ದೇವರಾಯನ ದುರ್ಗದಲ್ಲಿ ಪ್ರವಾಸಿಗರ ಹೆಚ್ಚಳ

ಅಧಿಕ ವಾಹನ ಸಂಚಾರದಿಂದ ಜೀವ ವೈವಿಧ್ಯ ನಾಶ; ಚೆಕ್‌ ಪೋಸ್ಟ್‌ ನಿರ್ಮಿಸಿ ನಿಯಂತ್ರಣಕ್ಕೆ ಒತ್ತಾಯ

Team Udayavani, Sep 12, 2021, 5:16 PM IST

ದೇವರಾಯನ ದುರ್ಗದಲ್ಲಿ ಪ್ರವಾಸಿಗರ ಹೆಚ್ಚಳ

ಜಿಲ್ಲೆಯ ಪ್ರಾಕೃತಿಕ ಪ್ರವಾಸಿ ತಾಣದೇರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅಚ್ಚಹಸಿರಿನ ಪ್ರಾಕೃತಿಕ ಸೊಬಗು ಪ್ರವಾಸಿಗರನ್ನುಕೈ ಬೀಸಿ ಕರೆಯುತ್ತಿದೆ. ಈವರೆಗೆ ಕೋವಿಡ್‌ ಹಿನ್ನಲೆಯಲ್ಲಿ ಪ್ರವಾಸಿ ಕೇಂದ್ರಗಳಿಗೆ ಜನ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಕೋವಿಡ್‌ ಕಡಿಮೆಯಾದ ಹಿನ್ನಲೆ ಪ್ರವಾಸಿ ಕೇಂದ್ರಗಳತ್ತ ಪ್ರವಾಸಿಗರು ಬರಲಾರಂಭಿಸಿದ್ದಾರೆ. ದೇವರಾಯನ ದುರ್ಗ ಪ್ರದೇಶದಲ್ಲಿ ವಾಹನ ಸಂಚಾರ ಹೆಚ್ಚಳದಿಂದ ಜೀವ ವೈವಿಧ್ಯಗಳು ನಾಶವಾಗುತ್ತಿವೆ. ಅನಧಿಕೃತ ಅರಣ್ಯ ಪ್ರವೇಶ ಮಾಡುವ ವ್ಯಕ್ತಿಗಳ ತಪಾಸಣೆಗೆ ಚೆಕ್‌ ಪೋಸ್ಟ್‌ ನಿರ್ಮಾಣಕ್ಕೆ ಆಗ್ರಹಕೇಳಿ ಬರುತ್ತಿದೆ.

ತುಮಕೂರು: ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ವಿವಿಧ ಜಾತಿಯ ಮರ ಗಿಡಗಳ ಪ್ರಾಕೃತಿಕ ಸೊಬಗಿನ ತಾಣ, ಕಲ್ಪತರು ನಾಡಿನ ಹವಾಮಾನ ನಿರ್ಧರಿಸುವ, ಹೆಚ್ಚು ಮಳೆ ತರಿಸುವ ದೇವರಾಯನ ದುರ್ಗ ಪ್ರಕೃತಿ ಸೊಬಗು ನೋಡಲು ಹೆಚ್ಚುತ್ತಿರುವ ಪ್ರವಾಸಿಗರಿಂದ
ಇಲ್ಲಿಯ ಜೀವ ವೈವಿಧ್ಯಗಳು ನಾಶವಾಗುತ್ತಿವೆ.

