ವನ್ಯ ಜೀವಿಗಳಿಗೆ ಆಸರೆಯಾದ ಇಲಾಖೆ-ರಂಭಾಪುರಿ ಮಠ
ಕಳ್ಳಬೇಟೆ ತಡೆಯಲು ಇಲಾಖೆಯಿಂದ ವೀಕ್ಷಣೆ ಗೋಪುರ • ಸಿದ್ದರಬೆಟ್ಟ ಮಠದಿಂದ ಪ್ರಾಣಿ-ಪಕ್ಷಿಗಳಿಗೆ ನೀರಿನ ಪೂರೈಕೆ
Team Udayavani, May 4, 2019, 3:59 PM IST
ಕೊರಟಗೆರೆ: ಬಯಲುಸೀಮೆ ಪ್ರದೇಶವಾದ ಕೊರಟ ಗೆರೆ ಕ್ಷೇತ್ರದ ಬೆಟ್ಟಗುಡ್ಡಗಳಲ್ಲಿ ನೀರಿನ ಅಭಾವ ಸೃಷ್ಟಿ ಸಿದೆ. ಆಹಾರ-ನೀರಿಗಾಗಿ ವನ್ಯಜೀವಿಗಳು ನಾಡಿನತ್ತ ಧಾವಿಸುತ್ತಿವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಸಿದ್ದರಬೆಟ್ಟದ ರಂಭಾಪುರಿ ಮಠ ವನ್ಯ ಜೀವಿಗಳಿಗೆ ಆಸರೆಯಾಗಿವೆ. ಈಗಾಗಲೇ ತಿಮ್ಮಲಾಪುರ ಅಭ ಯಾರಣ್ಯ ಮತ್ತು ಚನ್ನರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಜಲ ಹೊಂಡಗಳನ್ನು ನಿರ್ಮಿಸಿ ಕುಡಿಯುವ ನೀರಿನ ಪೂರೈಕೆ ಮಾಡಿ ವನ್ಯ ಜೀವಿಗಳನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಅನುಪಲು ಗ್ರಾಮದ ಸಮೀಪದ ತಿಮ್ಮಲಾಪುರ ಅಭಯಾರಣ್ಯದ ದಟ್ಟ ಕಾಡಿನಲ್ಲಿ 3 ಕಡೆ ಮತ್ತು ಚನ್ನರಾಯನದುರ್ಗ ಬೆಟ್ಟದ ಅರಣ್ಯ ಪ್ರದೇಶದಲ್ಲಿ 3 ಕಡೆ ಕಾಡಿನ ಪ್ರಾಣಿ ಮತ್ತು ಪಕ್ಷಿಗಳಿಗೆ ಪ್ರತಿದಿನ ಕುಡಿಯಲು ನೀರಿನ ಪೂರೈಕೆ ಮಾಡುವ ಮೂಲಕ ನೂತನ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಅನುಪಲು ಗ್ರಾಮದ ಸಮೀಪದ ತಿಮ್ಮಲಾಪುರ ಅಭಯಾರಣ್ಯದ 1200ಹೆಕ್ಟೇರ್ ಪ್ರದೇಶ ಮತ್ತು ಚನ್ನರಾಯನದುರ್ಗ ಬೆಟ್ಟದ 1400ಹೆಕ್ಟೇರ್ ಅರಣ್ಯದಲ್ಲಿ ಚಿರತೆ, ಕರಡಿ, ಚಿಪ್ಪುಹಂದಿ, ಮುಳ್ಳಂದಿ, ನರಿ, ಕಡವೆ, ಮೊಲ, ಜಿಂಕೆ, ನವಿಲು, ಕಾಡುಕುರಿ, ಕತ್ತೆಕಿರುಬ, ಕಾಡುಕೋಳಿ, ಜಂಗಲ್ಪೋಲ್ ಮತ್ತು ಪಕ್ಷಿಗಳಾದ ನೀಲಕಂಠ, ಬುಲ್ಬುಲ್, ಗಿಳಿ, ಗೌಜಗಾನಹಕ್ಕಿ, ಕೊಕ್ಕರೆ, ಬಿಲುವನಹಕ್ಕಿ ಸೇರಿದಂತೆ ನೂರಾರು ಬಗೆಯ ಪ್ರಾಣಿ ಮತ್ತು ಪಕ್ಷಿಗಳಿವೆ.
