ಕೊರಟಗೆರೆ ಪ. ಪಂ. ಸಾಮಾನ್ಯ ಸಭೆ: ಫ್ಲೆಕ್ಸ್ ಗಳಿಗೆ ಕಡಿವಾಣ ಹಾಕಲು ನಿರ್ಣಯ
Team Udayavani, Nov 9, 2022, 8:11 PM IST
ಕೊರಟಗೆರೆ: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ಫ್ಲೆಕ್ಸ್ ಗಳ ಆರ್ಭಟಕ್ಕೆ ಕಡಿವಾಣ ಹಾಕಲು ನಿರ್ಣಯ ಕೈಗೊಂಡು, ಪಟ್ಟಣದಲ್ಲಿನ ಹಲವು ವರ್ಷಗಳ ನ್ಯೂನತೆಗಳನ್ನು ಸರಿಪಡಿಸುವ ತೀರ್ಮಾನ ಕೈಗೊಳ್ಳಲಾಯಿತು.
ಬುಧವಾರದಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಾವ್ಯಶ್ರೀ ಅವರ ಅದ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡರೂ ಅವುಗಳನ್ನು ಪಾಲಿಸುವಲ್ಲಿ ನಿರ್ವಹಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಕಾದು ನೋಡಬೇಕಿದೆ.
ಸಭೆಯಲ್ಲಿ ಸದಸ್ಯ ನಂದೀಶ್ ಮಾತನಾಡಿ, ಪಟ್ಟಣದಲ್ಲಿ ಇತ್ತೀಚೆಗೆ ಅನಗತ್ಯ ಫ್ಲೆಕ್ಸ್ ಗಳು ತಿಂಗಳು ಗಟ್ಟಲೆ ಇದ್ದು ಇದರಿಂದ ಸಾರ್ವಜನಿಕರಿಗೆ ಗೊಂದಲ ಕಿರಿಕಿರಿ ಬಗ್ಗೆ ಪ್ರಸ್ತಾಪಿಸಿದಾಗ, ಇನ್ನು ಮುಂದೆ ಪಟ್ಟಣದಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಗ್ ಕಟ್ಟುವರು ಅವರ ಕಾರ್ಯಕ್ರಮಕ್ಕೆ ಎರಡು ದಿನಗಳ ಹಿಂದೆ ಕಟ್ಟಿ ಎರಡು ದಿನ ನಂತರ ತರೆವು ಗೊಳಿಸಬೇಕು, ಅದಕ್ಕೂ ಮುಂಚೆ ಪಟ್ಟಣ ಪಂಚಾಯತಿಗೆ ಅಡಿಗೆ 2 ರೂ ನಂತೆ ಶಲ್ಕ ಪಾತಿಸಿಬೇಕು, ಈ ನಿಯಮ ಮೀರಿದರೆ ಅವುಗಳನ್ನು ಪ.ಪಂ ಯಿಂದ ತೆರವು ಗೊಳಿಸಲಾಗುತ್ತದೆ ಎಂದರು.
ಸದಸ್ಯ ಪುಟ್ಟನರಸಯ್ಯ ಮಾತನಾಡಿ ಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಅನಧಿಕೃತ ನಲ್ಲಿ ಸಂಪರ್ಕಗಳಿದ್ದು ಅವುಗಳನ್ನು ಬಂದ್ ಮಾಡಬೇಕು, ಇಲ್ಲವೇ ಅಧಿಕೃತ ಗೊಳಿಸಿ ಪಟ್ಟಣ ಪಂಚಾಯತಿಗೆ ಆದಾಯ ಬರುವಂತೆ ಮಾಡಬೇಕು ಹಾಗೂ ಹಲವಾರು ಮನೆಗಳ ಮುಂದೆ ಅನಗತ್ಯವಾಗಿ ನಲ್ಲಿಗಳಲ್ಲಿ ನೀರು ಪೋಲಾಗಿ ಚಂರಡಿಗಳಲ್ಲಿ ಹರಿಯುತ್ತಿದೆ, ಮುಖ್ಯ ಪೈಪ್ ಲೈನ್‌ನ್ನು ಡ್ಯಾಮೇಜ್ ಮಾಡುತ್ತಿದ್ದಾರೆ.ಆದರೂ ವಾಟರ್‌ಮ್ಯಾನ್‌ಗಳು ಇವುಗಳ ಬಗ್ಗೆ ಹಲವು ಬಾರಿ ಹೇಳಿದರೂ ಗಂಭೀರವಾಗಿ ತೆಗೆದುಕೊಳ್ಳದೆ ಇದ್ದು ಇನ್ನು ಮುಂದೆ ಇದರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು, ಪಟ್ಟಣದಲ್ಲಿನ ಹಲವು ಬಡವರಿಗೆ ಹಳೆ ಮನೆ ರೀಪೇರಿಗೆ ಹಣ ಮಂಜೂರಿಗೆ ಸದಸ್ಯ ನಟರಾಜು ಆಗ್ರಹಿಸಿದರು.