ದೇವರಾಯನ ದುರ್ಗ ಅರಣ್ಯ ಪ್ರದೇಶವು ತುಮಕೂರು ನಗರ ಪ್ರದೇಶಕ್ಕೆ ಹೊಂದಿ ಕೊಂಡಿದ್ದು, ಪಂಡಿತನಹಳ್ಳಿ, ರಾಮದೇವರ ಬೆಟ್ಟ, ಗೊಲ್ಲಹಳ್ಳಿ
ಮೀಸಲು ಅರಣ್ಯ ಹಾಗೂ ಪರಿಭಾವಿತ ಅರಣ್ಯ ಪ್ರದೇಶಗಳಿಂದ ಕೂಡಿರುವುದಲ್ಲದೇ ಈ ಪ್ರದೇಶದಲ್ಲಿ ಐತಿಹಾಸಿಕ ಪ್ರಸಿದ್ಧ ಶ್ರೀಯೋಗನರಸಿಂಹ ಸ್ವಾಮಿ, ಶ್ರೀಭೋಗನರಸಿಂಹ ಸ್ವಾಮಿ ಹಾಗೂ ಶ್ರೀರಾಮಚಂದ್ರ ನೀರಿಗಾಗಿ ಬಾಣ ಹೊಡಿದು ಬಂಡೆಯಿಂದ ನೀರು ತೆಗೆದಿರುವ ನಾಮದ ಚಿಲುಮೆ ಮತ್ತು ಅರಣ್ಯ ಇಲಾಖೆಯಿಂದ ನಿರ್ವಹಣೆ ಮಾಡುತ್ತಿರುವ ಜಿಂಕೆ ವನ ಇತ್ಯಾದಿ ಪ್ರವಾಸಿ ತಾಣಗಳ ಜೊತೆಗೆ ಇಲ್ಲಿಯ ಹಸಿರ ಸಿರಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಸುಂದರ ತಾಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು, ಯುವ ಪ್ರೇಮಿಗಳು ಮೋಜು ಮಸ್ತಿಗಾಗಿ ಬರುತ್ತಿದ್ದಾರೆ.

ಜೀವ ಸಂಕುಲಕ್ಕೆ ತೊಂದರೆ: ಮೋಜು ಮಸ್ತಿಗೆ ಬರುವವರು ರಾತ್ರಿ ವೇಳೆಯಲ್ಲಿ ಹೆಚ್ಚು ಬರುತ್ತಿದ್ದಾರೆ. ಇಲ್ಲಿಗೆ ಬರುವವರು ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಇಲ್ಲಿ ಸಂಚಾರ ಮಾಡುವ ವಿವಿಧ ಬಗೆಯ ಜೀವ ಸಂಕುಲಕ್ಕೆ ತೊಂದರೆ ಉಂಟಾಗುತ್ತಿದೆ. ಮುಂಗಾರುಮಳೆ ತಂಪಾದವಾತಾವರಣಚುಮು ಚುಮು ಚಳಿ, ಮೋಡಗಳ ಸಾಲು ಹಸಿರಿನಿಂದ ಕಂಗೊಳಿಸುವ ಅರಣ್ಯ ನೋಡಲು ಎರಡು ಕಣ್ಣು
ಸಾಲದು. ಇಂತಹ ಸೊಬಗು ನೋಡಿ, ಆನಂದ ಪಟ್ಟು ಹೋದರೆ ತೊಂದರೆ ಇಲ್ಲ. ಇಲ್ಲಿಗೆ ಬರುವವರು ಮಾಡುವ ಕೀಟಲೆಗಳಿಂದ ಇಲ್ಲಿಯ ಜೀವ ಸಂಕುಲಕ್ಕೆ ತೊಂದರೆಯಾಗುತ್ತಿದೆ.

ವಾಹನ ಸವಾರರನ್ನು ತಡೆಯುವವರಿಲ್ಲ: ಕೋವಿಡ್‌ ಲಾಕ್‌ಡೌನ್‌ ತೆರವುಗೊಳಿಸಿದಾಗಿನಿಂದ ಇಲ್ಲಿನ ಹಸಿರು ಬೆಟ್ಟಗಳ ತಂಪಾದ ವನಸಿರಿಗೆ ಆಕರ್ಷಿತರಾದ ಬೆಂಗಳೂರು, ತುಮಕೂರಿನ ಯುವ ಜನಾಂಗ ಬೈಕ್‌, ಕಾರುಗಳ ಮೂಲಕ ಸೂರ್ಯೋದಯಕ್ಕಿಂತ ಮುಂಚೆಯೇ ದುರ್ಗಮ ಕಾಡಿನ ಬೇರೆ ಬೇರೆ ಬೆಟ್ಟಗಳ ಶಿಖರಗಳ ಮೇಲೆ ಛಾಯಾಗ್ರಹಣಕ್ಕಾಗಿ, ಸೆಲ್ಫಿಗಾಗಿ ನೂರಾರು ಜನ ಬರುತ್ತಿದ್ದಾರೆ. ಅಲ್ಲದೆ, ಪ್ರೇಮಿಗಳು ಮತ್ತು ಮದುವೆ ಮಾಡಿಕೊಳ್ಳುವ ಯುವ ಜೋಡಿಗಳು ಫೋಟೋ ಸೆಷನ್‌ಗಾಗಿ ಬರುವುದು ಹೆಚ್ಚುತ್ತಲೇ ಇದೆ. ರಾತ್ರಿ ಇಡೀ ಈ ಅರಣ್ಯ ಪ್ರದೇಶದಲ್ಲಿ
ವಾಹನಗಳ ಸಂಚಾರ ಇರುತ್ತದೆ. ಇದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಈ ವೇಳೆ ವಾಹನ ಸವಾರರನ್ನು ತಡೆಯುವವರು ಯಾರೂ ಅರಣ್ಯ ಪ್ರದೇಶದಲ್ಲಿ ಇರುವುದಿಲ್ಲ,

