ಕಾಮಗಾರಿ ಕೈಗೊಳ್ಳಲು ಇಂಜಿನಿಯರ್‌ಗಳ ವಿಳಂಬ
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಸಮಾಧಾನ
Team Udayavani, Jul 13, 2019, 5:13 PM IST
ತುಮಕೂರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ ಸಂಬಂಧಿಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿದರು.
ತುಮಕೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಇಂಜಿನಿಯರ್‌ಗಳು ವಿಳಂಬ ಮಾಡಿ ರುವುದರಿಂದ ಪ್ರಗತಿ ಸಾಧನೆಯಲ್ಲಿ ಹಿನ್ನೆಡೆ ಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯೋಜನೆಗೆ ಸಂಬಂಧಿಸಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ವರ್ಕ್‌ಸಾಫ್ಟ್ ತಂತ್ರಾಂಶ: ಅಧಿಕಾರಿ, ಇಂಜಿನಿಯರ್‌ಗಳು ನಿಗದಿತ ಅವಧಿಯೊಳಗೆ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತಿಲ್ಲ. ಕಾಮಗಾರಿಪೂರ್ಣಗೊಳಿಸದಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಒಟ್ಟು 946 ಕೋಟಿ ರೂ. ಖರ್ಚಾಗದೆ ಬಾಕಿ ಉಳಿದಿದೆ. ಸದರಿ ಕಾಮಗಾರಿಗಳ ಪ್ರಗತಿ ಮೇಲೆ ಕಣ್ಣಿಡಲು ವರ್ಕ್ ಸಾಫ್ಟ್ ಎಂಬ ತಂತ್ರಾಂಶ ಹೊಸದಾಗಿ ಸೃಜಿಸ ಲಾಗಿದ್ದು, ಶಾಸಕರ ನಿಧಿ ಯಡಿ ಕೈಗೊಳ್ಳಲಾಗುವ ಕಾಮಗಾರಿಗಳ ಪ್ರಗತಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದರು.
2 ವರ್ಷದೊಳಗೆ ಪೂರ್ಣಗೊಳಿಸಿ: ಕಾಮಗಾರಿ ಅನುಷ್ಠಾನಾಧಿಕಾರಿಗಳು ಜಿಲ್ಲಾಧಿಕಾರಿಗೆ ಸಲ್ಲಿ ಸುವ ಮಾಹಿತಿಗೂ ಸಭೆಗೆ ತರುವ ಮಾಹಿತಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಸರ್ಕಾರದ ಮಾರ್ಗಸೂಚಿಯನ್ವಯ ಯಾವುದೇ ಕಾಮ ಗಾರಿ ಶಾಸಕರು ಪ್ರಸ್ತಾಪಿಸಿದರೆ ಗರಿಷ್ಠ 2 ವರ್ಷ ದೊಳಗೆ ಪೂರ್ಣಗೊಳಿಸಬೇಕು. 2 ವರ್ಷ ದೊಳಗೆ ಪೂರ್ಣಗೊಳಿಸದಿದ್ದಲ್ಲಿ ಅನುದಾನ ರದ್ದಾಗುತ್ತದೆ ಎಂದರು.
ಯಾವುದೇ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿ ಯಲ್ಲಿ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದಲ್ಲಿ 30 ದಿನಗಳೊಳಗೆ ಜಿಲ್ಲಾಧಿಕಾ ಆಡಳಿತಾತ್ಮಕ ಅನುಮೋದನೆ ನೀಡಬೇಕು. ಶಾಸಕರ ನಿಧಿಯಡಿ ಕೈಗೊಳ್ಳುವ 5 ಲಕ್ಷ ರೂ. ಅಂದಾಜು ವೆಚ್ಚದೊಳಗಿನ ಕಾಮಗಾರಿಗಳಿಗೆ ಟೆಂಡರ್ ಕರೆಯುವ ಅಗತ್ಯವಿರುವುದಿಲ್ಲ. ಕಾಮಗಾರಿಯ ಅಂದಾಜು ಮೊತ್ತ 5 ಲಕ್ಷ ರೂ. ಒಳಗಿದ್ದರೆ ಗರಿಷ್ಠ 60 ದಿನಗಳೊಳಗಾಗಿ ಪೂರ್ಣ ಗೊಳಿಸಬೇಕೆಂಬ ನಿಯಮವಿದೆ ಎಂದರು.
