂತರದಲ್ಲಿ ಶಿಕ್ಷಣ ಕಲಿಸುವ ವ್ಯವಸ್ಥೆ ಯಲ್ಲಿ ನಡೆ‌ಯುತ್ತಿತ್ತು. ಆದರೆ ಮಹಾಮಾರಿ ಕೋವಿಡ್ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರನ್ನೂ ಬಿಡದೇ ಕಾಡುತ್ತಿದೆ, ಜಿಲ್ಲೆಯಲ್ಲಿ 36 ಶಿಕ್ಷಕರಿಗೆ ಕೊರೊನಾ ಕಾಣಿಸಿಕೊಂಡು ಅದರಲ್ಲಿ 30 ಶಿಕ್ಷಕರು ಗುಣಮುಖರಾಗಿದ್ದಾರೆ, ಮೂರು ಜನ ಶಿಕ್ಷಕರು ಮೃತಪಟ್ಟಿದ್ದಾರೆ, ಇದಲ್ಲದೇ ಪ್ರತಿನಿತ್ಯ ನಗರವನ್ನು ಸ್ವಚ್ಛಮಾಡುವ ಪೌರಕಾರ್ಮಿಕರಲ್ಲಿ ಹಲವರಿಗೆ ಕೋವಿಡ್ ಸೋಂಕು ಕಾಣಿಸಿ ಕೊಂಡು ಗುಣಮುಖವಾಗಿದೆ.

ಅದೇ ರೀತಿ ಪದವಿ ಪೂರ್ವ ಕಾಲೇಜುಗಳ 7 ಜನ ಉಪನ್ಯಾಸಕರಿಗೂ ಕೋವಿಡ್ ಸೊಂಕು ತಗುಲಿದೆ. ಪರಿಹಾರ ದೊರೆತಿಲ್ಲ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ವೈದ್ಯರು, ಶಿಕ್ಷಕರು, ಪೊಲೀಸರಿಗೆ ಸರ್ಕಾರ ದಿಂದ ಸಿಗಬೇಕಾಗಿರುವ ಪರಿಹಾರ ಇನ್ನೂ ದೊರೆತ್ತಿಲ್ಲ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಗಳು ಹೇಳುವಂತೆ ಸರ್ಕಾರಕ್ಕೆಮಾಹಿತಿ ಕಳುಹಿಸ ಲಾಗಿದೆ ಅಲ್ಲಿಂದ ಬರಬೇಕುಎನ್ನುತ್ತಾರೆ. ವೈದ್ಯರು ಮೃತಪಟ್ಟುಎರಡು ತಿಂಗಳು ಕಳೆಯುತ್ತಿದ್ದರೂ ಇನ್ನೂ ಪರಿಹಾರ ದೊರೆತ್ತಿಲ

ಜಿಲ್ಲೆಯಲ್ಲಿ ಕೋವಿಡ್ ವಾರಿಯರ್ಸ್‌ ಗಳಾಗಿ ವೈದ್ಯರು, ನರ್ಸ್ ಗಳು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸರು, ಪತ್ರಕರ್ತರುಕೆಲಸ ಮಾಡುತ್ತಿದ್ದಾರೆ,ಅದರಲ್ಲಿಕೆಲವರಿಗೆ ಸೋಂಕು ತಗಲಿ ಗುಣಮುಖರಾಗಿದ್ದಾರೆ. ನಮ್ಮ ಇಬ್ಬರು ವೈದ್ಯರು ಮೃತಪಟ್ಟಿದ್ದು ಅವರಿಗೆ ಪರಿಹಾರದ ಬಗ್ಗೆ ಸೂಕ್ತ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಡಾ.ಎಂ.ಬಿ.ನಾಗೇಂದ್ರಪ್ಪ, ಡಿಎಚ್‌ಒ

ಜಿಲ್ಲೆಯಲ್ಲಿ 36 ಶಿಕ್ಷಕರಿಗೆ ಕೋವಿಡ್ ಕಾಣಿಸಿಕೊಂಡು ಅದರಲ್ಲಿ 30 ಶಿಕ್ಷಕರು ಗುಣಮುಖ ರಾಗಿದ್ದಾರೆ. ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಗುಬ್ಬಿ ತಾಲೂಕಿನ ಇಬ್ಬರು ಶಿಕ್ಷಕರು ಮತ್ತು ತುಮಕೂರು ತಾಲೂಕಿನ ಒಬ್ಬರು ಶಿಕ್ಷಕರು ಕೋವಿಡ್ ದಿಂದ ಮೃತಪಟ್ಟಿದ್ದಾರೆ. ಸಿ.ನಂಜಯ್ಯ, ಡಿಡಿಪಿಐ

 

-ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.