ಇನ್ನು ಬೆಳಗಿನ ಜಾವ ಹಕ್ಕಿಗಳು, ಚಿಟ್ಟೆಗಳು, ಮೊಲ, ಜಿಂಕೆ, ಕಡವೆ, ಮುಂಗಸಿ ಮುಂತಾದ ಪ್ರಾಣಿಗಳು ಆಹಾರಾನ್ವೇಷಣೆಯಲ್ಲಿ ತೊಡಗಿರುತ್ತವೆ. ಮುಸ್ಸಂಜೆ ರಾತ್ರಿ ಆರಂಭವಾದ ತಕ್ಷಣ ಚಿರತೆ, ಕರಡಿ, ಕಾಡು ಹಂದಿ, ಕಾಡುಪಾಪ, ಹಾವುಗಳು, ಕಪ್ಪೆಗಳು ಆಹಾರ ಹುಡುಕಲು ಪ್ರಾರಂಭಿ ಸುತ್ತವೆ. ಇಂತಹ ವೇಳೆಯಲ್ಲಿ ದೇವರಾಯನ ದುರ್ಗದ ಕಾಡಿನುದ್ದಕ್ಕೂ ಬೆಳಗಿನಿಂದ ರಾತ್ರಿವರೆಗೂ ಮಾನವರ ಓಡಾಟ ನಿರಂತರ ವಾಗಿರುವುದರಿಂದ ಪ್ರಾಣಿ, ಪಕ್ಷಿಗಳ ಖಾಸಗಿ ಜೀವನಕ್ಕೆ ತೊಂದರೆ ಉಂಟಾಗುತ್ತಿದೆ.

ಇದನ್ನೂ ಓದಿ:ಹುಣಸೋಡು ಕ್ವಾರಿ ದುರಂತದಲ್ಲಿ ಮೃತಪಟ್ಟ 6ನೇ ವ್ಯಕ್ತಿಯ ಗುರುತು ಪತ್ತೆ; ಯಾರು ಆ ವ್ಯಕ್ತಿ?

