ಕೊರಟಗೆರೆ: ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿದ ಸರಕಾರಿ ಶಾಲೆ ಮುಖ್ಯ ಶಿಕ್ಷಕ
Team Udayavani, Oct 16, 2021, 7:12 PM IST
ಕೊರಟಗೆರೆ: ತಹಶಿಲ್ದಾರ್ ಕಛೇರಿಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸರಕಾರಿ ಕೆಲಸ ಪಡೆದಿರುವ ಕೋಳಾಲ ಮೂಲದ ಮುಖ್ಯ ಶಿಕ್ಷಕರ ವಿರುದ್ದ ತುಮಕೂರು ಡಿಸಿಆರ್ ಇ ಘಟಕದ ಪೋಲಿಸ್ ಇನ್ಸ್‌ಪೆಕ್ಟರ್ ಮಹಮ್ಮದ್ ಸಲೀಂ ನೀಡಿದ ದೂರಿನ ಅನ್ವಯ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ ತಾಲ್ಲೂಕು ಗೋವಿನಹಳ್ಳಿ ಸರಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕ ಅಗಿರುವ ಲೇಟ್ ನಾಗಣ್ಣನ ಮಗನಾದ ವೀರಮಲ್ಲಯ್ಯ(59) ಮೂಲತಃ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ವ್ಯಾಪ್ತಿಯ ರಂಗಾಪುರ ಗ್ರಾಮದ ವಾಸಿ. ಕೊರಟಗೆರೆ ಪಿಎಸ್ಐ ನಾಗರಾಜು ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತುಮಕೂರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ.
ಮುಖ್ಯ ಶಿಕ್ಷಕ ವೀರಮಲ್ಲಯ್ಯ ಮೂಲತಃ ಪ್ರವರ್ಗ-2(A) ರಲ್ಲಿ ಬರುವ ಕುರುಬ ಸಮುದಾಯಕ್ಕೆ ಸೇರಿದ್ದಾನೆ.ಕೊರಟಗೆರೆ ತಹಶಿಲ್ದಾರ್ ರಿಂದ 1985 ಸೆಪ್ಟೆಂಬರ್20 ರಂದು ಐಸಿಸಿ ಆರ್/37/1985- 86 ರ ಪರಿಶಿಷ್ಟ ಪಂಗಡದ ಕಾಡ ಕುರುಬ ಎಂಬ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ ಪರಿಶಿಷ್ಟ ಪಂಗಡದ ಮೀಸಲಾತಿ ಕೋಟಾದಲ್ಲಿಯೇ ಶಾಲಾ ಶಿಕ್ಷಕನಾಗಿ ನೇಮಕ ಆಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಸರಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕನಾಗಿ ಸರಕಾರಿ ನೌಕರಿಗೆ ನೇಮಕಾತಿ ಮತ್ತು ಮುಖ್ಯ ಶಿಕ್ಷಕನಾಗಿ ಮುಂಬಡ್ತಿಯನ್ನು ಹಾಗೂ ಇತರೆ ಎಲ್ಲಾ ರೀತಿಯ ಸರಕಾರಿ ಸೌಲಭ್ಯ ಪಡೆದುಕೊಂಡು ಸರಕಾರಕ್ಕೆ ಮತ್ತು ನಿಜವಾದ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ವಂಚನೆ ಮಾಡಿರುವುದು ಸಾಬೀತಾಗಿದೆ ಎಂದು ದೂರು ದಾಖಲಿಸಿ ಮುಂದಿನ ತನಿಖೆಯ ಬಗ್ಗೆ ತುಮಕೂರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಘಟಕಕ್ಕೆ ವರ್ಗಾವಣೆ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.