1600 ಕಾಮಗಾರಿ ಬಾಕಿ: ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ 2009-10 ರಿಂದ 2018-19ರ ಅಂತ್ಯದವರೆಗೆ ಒಟ್ಟು 1600 ಕಾಮಗಾರಿ ಬಾಕಿಯಿದ್ದು, 1 ವಾರದೊಳಗೆ ಸದರಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಆಡಳಿತಾತ್ಮಕ ಅನುಮೋದನೆಗೆ ಕ್ರಮವಹಿಸಲಾಗುವುದು. ಎಲ್ಲಾ ಅನುಷ್ಠಾನಾಧಿಕಾರಿಗಳಿಗೆ ವರ್ಕ್‌ಸಾಫ್ಟ್ ತಂತ್ರಾಂಶಕ್ಕೆ ಮಾಹಿತಿ ಅಪ್‌ಲೋಡ್ ಮಾಡಲು ಈಗಾಗಲೇ ಪಾಸ್‌ವರ್ಡ್ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕಾಮಗಾರಿಗಳಿಗೆ ಅನುಮೋದನೆ: ಜಿಲ್ಲಾಧಿ ಕಾರಿ ಡಾ.ಕೆ..ರಾಕೇಶ್‌ಕುಮಾರ್ ಮಾತನಾಡಿ, ಕೆಲ್ಯಾಡ್ಸ್ ಸಾಮಾನ್ಯ ಕೋಟಾದಡಿ 446 ಕಾಮ ಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸ ಲಾಗಿದ್ದು, 347 ಕಾಮಗಾರಿಗಳಿಗೆ ಅನು ಮೋದನೆ ನೀಡಲಾಗಿದೆ. 2009ರಿಂದ 2019 ರವರೆಗೆ ಬಾಕಿಯಿರುವ 550 ಕಾಮಗಾರಿ ಕೈಗೊಳ್ಳಲು 1723.22ಲಕ್ಷ ರೂ. ಅಂದಾಜುಪಟ್ಟಿ ತಯಾರಿಸಲಾಗಿದ್ದು, ಈಗಾಗಲೇ 327.06ಲಕ್ಷ ರೂ. ಕಾಮಗಾರಿ ಕೈಗೊಳ್ಳುವ ಅನುಷ್ಟಾನ ಏಜೆನ್ಸಿ ಗಳಿಗೆ ಪಾವತಿಸಲಾಗಿದೆ. ಉಳಿದಂತೆ 1396.18 ಲಕ್ಷ ರೂ.ಗಳ ಪಾವತಿ ಮಾಡ ಬೇಕಾಗಿದೆ. ಅಲ್ಲದೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುವ ಒಟ್ಟು 448 ಕಾಮಗಾರಿಗಳಿಗೆ 1078.57 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಿದ್ದು, ಈವರೆಗೆ 6ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಉಳಿದಂತೆ 1072.57ಲಕ್ಷ ರೂ. ಪಾವತಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ 2008ರಿಂದ 2019ರ ಆರ್ಥಿಕ ವರ್ಷದ ಅಂತ್ಯದವರೆಗೆ ಒಟ್ಟು 7788 ಕಾಮ ಗಾರಿಗಳಿಗೆ ಮಂಜೂರಾತಿ ದೊರೆತಿದೆ. ಇದರಲ್ಲಿ 6145 ಕಾಮಗಾರಿ ಪೂರ್ಣಗೊಳಿಸಲಾಗಿದೆ ಹಾಗೂ 1105 ಕಾಮಗಾರಿಗಳು ಪ್ರಗತಿ ಹಂತ ದಲ್ಲಿದ್ದು, 538 ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಶಿಸ್ತು ಕ್ರಮ ಎಚ್ಚರಿಕೆ: ಕಾಮಗಾರಿ ಪ್ರಗತಿ ಸಾಧಿಸದೆ ಉದಾಸೀನ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ನಿರ್ದಿಷ್ಟ ಪ್ರಗತಿ ಸಾಧಿಸಲು ಸಕಾಲ ಮಾದರಿ ಅನುಸರಿಸಬೇಕು. ಇಂಜಿನಿಯರ್‌ಗಳು ಕೇಂದ್ರ ಸ್ಥಾನದಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸ ಬೇಕು. ಹೊಣೆಗಾರಿಕೆ ಅರ್ಥ ಮಾಡಿಕೊಳ್ಳಬೇಕು. ವರ್ಕ್‌ಸಾಫ್ಟ್ ಅಂಕಿ-ಅಂಶಗಳನ್ನು ಸಕಾಲ ಪದ್ಧತಿಗೆ ಅಳವಡಿಸಿದಾಗಲೇ ಪ್ರಗತಿ ಕುಂಠಿತ ವಾಗಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರಿಂದ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಡಾ.ಶಾಲಿನಿ ರಜನೀಶ್ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಇರುವ 106 ಗ್ರಾಮಗಳಲ್ಲಿ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೊಳವೆಬಾವಿಗಳ ಮರುಪೂರಣ ಕೆಲಸ ಕೈಗೊಳ್ಳಲಾಗಿದೆಯೇ ಎಂದು ಸಭೆಗೆ ಮಾಹಿತಿ ಕೇಳಿದಾಗ ಜಿಲ್ಲಾಧಿಕಾರಿ ಮಾತನಾಡಿ, ಮಧುಗಿರಿಯಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಕ್ರಮ ಕೈಗೊಂಡು ಯಶಸ್ವಿಯಾಗಿ ದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ಈ ಪದ್ಧತಿ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರ ನಿಧಿಯಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಮಣ್ಣು ಪರೀಕ್ಷೆ, ನೀರಿನ ಗುಣ ಮಟ್ಟ ಪರೀಕ್ಷೆ ಕೈಗೊಳ್ಳಲು ಎಲ್ಲಾ ಇಲಾಖೆಗಳ ಕಾರ್ಯಪಾಲಕ ಇಂಜಿನಿಯರ್‌ಗಳ ಕಚೇರಿ ಯಲ್ಲಿ ಪ್ರಯೋಗಾಲಯ ಸ್ಥಾಪಿಸ ಬೇಕೆಂದು ನಿರ್ದೇಶನ ನೀಡಿದರು. ಜಿಪಂ ಸಿಇಒ ಶುಭಾಕಲ್ಯಾಣ್, ಯೋಜನಾ ಅನುಷ್ಠಾನಾಧಿ ಕಾರಿಗಳು, ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.