ಕಾಡಿನ ಗರ್ಭಕ್ಕೆ ಸೇರುತ್ತಿದೆ ಘನ ತ್ಯಾಜ್ಯ: ಶನಿವಾರ ಹಾಗೂ ಭಾನುವಾರ ಬಂತೆಂದರೆ ಕಾಡಿನ ಮೂಲೆ ಮೂಲೆಗಳಲ್ಲಿ ಕುಡುಕರ ಗುಂಪಿನಿಂದ ಗುಂಡು ತುಂಡುಗಳ ವಿನಿಮಯ, ಆಹಾರ ತಯಾರಿ, ಮೋಜು ಮಸ್ತಿ ಎಲ್ಲಾ ಇರುತ್ತದೆ. ಸಂರಕ್ಷಿತ ಕಾಡಿನಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗಿದವರೆಲ್ಲಾ ಅಕ್ಷರಸ್ಥರಾಗಿದ್ದರೂ ಅನಾಗರಿಕರಂತೆ ಕೇಕೆ, ಶಿಳ್ಳೆ, ಮೊಬೈಲ್‌ ಸಂಗೀತ ಎಲ್ಲೆ ಮೀರಿ ಪ್ರಶಾಂತ ಕಾಡಿನ ಪರಿಸರದಲ್ಲಿ ಕೇಳಿ ಬರುತ್ತಿದೆ. ಪ್ರತಿದಿನ ಪ್ಲಾಸ್ಟಿಕ್‌, ಗಾಜಿನ ಬಾಟ್ಲಗಳು ಇತ್ಯಾದಿ ಘನ ತ್ಯಾಜ್ಯಗಳುಕಾಡಿನ ಗರ್ಭಕ್ಕೆ ಸೇರ್ಪಡೆಯಾಗುತ್ತಿವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಅಪರೂಪದ ಜೀವ ಸಂಕುಲ ಕಣ್ಮರೆ: ಬೆಟ್ಟದ ಆಸುಪಾಸಿನಲ್ಲಿ ಅಪರೂಪದ ಕೀಟಹಾರಿ ಸಸ್ಯಗಳು, ನೆಲ ಆರ್ಕಿಡ್‌ಗಳು, ಜರೀಗಿಡಗಳು, ಹಾವಸೆ ಸಸ್ಯಗಳು ಬೆಳೆಯುವ ಕಾಲವಿದು. ಇದಲ್ಲದೆ ಕಪ್ಪೆಗಳು, ಜೇಡ, ನೂರಾರು ಬಗೆಯ ಕೀಟಗಳ ಸಂತಾನ ಕಾಲ ಸಹ ಮಳೆಗಾಲವೇ ಆಗಿರುವುದರಿಂದ ಜನಗಳ ಓಡಾಟದಿಂದ ಇಂತಹ ಅಪರೂಪದ ಜೀವ ಸಂಕುಲಗಳು ಕಣ್ಮರೆಯಾಗುತ್ತವೆ. ರಾತ್ರಿ ವೇಳೆಯಲ್ಲಿ ವಾಹನ ಸಂಚಾರದಿಂದ ಕಾಡುಪಾಪ, ಹಾವುಗಳು, ಕಪ್ಪೆಗಳು, ಪಕ್ಷಿಗಳು ರಸ್ತೆ ಅಪಘಾತದಲ್ಲಿ ನಿರಂತರ ಸಾವನ್ನಪ್ಪುತ್ತಿವೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಮಾತ್ರ ದೇವಸ್ಥಾನಕ್ಕೆ ಹೋಗಿಬರಲುಅವಕಾಶ ಮಾಡಿಕೊಟ್ಟು, ಉಳಿದ ಸಮಯದಲ್ಲಿ ಸಾರ್ವಜನಿಕರ ಸಂಚಾರ ನಿರ್ಭಂದಿಸಿ, ಅಲ್ಲಿನ ವನ್ಯಜೀವಿಗಳ ಸ್ವಚಂದ ಜೀವನಕ್ಕೆ ಅವಕಾಶ ಮಾಡಿ ಕೊಡಬೇಕು ಎನ್ನುತ್ತಾರೆ ವನ್ಯಜೀವಿ ತಜ್ಞ ಬಿ.ವಿ.ಗುಂಡಪ್ಪ.