ಪ್ರಾಣಿಪಕ್ಷಿಗಳ ವೀಕ್ಷಣೆಗೆ ಗೋಪುರ: ತಿಮ್ಮಲಾಪುರ ಅಭಯಾರಣ್ಯದ ಬೆಟ್ಟದ ತುದಿಯ ಮೇಲ್ಭಾಗದಲ್ಲಿ ಅರಣ್ಯ ಇಲಾಖೆಯಿಂದ ಪ್ರಕೃತಿ ಸಂರಕ್ಷಣೆ ಯೋಜನೆಯಡಿ 2ಲಕ್ಷ ರೂ., ವೆಚ್ಚದಲ್ಲಿ 40ಅಡಿ ಎತ್ತರದ ವೀಕ್ಷಣಾ ಗೋಪುರವಿದೆ. ವನ್ಯಜೀಗಳ ವೀಕ್ಷಣೆ ಮತ್ತು ಕಳ್ಳ ಬೇಟೆ ತಡೆಯುವ ಉದ್ದೇಶಕ್ಕೆ ಸಹಕಾರಿ ಆಗಲಿದೆ. ಸಿದ್ದರಬೆಟ್ಟ, ಚನ್ನರಾಯನದುರ್ಗ ಮತ್ತು ಹಿರೇಬೆಟ್ಟದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಬೇಕಾಗಿದೆ.
ರಕ್ಷಣಾ ಶಿಬಿರದ ಕಚೇರಿ: ತಿಮ್ಮಲಾಪುರ ಅಭಯ ರಣ್ಯದ 2 ಕಡೆ ಅರಣ್ಯ ಇಲಾಖೆ ಪ್ರಕೃತಿ ಸಂರಕ್ಷಣೆ ಯೋಜನೆಯಡಿ 16ಲಕ್ಷ ರೂ.,ವೆಚ್ಚದಲ್ಲಿ ರಕ್ಷಣಾ ಶಿಬಿರದ ಕಚೇರಿ ನಿರ್ಮಿಸಿ ಆ ಕಚೇರಿಗೆ ಚಿರತೆ ಮತ್ತು ಕರಡಿ ಎಂದು ನಾಮಕರಣ ಮಾಡಲಾಗಿದೆ.
ಶಿಬಿರದ ಮನೆಯಲ್ಲಿ ವಾಸಿಸುವ 4 ಜನ ಕಾವಲುಗಾರರು ಅರಣ್ಯದಲ್ಲಿ ಗಸ್ತು ನಡೆಸುವ ಮೂಲಕ ಪ್ರಾಣಿಪಕ್ಷಿಗಳ ಚಲನವಲನದ ಮೇಲೆ ನಿಗಾ ಇಡಲಿದ್ದಾರೆ.
ಸಿದ್ದರಬೆಟ್ಟಕ್ಕೆ ಜಲ ಹೊಂಡ ಅಗತ್ಯ: ಸಿದ್ದರಬೆಟ್ಟದ 663ಹೆಕ್ಟೇರ್ ಅರಣ್ಯ ಮತ್ತು ಹಿರೇಬೆಟ್ಟದ 954ಹೆಕ್ಟೇರ್ ಅರಣ್ಯದಲ್ಲಿ ಸಾವಿರಾರು ಬಗೆಯ ಪ್ರಾಣಿ-ಪಕ್ಷಿಗಳು ವಾಸಿಸುತ್ತೀವೆ. ನೀರು ಮತ್ತು ಆಹಾರದ ಕೊರತೆಯಿಂದ ಪ್ರಾಣಿಗಳು ಪ್ರತಿದಿನ ರೈತರ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಜೊತೆ ಸಂಘ-ಸಂಸ್ಥೆ ಮತ್ತು ಪ್ರಕೃತಿ ಪ್ರಿಯರು ಪ್ರಾಣಿಪಕ್ಷಿಗಳ ರಕ್ಷಣೆಗೆ ಧಾವಿಸಬೇಕಾಗಿದೆ.
● ಪದ್ಮನಾಭ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.