ಕ್ರಿಯಾ ಯೋಜನೆ ವಿಳಂಬ: ಅಧಿಕಾರಿಗೆ ತರಾಟೆ
Team Udayavani, Jul 6, 2019, 5:06 PM IST
ಕುಣಿಗಲ್ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಲೋಕೋಪ ಯೋಗಿ ಇಲಾಖೆ ಅಧಿಕಾರಿಯನ್ನು ತಾಲೂಕು ಪಂಚಾಯತಿ ಅಧ್ಯಕ್ಷ ಹರೀಶ್ ನಾಯ್ಕ ತರಾಟೆ ತೆಗೆದುಕೊಂಡರು. ಇಒ ಶಿವರಾಜಯ್ಯ ಇದ್ದರು.
ಕುಣಿಗಲ್: ದೇವಾಲಯ ನಿರ್ಮಾಣದ ಕ್ರಿಯಾ ಯೋಜನೆ ತಯಾರಿಸದ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಡಿ.ಜೆ. ಪ್ರಕಾಶ್‌ಗೆ ತಾಪಂ ಅಧ್ಯಕ್ಷ ಹರೀಶ್ ನಾಯ್ಕ ತರಾಟೆ ತೆಗೆದುಕೊಂಡ ಘಟನೆ ತಾಪಂ ಕೆಡಿಪಿ ಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಹರೀಶ್ ನಾಯ್ಕ, ಬೋರಸಂದ್ರ, ದಾಸನಪುರ ಹಾಗೂ ತೆಪ್ಪಸಂದ್ರ ಗ್ರಾಮದ ದೇವಸ್ಥಾನಗಳ ಅಭಿವೃದ್ಧಿ ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ ಎಂದು ಸಿಟ್ಟಾದರು.
ಲೋಕೋಪಯೋಗಿ ಅಧಿಕಾರಿಗಳು ಸರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕೇಳಿದರೆ ಗೊತ್ತಿಲ್ಲ ಎನ್ನುವ ಸಿದ್ಧ ಉತ್ತರವಿರುತ್ತದೆ. ಕ್ರಿಯಾ ಯೋಜನೆ ತಯಾರಿಸಲು ಎಷ್ಟು ದಿನ ಬೇಕು. ಕ್ರಿಯಾ ಯೋಜನೆ ತಯಾರಿಸಲು ಲಂಚ ಬೇಕಾದರೆ ಗ್ರಾಮಸ್ಥರಿಗೆ ಕೊಡಲು ಹೇಳುತ್ತೇನೆ ಎಂದು ಹರೀಶ್ ಹರಿಹಾಯ್ದರು.
ಗಬ್ಬೆದ್ದಿದೆ ಪ್ರವಾಸಿ ಮಂದಿರ: ಪ್ರತಿ ವರ್ಷ ಲಕ್ಷಾಂತರ ಖರ್ಚು ಮಾಡಿ ಪ್ರವಾಸಿ ಮಂದಿರ ಅಭಿವೃದ್ಧಿ ಮಾಡುತ್ತಿದ್ದೀರಿ. ಆದರೆ ಸ್ವಚ್ಛತೆ ಇಲ್ಲದೇ ಅವ್ಯವಸ್ಥೆಯಿಂದ ಕೂಡಿದೆ. ಒಂದು ಕಾರ್ಯಕ್ರಮವನ್ನು ಸರಿಯಾಗಿ ಮಾಡಲು ಆಗುತ್ತಿಲ್ಲ,. ಅಭಿವೃದ್ಧಿ ನೆಪದಲ್ಲಿ ಖರ್ಚು ತೋರಿಸಿ ಹಣ ಲಪ ಟಾಯಿಸುತ್ತಿದ್ದೀರಾ ಎಂದು ಅಧಿಕಾರಿಗೆ ಹರೀಶ್ ನಾಯ್ಕ, ಕಿಡಿಕಾರಿದರು. ಲೋಕೋ ಪಯೋಗಿ ಕಿರಿಯ ಇಂಜಿನಿಯರ್ ಪ್ರಕಾಶ್ ಮಾತನಾಡಿ, ಮುಂದಿನ ವರದಿ ಯಲ್ಲಿ ಸರಿಪಡಿಸಿ ಮಾಹಿತಿ ನೀಡುವುದಾಗಿ ತಿಳಿಸಿದರು.
70 ಲಕ್ಷ ರೂ. ರೇಷ್ಮೆ ಬೆಳಗಾರರ ಖಾತೆಗೆ : ರೇಷ್ಮೆ ಸಹಾಯಕ ನಿರ್ದೇಶಕ ರವಿ ಮಾತನಾಡಿ, 1.4ಕೋಟಿ ರೂ. ರೇಷ್ಮೆ ಬೆಳೆಗಾರರ ಬೋನಸ್ ಬಾಕಿ ಉಳಿದಿತ್ತು. ಈ ಪೈಕಿ ಈಗ 70 ಲಕ್ಷ ರೂ. ಬೆಳೆಗಾರರ ಖಾತೆಗೆ ಪಾವತಿಸಲಾಗಿದೆ. ಉಳಿಕೆ 24 ಲಕ್ಷ ರೂ. ಬೋನಸ್ ಬರಬೇಕಾಗಿದೆ. ಇನ್ನೆರಡು ತಿಂಗಳಲ್ಲಿ ಪಾವತಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮರಗಡ್ಡಿ ಬೇಸಾಯ ಪದ್ಧತಿಯಲ್ಲಿ ಹಿಪ್ಪು ನೇರಳೆ ಸೊಪ್ಪು ಬೆಳೆಯಲು ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಸಂಬಂಧ ಭಕ್ತರ ಹಳ್ಳಿಯಲ್ಲಿ 6 ಹಾಗೂ ಮಡಿಕೆಹಳ್ಳಿಯಲ್ಲಿ 60 ರೈತರು ಮರಗಡ್ಡಿ ಬೇಸಾಯ ಪದ್ಧತಿ ಅಳವಡಿಸಿ ಕೊಂಡಿದ್ದಾರೆ. ಹುಲಿಯೂರುದುರ್ಗ ಹಾಗೂ ಸಂತೆ ಮಾವತ್ತೂರು ಭಾಗದಲ್ಲಿ ಈ ಪದ್ಧ್ದತಿ ಅಳವಡಿಸಿಕೊಳ್ಳುವ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ, ತಾಲೂಕಿನಲ್ಲಿ ಕ್ಷಯ ರೋಗ ಪತ್ತೆ ಆಂದೋಲನ ಹಮ್ಮಿಕೊಂಡು ಜಾಗೃತಿ ಮೂಡಿಸ ಲಾಗುತ್ತಿದೆ. ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವುದು. 155 ಕ್ಷಯ ರೋಗಿಗಳನ್ನು ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿ ದರು. ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಪಶು ಇಲಾಖೆ ಸಹಯಕ ನಿರ್ದೇಶಕ ಶಶಿಕಾಂತ್‌ಬೂದಾಳ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಕಾರ್ಮಿಕ ನಿರೀಕ್ಷಕಿ ಅನುಪಮ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.