Crime: ಪ್ರೀತಿಸಬೇಡ ಎಂದ ತಂದೆಯನ್ನೇ ಕೊಲ್ಲಿಸಿದಳು!
Team Udayavani, Feb 14, 2024, 12:57 PM IST
ಕುಣಿಗಲ್: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ತಂದೆಯನ್ನೇ ಮಗಳು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಕೃತ್ಯಕ್ಕೆ ತಾಯಿಯೂ ಬೆಂಬಲ ನೀಡಿದ್ದು ತಾಲೂಕಿನ ಜನ ಬೆಚ್ಚಿ ಬಿದ್ದಿದ್ದಾರೆ.
ಕಳೆದ 3 ದಿನಗಳ ಹಿಂದೆ ಕುಣಿಗಲ್ ತಾಲೂಕಿನ ಹೇರೂರು ಸಮೀಪದ ಕುಳ್ಳಿ ನಂಜಯ್ಯನಪಾಳ್ಯದ ಬಳಿ ಅತಿಥಿ ಶಿಕ್ಷಕ ಕೆ.ಜಿ.ಮರಿಯಪ್ಪ ಎಂಬವರನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ನಡೆದ ಮೂರೇ ದಿನದಲ್ಲಿ ಪೊಲೀಸರು ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನರ್ಸಿಂಗ್ ವಿದ್ಯಾರ್ಥಿನಿ: ಕೊಲೆಯಾದ ಮರಿಯಪ್ಪನ ಪುತ್ರಿ ನರ್ಸಿಂಗ್ ವಿದ್ಯಾರ್ಥಿನಿ ಕೆ.ಎಂ.ಹೇಮಲತಾ, ಪತ್ನಿ ಶೋಭಾ, ಪ್ರಿಯಕರ ಶಾಂತಕುಮಾರ್, ಹಾಗೂ ಜಮೀನು ವಿಚಾರದಲ್ಲಿ ಮರಿಯಪ್ಪ ಅವರೊಂದಿಗೆ ವಿವಾದ ಇಟ್ಟುಕೊಂಡಿದ್ದ ಸಂತೋಷ್, ಆತನ ಸ್ನೇಹಿತರಾದ ಹೇಮಂತ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಮೂರು ಮಂದಿ ಸೇರಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಗಳೇ ದೂರು ನೀಡಿದ್ದಳು: ತಂದೆ ಕೊಲೆಯಾ ಗಿರುವುದು ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದ ಮಗಳು ಹೇಮಲತಾ, ಕುಣಿಗಲ್ ಠಾಣೆಗೆ ಹೋಗಿ ದೂರು ನೀಡಿದ್ದಳು. ಗ್ರಾಮಸ್ಥರೊಬ್ಬರು ಮನೆ ಬಳಿ ಬಂದು ಊರಾಚೆಯ ಜಮೀನಿನಲ್ಲಿ ನಿಮ್ಮ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು. ಈ ಸಂಬಂಧ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಳು.
ದಾರಿ ತಪ್ಪಿಸಿದಳು: ತನ್ನ ಬಗ್ಗೆ ಅನುಮಾನ ಬಾರದಂತೆ ಪ್ರಯತ್ನಿಸಿದ ಹೇಮಲತಾ ಗ್ರಾಮದ ಶಿವಕುಮಾರ್, ನನ್ನ ತಂದೆ ಮರಿಯಪ್ಪ ಅವರ ನಡುವೆ ವೈಮನ ಸ್ಸಿತ್ತು. ಅವರೇ ಕೊಲೆ ಮಾಡಿರಬಹು ದೆಂದು ಪೊಲೀಸರಿಗೆ ತಿಳಿಸಿ ದಾರಿ ತಪ್ಪಿಸಿ ದ್ದಳು. ಈ ಸಂಬಂಧ ಪೊಲೀಸರು ಶಿವ ಕುಮಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹೇಮಲತಾ ಹೇಳಿದ್ದು ಸುಳ್ಳಾಗಿತ್ತು.
