ಬಿತ್ತನೆ ಬೀಜ ಖರೀದಿಯಲ್ಲಿ ನಿರುತ್ಸಾಹ

Team Udayavani, May 21, 2019, 10:37 AM IST

tumkur-tdy-2..

ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದ ಬಳಿ ರೈತ ಬೀರಪ್ಪ ಬಿತ್ತನೆ ಕಾರ್ಯದಲ್ಲಿ ನಿರತರಾಗಿರುವುದು.

ಹುಳಿಯಾರು: ಹೋಬಳಿಯಲ್ಲಿ ಮುಂಗಾರು ಪೂರ್ವ ವರ್ಷಧಾರೆ ಕೈ ಕೊಟ್ಟಿದೆ. ಪರಿಣಾಮ ಕಳೆದ ವರ್ಷ ಮೇ ಮಾಹೆಯಲ್ಲಾಗಲೇ ಬಿತ್ತನೆ ಕಾರ್ಯ ಮುಗಿಸಿದ್ದ ರೈತ ಈ ವರ್ಷ ಉಳಿಮೆ ಸಹ ಮಾಡದೆ ಮಳೆ ಎದುರು ನೋಡುತ್ತಿದ್ದಾನೆ. ಆದರೂ, ಮಳೆ ಬರುವುದೋ ಇಲ್ಲವೋ ಎಂಬ ಅನುಮಾನ ಸಹ ರೈತ ವಲಯದಲ್ಲಿ ಮೂಡಿದ್ದು ಬಿತ್ತನೆ ಬೀಜ ಖರೀದಿಯಲ್ಲಿ ನಿರುತ್ಸಾಹ ತೋರುತ್ತಿದ್ದಾರೆ.

ಮಳೆ ಬಂದ ತಕ್ಷಣ ಬಿತ್ತನೆ ಮಾಡುವ ಉದ್ದೇಶದಿಂದ ರೈತರು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಟ್ಟುಕೊಳ್ಳುತ್ತಾರೆ. ಹಾಗಾಗಿ ಹುಳಿ ಯಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲು ಆರಂಭಿಸಿದೆ.

ಅಲ ಸಂದೆ, ಹೆಸರು, ಉದ್ದು, ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಬೀಜ ಗಳನ್ನು ವಿತರಿಸಲಾಗುತ್ತಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿತ್ತನೆ ಬೀಜ ಖರೀದಿಯೇ ಇಲ್ಲದಾಗಿದೆ. ಕಳೆದ ವರ್ಷ ಮೇ ಮಾಹೆ ಯಲ್ಲಾಗಲೇ 3,286 ಕೆ.ಜಿ. ಹೆಸರು, 545 ಕೆ.ಜಿ.ತೊಗರಿ, 205 ಕೆ.ಜಿ.ಉದ್ದು ಖರೀದಿಸಿದ್ದರು.

ಆದರೆ ಈ ವರ್ಷ ಕೇವಲ 300 ಕೆ.ಜಿ. ಹೆಸರು ಹಾಗೂ 60 ಕೆ.ಜಿ ಉದ್ದು ಮಾರಾಟ ವಾಗಿದ್ದು, ಇನ್ನೂ 2250 ಕೆ.ಜಿ. ಹೆಸರು, 200 ಕೆ.ಜಿ. ಉದ್ದು, 540 ಕೆ.ಜಿ.ತೊಗರಿ, 450 ಕೆ.ಜಿ. ಅಲಸಂದೆ ದಾಸ್ತಾನಿದೆ ಎಂದು ಸಹಾಯಕ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಬೀಜ ಖರೀದಿಗೆ ರೈತ ಹಿಂದೇಟು ಹಾಕುತ್ತಿ ರುವುದಕ್ಕೆ ಮಳೆ ಬಾರದಿರುವುದು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್ ತಿಂಗಳಲ್ಲಿ ಬೀಳುವ ಪೂರ್ವ ಮುಂಗಾರು ಮಳೆ ಸಹ ಒಂದೇ ಒಂದು ಹನಿ ಈ ಭಾಗದಲ್ಲಿ ಬಿದ್ದಿಲ್ಲ. ಕಳೆದ ವರ್ಷ ತಾಲೂಕಿ ನಲ್ಲಿ ಏಪ್ರಿಲ್ನಲ್ಲಿ 34 ಮಿಮೀ, ಮೇನಲ್ಲಿ 140 ಮಿಮೀ ಮಳೆ ಬಿದ್ದಿತ್ತು.

ಆದರೆ ಈ ವರ್ಷ ಏಪ್ರಿಲ್ನಲ್ಲಿ 14 ಮಿಮೀ, ಮೇನಲ್ಲಿ 21 ಮಿಮೀ ಮಳೆ ಬಿದಿದ್ದು ಹುಳಿಯಾರು ಹೋಬಳಿ ಯಲ್ಲಂತೂ ಒಂದು ದಿನ ಸಾಮಾನ್ಯ ಮಳೆ ಬಿಟ್ಟರೆ ಇಲ್ಲಿಯವರೆವಿಗೆ ಮಳೆಯೇ ಆಗಿಲ್ಲ.

ಹಾಗಾಗಿ ಈ ಭಾಗದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದ್ದು ಕಳೆದ ಮೂರ್ನಲ್ಕು ದಿನಗಳ ಹಿಂದೆ ಬಿದ್ದ ಅಲ್ಪ ಮಳೆಯಿಂದ ಮುಂದೆ ಮಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲ ರೈತರು ಉಳುಮೆ ಮಾಡಿ ಮಣ್ಣನ್ನು ಹದ ಮಾಡಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.

ಉಳಿದಂತೆ ಅಡಿಕೆ ಮತ್ತು ತೆಂಗು ಬೆಳೆಗಾರರು ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ನಲ್ಲಿ ನೀರು ಹೊಡೆ ಸುತ್ತಿದ್ದಾರೆ. ಬಹುತೇಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.

● ಎಚ್.ಬಿ.ಕಿರಣ್‌ ಕುಮಾರ್‌

ಟಾಪ್ ನ್ಯೂಸ್

ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

1-jaya

Legend; ಬಹುಭಾಷಾ ಪ್ರಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ ವಿಧಿವಶ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-koratagere

Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು

KN-Rajaanna

Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ

Tumakuru-Leopard

Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್‌!

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

1-korata

Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.