ಮಳೆಗೆ ರದ್ದಾದ ಡಿಸಿಎಂ ಜನಸಂಪರ್ಕ ಸಭೆ
ಅಹವಾಲು ತಂದಿದ್ದ ಸಾರ್ವಜನಿಕರು • ಸಮಸ್ಯೆ ಪರಿಹರಿಸುವ ಭರವಸೆ
Team Udayavani, Jun 23, 2019, 3:05 PM IST
ಕೊರಟಗೆರೆ: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಗ್ರಾಮದಲ್ಲಿ ಜನಸಂಪರ್ಕ ಸಭೆ ಮಾಡುವ ಮೂಲಕ ಜನರೊಂದಿಗೆ ಸರ್ಕಾರ ಇದೆ ಎಂದು ತೋರಿಸುವ ಸಲುವಾಗಿ ಜಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ಶನಿವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆ ಮಳೆ ಯಿಂದ ರದ್ದಾಗಿದೆ.
ಜನಸಂಪರ್ಕ ಸಭೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತು. ದೂರದ ಊರುಗಳಿಂದ ಸಾವಿರಾರು ಜನ ಅಹವಾಲು ನೀಡಲು ಬಂದಿ ದ್ದರು. ಆದರೆ ಕಾರ್ಯಕ್ರಮ 2 ಗಂಟೆ ತಡವಾಗಿ ಆರಂಭವಾದರೂ ಡಿಸಿಎಂ ಮರಮೇಶ್ವರವೇದಿಕೆ ತಲುಪುತಿದ್ದಂತೆ ಮಳೆ ಬಂದು ಸಭೆ ಮೊಟಕು ಗೊಳಿಸಲಾಯಿತು.
ಜಿಲ್ಲೆಯ ಶಾಸಕರ ಸಹಕಾರದಿಂದ ಜನ ಸಂಪರ್ಕ ಸಭೆ ಆಯೋಜಿಸಿ ಜನರ ಸಮಸ್ಯೆ ಸ್ಥಳದಲ್ಲಿಯೇ ಬಗೆಹರಿಸಲು ಪ್ರಯತ್ನಿಸುತ್ತೇನೆ. ಈ ಸಭೆಯನ್ನು ಮತ್ತೂಂದು ದಿನ ನಡೆಸಿ ಜನರ ಅಹವಾಲು ಸ್ವೀಕರಿಸಿ, ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆಂದು ಡಿಸಿಎಂ ಪರಮೇಶ್ವರ ಭರವಸೆ ನೀಡಿದರು.
ಆಂಗ್ಲ ಮಾಧ್ಯಮ ಮಂಜೂರು: ತೋವಿನಕೆರೆ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಮಂಜೂರು ಮಾಡ ಲಾಗಿದೆ. ಶಾಸಕರ ನಿಧಿಯಿಂದ ಸುಮಾರು 20 ಕಂಪ್ಯೂಟರ್ ಒದಗಿಸಲಾಗುವುದು ಎಂದು ಅವರು ಹೇಳಿದರು.
ಕೆರೆಗೆ ನೀರು: ಸಾಲಮನ್ನಾ ಯೋಜನೆ 2019ಕ್ಕೆ ಪೂರ್ಣಗೊಳಿಸಬೇಕೆಂದು ತೀರ್ಮಾನಿಸಲಾಗಿದೆ. ಎತ್ತಿನ ಹೊಳೆ ಹಾಗೂ ಹೇಮಾವತಿ ನೀರಾವರಿ ಯೋಜನೆಗಳಿಂದ ತೋವಿನಕೆರೆ, ಕೆಸ್ತೂರು ಕೆರೆಗೆ ನೀರು ಒದಗಿಸಲು ಕ್ರಮವಹಿಸಲಾಗುವುದು. ತುಮಕೂರಿನ ವಸಂತನರಸಾಪುರದ 16500 ಎಕರೆ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಅತಿ ದೊಡ್ಡ ಕೈಗಾರಿಕಾ ಹಬ್‌ಗ ನೀರಿನ ಸೌಲಭ್ಯ ಕಲ್ಪಿಸಲು ಈ ನೀರಾವರಿ ಯೋಜನೆಯಡಿ ಹೆಬ್ಟಾಕ ಕೆರೆ, ಕೆಸ್ತೂರು ಕೆರೆ, ತೋವಿನಕೆರೆ ಭರ್ತಿ ಮಾಡಲಾಗುವುದು. ಸ್ಥಳೀಯ ರೈತರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ತೋವಿನಕೆರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಜಿ.ಪರಮೇಶ್ವರ ಕೋರಾ ಹೋಬಳಿಯ ಹಂಚಿಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಅನಾರೋಗ್ಯಪೀಡಿತರಾಗಿರುವ ಕೋರಾ ಗ್ರಾಮ ಪಂಚಾಯಿತಿ ಸದಸ್ಯೆ ಪಂಕಜ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಮನೆ ತೆರವಿಗೆ ಬಿಡಲ್ಲ: ಹಿರೇತೋಟ್ಲುಕೆರೆ ಗ್ರಾಮ ದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 3 ಎಕರೆ ಜಾಗದಲ್ಲಿ ನಿವೇಶನ ನೀಡಿ ಆಶ್ರಯ ಯೋಜನೆಯಡಿ ಜನರಿಗೆ 35 ವಸತಿ ನೀಡಲಾಗಿದ್ದು, ಸದರಿ ಮನೆಗಳನ್ನು ತೆರವು ಗೊಳಿಸಲು ಲೋಕಾಯುಕ್ತರು ಡೀಸಿಗೆ ನೋಟಿಸ್ ನೀಡಿರುವುದರ ಬಗ್ಗೆ ಗ್ರಾಮಸ್ಥರು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, ಯಾವುದೇ ಕಾರಣಕ್ಕೂ ಮನೆ ತೆರವು ಗೊಳಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ರಾಜೀವ್‌ನಗರ ಗ್ರಾಮದಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ಪರಿಶೀಲಿಸಿದರು. ಕೆಸ್ತೂರು, ಶಂಭೋನಳ್ಳಿ, ಮಾವುಕೆರೆ, ಬ್ರಹ್ಮಸಂದ್ರ ಗ್ರಾಮಗಳಿಗೂ ಭೇಟಿ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಸಿಇಒ ಶುಭಾ ಕಲ್ಯಾಣ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.