ಕೊಲೆ ಜಾಡು: ಹೇಮಲತಾ ಪ್ರೇಮ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದರು. ಕೊಲೆ ನಡೆದ ರಾತ್ರಿಯೇ ಶಾಂತಕುಮಾರ ಹಾಗೂ ಹೇಮಂತ್ ವಾಸವಿದ್ದ ಬೆಂಗಳೂರು ಮನೆಯನ್ನು ಶೋಧ ನಡೆಸಿ ಅವರ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ಹೇಮಲತಾ, ಹೆಂಡತಿ ಶೋಭಾ ಸೇರಿದಂತೆ 8 ಮಂದಿಯನ್ನು ಜೈಲಿಗಟ್ಟಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಪ್ರಿಯಕರ :
ಮಗಳು ಹೇಮಲತಾ ಅದೇ ಗ್ರಾಮದ ಶಾಂತಕುಮಾರ್ ಎಂಬವನನ್ನು ಪ್ರೀತಿಸುತ್ತಿದ್ದು ಮದುವೆಗೆ ತೀರ್ಮಾನ ಮಾಡಿದ್ದರು. ಕಳೆದ 6 ತಿಂಗಳ ಹಿಂದೆಯೇ ತಂದೆ ಮರಿಯಪ್ಪನಿಗೆ ಈ ವಿಚಾರ ತಿಳಿದು ಶಾಂತಕುಮಾರನನ್ನು ಹಿಡಿದು ಥಳಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಮರಿಯಪ್ಪನ ಮೇಲೆ ದ್ವೇಷ ಹೆಚ್ಚಾಗಿತ್ತು. ಶಾಂತಕುಮಾರ್ ಹಾಲಿ ಬೆಂಗಳೂರಿನಲ್ಲಿ ವಾಸವಾಗಿದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಚರ್ಚಿಸಿ ಕೊಲೆಗೆ ಸಂಚು ರೂಪಿಸಿದ್ದರು. ಇದಕ್ಕೆ ಮಗಳು ಹೇಮಲತಾ, ಪತ್ನಿ ಶೋಭಾ ಸಾಥ್ ನೀಡಿದ್ದರು. ಸುಪಾರಿ ನೀಡಿದ ಪತ್ನಿ, ಮಗಳು ಮರಿಯಪ್ಪನ ಚಲನ-ವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿದ್ದ ಆರೋಪಿಗಳು :
ಅಮಾವಾಸ್ಯೆ ದಿನ ಪೂಜೆ ಮುಗಿಸಿಕೊಂಡು ಊರಿಗೆ ಬರುತ್ತಿದ್ದ ಮರಿಯಪ್ಪನನ್ನು ಶಾಂತಕುಮಾರ್ ಮತ್ತು ಸ್ನೇಹಿತರು ಕುಳ್ಳಿ ನಂಜಯ್ಯನಪಾಳ್ಯ ಸಮೀಪ ಹೊಂಚು ಹಾಕಿ ಕಾದಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮರಿಯಪ್ಪನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿದ್ದಾರೆ. ಗಾಬರಿಯಿಂದ ಬೈಕ್ ಬೀಳಿಸಿ ರಸ್ತೆಪಕ್ಕದ ಜಮೀನಿಗೆ ಓಡಿ ಹೋದ ಮರಿಯಪ್ಪನನ್ನು ಅಟ್ಟಿಸಿಕೊಂಡು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
5 ಲಕ್ಷಕ್ಕೆ ಸುಪಾರಿ; 50 ಸಾವಿರ ಮುಂಗಡ ಪಾವತಿ :
ಮರಿಯಪ್ಪ ಕೊಲೆಗೆ 5 ಲಕ್ಷ ರೂ., ಸುಪಾರಿ ಮಾತನಾಡಿದ್ದು, ಈ ಪೈಕಿ ಮುಂಗಡವಾಗಿ 50 ಸಾವಿರ ರೂ,ಗಳನ್ನು ಹಂತಕರಿಗೆ ನೀಡಿದ್ದರು ಎನ್ನಲಾಗಿದೆ. ಉಳಿದ ಹಣವನ್ನು ಪತಿ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಎಟಿಎಂ ಮೂಲಕ ತೆಗೆದುಕೊಡಲಾಗುವುದೆಂದು ಮರಿಯಪ್ಪ ಪತ್ನಿ ತಿಳಿಸಿದ್ದರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.