ವಿಶ್ವಕ್ಕೆ ಮಾದರಿಯಾದ ದಲಿತ ಸೂರ್ಯ ಅಂಬೇಡ್ಕರ್‌


Team Udayavani, Apr 16, 2019, 5:08 PM IST

tmk-1
ತಿಪಟೂರು: ಸ್ವತಂತ್ರ ಭಾರತದಲ್ಲಿ ಸರ್ವ ಸಮಾನತೆಗಾಗಿ, ಮಾನವೀಯ ಮೌಲ್ಯಗಳ ಸಂವರ್ಧನೆಗಾಗಿ ಹಗಲಿ
ರುಳು ಹೋರಾಡಿ, ಪ್ರಜಾಪ್ರಭುತ್ವದ ವ್ಯವಸ್ಥಿತ ಆಡಳಿತದ ಸುಭದ್ರತೆಗಾಗಿ ಸಂವಿಧಾನ ರಚಿಸಿ ವಿಶ್ವಕ್ಕೆ ಮಾದರಿಯಾದ
ದಲಿತ ಸೂರ್ಯ ಡಾ.ಬಿ.ಆರ್‌. ಅಂಬೇಡ್ಕರ್‌ ಎಂದು ಎಸ್‌ವಿಪಿ ಕಾಲೇಜಿನ ಉಪನ್ಯಾಸಕ ಕೆ.ಎನ್‌. ರೇಣುಕಯ್ಯ ತಿಳಿಸಿದರು.
 ನಗರದ ಚರ್ಚ್‌ ರಸ್ತೆಯ ವೃತ್ತದಲ್ಲಿ ಜಯಕರ್ನಾಟಕ ತಾಲೂಕು ಸಂಘಟನೆ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.
ಅಂಬೇಡ್ಕರ್‌ ಜಯಂತಿ ಕಾರ್ಯಕ್ರವ ದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಮೂಲತಃ ಒಬ್ಬ ಮಹಾ ಮಾನವತಾವಾದಿ. ಅಸಮಾನತೆ ಮತ್ತು ಅಸಹಿಷ್ಣುತೆ ವಾತಾವರಣದಲ್ಲಿನ ಅಸಹ್ಯ ಕರವಾದ ನಡವಳಿಕೆಗಳಿಂದ ರೋಸಿ ಹೋಗಿದ್ದ ಅವರು, ಸಾಮಾಜಿಕ ನ್ಯಾಯಕ್ಕಾಗಿ ಪಣತೊಟ್ಟು ಅವಿರತವಾಗಿ ಹೋರಾಡಿ ಪುರುಷ ಸಿಂಹರೆನಿಸಿ ಕೊಂಡರು. ವಿಶೇಷ ಅಧಿನಿಯಮಗಳನ್ನು ಸಂವಿಧಾನದಲ್ಲಿ ಅಳವಡಿಸಿ ಅವರ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆಯನ್ನು ಹೆಚ್ಚಿಸಿದ್ದರು. ಅಂಥ ಮಹಾಪುರುಷರ ಹೋರಾಟದ ಹಾದಿಯಲ್ಲಿ ಸಾಗುತ್ತ, ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು.
ಆರಾಧ್ಯ ದೈವ: ನಿವೃತ್ತ ಶಿಕ್ಷಕ ಸೋಮ ಶೇಖರ್‌ ಮಾತನಾಡಿ, ಅಂಬೇಡ್ಕರ್‌ ನೊಂದವರ ಬಾಳಿನ ಬೆಳಕು, ದನಿ ಇಲ್ಲದವರ ಪಾಲಿನ ಆರಾಧ್ಯ ದೈವ. ಆತ್ಮವಿಶ್ವಾಸ, ಧೈರ್ಯವನ್ನು ಅಸ್ಪೃಶ್ಯರ ಹೃದಯ ಮನಸ್ಸುಗಳಲ್ಲಿ, ದಮನಿಗಳಲ್ಲಿ ತುಂಬಿದ ಹೃದಯವಂತ. ಅನ್ಯಾಯ, ಶೋಷಣೆಗಳನ್ನು ಹೇಗೆ ಎದುರಿಸಿ ಬಾಳನ್ನು ನಡೆಸಬೇಕೆಂಬ ಜ್ಞಾನ ನೀಡಿದ ಗುರು ಎಂದು ಬಣ್ಣಿಸಿದರು.
ಹೋರಾಟದ ಗುಣ: ಸಂಘಟನೆ ಅಧ್ಯಕ್ಷ ಬಿ.ಟಿ.ಕುಮಾರ್‌ ಮಾತನಾಡಿ, ದಲಿತರ ಆಶಾಜ್ಯೋತಿಯಾದ ಅಂಬೇಡ್ಕರ್‌
ಮಹಾನ್‌ ರಾಷ್ಟ್ರೀಯವಾದಿಯಾಗಿದ್ದರು. ಜಾತಿ, ಮತ, ಪಂಥಗಳ ವಿರುದ್ಧ ಚಿಕ್ಕ ವಯಸ್ಸಿನಲ್ಲಿಯೇ ಪ್ರತಿಭಟನೆ
ಮಾಡುತ್ತಾ ಹೋರಾಟದ ಗುಣ ಬೆಳೆಸಿ ಕೊಂಡಿದ್ದರು ಎಂದರು. ಕಾರ್ಯಕ್ರಮ ದಲ್ಲಿ ಕುಮಾರ್‌ ಆಸ್ಪತ್ರೆ ಡಾ. ಶ್ರೀಧರ್‌, ಮಕ್ಕಳ ಸಾಹಿತಿ ಕೆ. ನಾಗರಾಜಶೆಟ್ಟಿ, ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್‌, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ತಾ. ಅಧ್ಯಕ್ಷ ಶೆಟ್ಟಿಹಳ್ಳಿ ಕಲ್ಲೇಶ್‌, ಗುತ್ತಿಗೆದಾರ ಅಶೋಕ್‌, ವಿಜಯ ಕುಮಾರ್‌, ನಗರ ಸಭೆ ಮಾಜಿ ಸದಸ್ಯ ನಾಗರಾಜು, ಸಂಘ ಟನೆಯ ಪದಾಧಿಕಾರಿಗಳಾದ ಸಾರ್ಥ ವಳ್ಳಿ ಶಿವಕುಮಾರ್‌, ಖಲಂದರ್‌, ಪ್ರಶಾಂತ್‌, ರಾಜೇಶ್‌, ಮಂಜು, ರಾಕಿ, ದಲಿತ ಮುಖಂಡರಾದ ನಾಗತೀಹಳ್ಳಿ ಕೃಷ್ಣಮೂರ್ತಿ, ಮಹದೇವಯ್ಯ, ಶಂಕರಪ್ಪ, ಮುರುಳಿ, ರಮೇಶ್‌, ಉಮಾ ಮಹೇಶ್‌, ವಿರೂಪಾಕ್ಷ ಮತ್ತಿತರರಿದ್ದರು.

ಟಾಪ್ ನ್ಯೂಸ್

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

12-koratagere

Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ

11-koratagere

ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ

10-

Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.