ಅರಿವು ಮೂಡಿಸುವ
ನಾಮಫ‌ಲಕ ಅಳವಡಿಸಿ
ದೇವರಾಯನ ದುರ್ಗಕ್ಕೆಊರ್ಡಿಗೆರೆ, ದುರ್ಗದಹಳ್ಳಿ, ತುಮಕೂರುಕಡೆಯಿಂದ ಪ್ರವೇಶಿಸುವ ಮಾರ್ಗಗಳಿವೆ. ಅಲ್ಲದೆ, ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ಈ ರಸ್ತೆಗಳ ಮೂಲಕವೇ ಹೋಗಬೇಕು. ಜಿಲ್ಲಾಡಳಿತ ದೇವರಾಯದುರ್ಗವನ್ನು ಪ್ರವಾಸಿ ಕೇಂದ್ರ ಮಾಡಲು ಹಲವುಕಾರ್ಯ ಕ್ರಮಗಳನ್ನು ಹಾಕಿ ಕೊಂಡಿದೆ. ರಸ್ತೆಗಳ ಅಭಿವೃದ್ಧಿ ನಡೆಯುತ್ತಿದೆ. ರಸ್ತೆಗಳಲ್ಲಿ ಜನರಲ್ಲಿ ಅರಣ್ಯದ ಬಗ್ಗೆ ಅರಿವು ಮೂಡಿಸುವ ನಾಮಫ‌ಲಕ ಹಾಕಬೇಕು.ಕಾಡಿನ ಒಳಗಡೆಕುಡುದು ಗಾಜುಗಳನ್ನು ಹೊಡೆದು ಹಾಕುವುದನ್ನು ತಪ್ಪಿಸಬೇಕು. ಪ್ಲಾಸ್ಟಿಕ್‌ ಗುಡ್ಡೆ ಹಾಕಿ ಸುಡುವುದನ್ನು ನಿಷೇಧಿ ಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಅಂತರ್ಜಲ ವೃದ್ಧಿಗೆ ಕಾರಣವಾದ ಹಾಗೂ ತುಮಕೂರುಜನರಿಗೆ ಶ್ವಾಸಕೋಶದಂತಿರುವ ದೇವರಾಯನದುರ್ಗ ಸಂರಕ್ಷಿತ ಅರಣ್ಯದಲ್ಲಿಜನರ
ಓಡಾಟದಿಂದ ಅಲ್ಲಿನ ಜೀವ ವೈವಿಧ್ಯ ವಿನಾಶದ ಅಂಚನ್ನು ತಲುಪುತ್ತಿವೆ. ಇದನ್ನು ತಡೆಯಲು ಜಿಲ್ಲಾಡಳಿತ ಅಗತ್ಯ ನಾಮಫ‌ಲಕ ಹಾಕಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಲಿ.
– ಬಿ.ವಿ.ಗುಂಡಪ್ಪ, ಅಧ್ಯಕ್ಷ, ವನ್ಯಜೀವಿ
ಜಾಗೃತಿ ನಿಸರ್ಗ ಸಂಸ್ಥೆ, ತುಮಕೂರು

ಸಂಚಾರ ತಡೆಗೆ ಅರಣ್ಯ
ಇಲಾಖೆಯಿಂದ ಕ್ರಮ
ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಕೆಲವರು ಹಗಲು ರಾತ್ರಿ ಎನ್ನದೇ ಸಂಚಾರ ಮಾಡುವುದು, ಅಲ್ಲಿ ಪಾರ್ಟಿ ಮಾಡಿ ಅಲ್ಲಿಯ ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟಲು ಅರಣ್ಯ ಇಲಾಖೆಯಿಂದ ಕ್ರಮಕೈಗೊಳ್ಳುತ್ತಿ ದ್ದೇವೆ. ಅರಣ್ಯ ಪ್ರದೇಶಕ್ಕೆ ಪ್ರವೇಶಿಸುವ ತುಮಕೂರಿನಿಂದ5 ಮೈಲಿ ಸರ್ಕಲ್‌ ಮತ್ತು ಊರ್ಡಿಗೆರೆ ಬಳಿ ಚೆಕ್‌ ಪೋಸ್ಟ್‌ ತೆರೆಯಲು ಇಲಾಖೆಯಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಕೆಲವು ಮಾಹಿತಿಗಳನ್ನು ಕೇಳಿದ್ದಾರೆ. ಆ ಮಾಹಿತಿ ನಾವು ನೀಡುತ್ತಿದ್ದೇವೆ. ಅದೆಲ್ಲವನ್ನೂ ಪರಿಶೀಲಿಸಿ, ಅಲ್ಲಿಂದ ಅದೇಶ ಬಂದ ತಕ್ಷಣಚೆಕ್‌ ಪೋಸ್ಟ್‌ ಹಾಕಲಾಗು ವುದು ಎಂದು ತುಮಕೂರು ವಲಯ ಅರಣ್ಯಾಧಿಕಾರಿ ಎಚ್‌.ಎಲ್‌.ನಟರಾಜ್‌ ತಿಳಿಸಿದ್ದಾರೆ.

-ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.