ಪಟ್ಟಣದಲ್ಲಿನ ನಿರ್ಮಾಣ ವಾಗಬೇಕಾಗಿರುವ ಪಟ್ಟಣ ಪಂಚಾಯತಿ ಆಶ್ರಯ ಯೋಜನೆ ಮನೆಗಳು, ಪ.ಪಂ. ಜಾಗದಲ್ಲಿ ನಿರ್ಮಾಣವಾಗಿರುವ ಹಲವು ಮನೆಗಳ ಖಾತೆಯ ಗೋಂದಲದ ಬಗ್ಗೆ, ಕೋಳಚೆ ಪ್ರದೇಶದ ಮನೆಗಳ ನಿರ್ಮಾಣದ ಲೋಪದೋಷಗಳನ್ನು ಕೂಡಲೆ ಮುಖ್ಯಾಧಿಕಾರಿಗಳು ಸರಿಪಡಿಸುವಂತೆ ಸದಸ್ಯ ಕೆ.ಆರ್. ಓಬಳರಾಜು ಪ್ರಸ್ತಾಪಿಸದರು.
ಹಿರಿಯ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ ಪಟ್ಟಣದ ಅಭವೃದ್ದಿಗೆ ಪ.ಪಂಗೆ ೬ ಕೋಟಿ ರೂ ವಿಶೇಷ ಅನುಧಾನ ಶಾಸಕರು ಮುಂಜೂರು ಮಾಡಿಸಿದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ, ಈ ಬಗ್ಗೆ ಇಂಜಿನಿಯರ್ ಚುರುಕುಗೊಳ್ಳಬೇಕು, ಸಿಬ್ಬಂದಿಗಳ ಕೊರತೆ, ಇದರಿಂದ ಜನರ ಮುಂದೆ ನಾವುಗಳು ತಲೆ ತಗ್ಗಿಸಬೇಕಿದೆ ಎಂದರು.
ಸಭೆಯಲ್ಲಿ ಗೌರಿಬಿದನೂರು ಮುಖ್ಯ ರಸ್ತೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಮದ್ಯೆ ರಸ್ತೆಯ ಜಾಗದಲ್ಲಿ ನಿರ್ಮಾಣವಾಗಿರುವ ಮತ್ತು ವಾಗುತ್ತಿರುವ ಅನಧಿಕೃತ ಮನೆಗಳ ತೆರವು ಬಗ್ಗೆ, ಬೀದಿ ಬದಿ ವ್ಯಾಪಾರಿಗಳ ನಿರ್ದಿಷ್ಟ ಜಾಗದ ಬಗ್ಗೆ, ನ್ಯಾಯಾಲಯದಲ್ಲಿರುವ ಕಸ ವಿಲೇವಾರಿ ಘಟಕದ ಬಗ್ಗೆ, ಅಗ್ರಹಾರ ಕುಡಿಯುವ ನೀರಿನ ಘಟಕದ ಭೂಸ್ವಾಧೀನದ ಪರಿಹಾರದ ವಿಳಂಬ ಬಗ್ಗೆ ಹಾಗೂ ನೂತನ ಸ್ಥಾಯಿ ಸಮಿತಿ ಬಗ್ಗೆ ಪ್ರಸ್ತಾಪಿಸಲಾಯಿತು.
ಅಧ್ಯಕ್ಷೆ ಕಾವ್ಯಶ್ರೀ ಮಾತನಾಡಿ, ಪಟ್ಟಣದಲ್ಲಿ ಹಲವಾರು ಅಭಿವೃದಿ ಕಾಮಗಾರಿಗಳು ಅಗಿವೆ, ಅದರೆ ಅವುಗಳ ಉದ್ಘಾಟನೆ ಕಾರ್ಯಕ್ರಮಗಳು ಆಗಿಲ್ಲ, ಅದೇ ರೀತಿ ನ್ಯಾಯಾಲಯದಲ್ಲಿ ಇರುವ ಹಲವು ಪ್ರಕರಣಗಳನ್ನು ನ್ಯಾಯಲಯದಲ್ಲೇ ಹೋರಾಟ ಮಾಡಿ ಸರಿಪಡಿಸಿಕೊಳ್ಳಲಾಗುವುದು ಎಂದರು.
ಮುಖ್ಯಾಧಿಕಾರಿ ಭಾಗ್ಯಮ್ಮ ಮಾತನಾಡಿ ನಾನು ಪ.ಪಂಗೆ ಏಪ್ರಿಲ್ ತಿಂಗಳಿಂದ ಅಧಿಕಾರಿಯಾಗಿ ಬಂದ ಮೇಲೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹಾಗೂ ಪಟ್ಟಣ ಪಂಚಾಯಿತಿ ನಿರ್ಣಯಗಳನ್ನು ಅಧ್ಯಕ್ಷರ ಮತ್ತು ಸದಸ್ಯರ ರೊಂದಿಗೆ ಜಾರಿ ತರುವುದಾಗಿ ತಿಳಿಸಿದರು.
ಸಭೆಯಲ್ಲಿ ಪ.ಪಂ ಉಪಾಧ್ಯಕ್ಷೆ ಭಾರತಿ, ಸದಸ್ಯರುಗಳಾದ ನಾಗರಾಜು, ಹೇಮಲತಾ, ಅನಿತಾ, ಹುಸ್ನಪಾರಿಯಾ, ರಂಗನಾಥ್, ಗೋವಿಂದರಾಜು, ಆಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.