ಉದ್ಯಾನವನಗಳ ಅಭಿವೃದ್ಧಿ
Team Udayavani, Dec 3, 2020, 7:44 PM IST
ತುಮಕೂರು: ನಗರದ 21ನೇ ವಾರ್ಡ್‌ನ ಕುವೆಂಪು ನಗರದಲ್ಲಿರುವ ನೇತಾಜಿಉದ್ಯಾನವನವನ್ನು ಸ್ಮಾರ್ಟ್‌ಸಿಟಿವತಿಯಿಂದ ಅಭಿವೃದ್ಧಿ ಪಡಿಸಲು ಒಂದು ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಕುವೆಂಪು ನಗರದ ನೇತಾಜಿ ಉದ್ಯಾನವನವನ್ನು ನಾಗರಿಕ ವೇದಿಕೆಉತ್ತಮವಾಗಿನಿರ್ವಹಣೆಮಾಡಲಾಗುತ್ತಿದ್ದು,ಈ ಹಿಂದೆ ಟೂಡಾ ವತಿಯಿಂದ ಉದ್ಯಾನಕ್ಕೆಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗಿದ್ದು, ನಗರದಲ್ಲಿರುವ ಅತ್ಯುತ್ತಮ ಪಾರ್ಕ್ ಗಳಲ್ಲಿ ಒಂದಾಗಿದೆ ಎಂದರು.
ನಾಗರಿಕ ಸಮಿತಿಗೆ ಧನ್ಯವಾದಗಳು: ಸ್ಮಾರ್ಟ್‌ಸಿಟಿಯಿಂದ ಬಿಡುಗಡೆಯಾಗಿರುವ ಅನು ದಾನದಲ್ಲಿ ವಾಕಿಂಗ್ ಪಾಥ್, ಮಕ್ಕಳ ಆಟೋಪಕರಣ ಹಾಗೂ ಹಿರಿಯ ನಾಗರಿಕರಿಗೂ ಅನುಕೂಲಕರವಾದ ವಾತಾವರಣ ನಿರ್ಮಾಣ ಮಾಡಲು ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದ ಅವರು, ಉದ್ಯಾನವನವನ್ನು ಉತ್ತಮ ವಾಗಿ ನಿರ್ವಹಣೆ ಮಾಡಿದ ನಾಗರಿಕರ ಸಮಿತಿಗೆ ಧನ್ಯವಾದವನ್ನು ತಿಳಿಸಿದರು.
ಅತ್ಯಾಧುನಿಕ ಉದ್ಯಾನವನ ನಿರ್ಮಾಣ: ತುಮಕೂರು ನಗರದಲ್ಲಿರುವ ನೇತಾಜಿ ಉದ್ಯಾನವನ್ನು ನಾಗರಿಕರೆ ಅತ್ಯುತ್ತಮವಾದ ಉದ್ಯಾನವನ್ನು ನಿರ್ವಹಣೆ ಮಾಡಿದ್ದಾರೆ. ಸಾರ್ವಜನಿಕರ ಒತ್ತಾಯದ ಮೇಲೆಎದರ್ಜೆಯಲ್ಲಿರುವ ಈಉದ್ಯಾನ ವನದ ಅಭಿವೃದ್ಧಿಗಾಗಿ ಒಂದು ಕೋಟಿಗೂ ಹೆಚ್ಚು ಅನುದಾನವನ್ನು ನೀಡಲಾಗಿದ್ದು, ಈ ಪಾರ್ಕ್‌ನಲ್ಲಿ ಐಟಿ ಕಾಂಪೋನೆಂಟ್, ಸಿ.ಸಿ. ಟಿವಿ ಕ್ಯಾಮೆರಾ, ಪ್ಯಾನಿಕ್ ಬಟನ್‌ಸೇರಿದಂತೆ ಅತ್ಯಾಧುನಿಕ ಉದ್ಯಾನವನವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಉದ್ಯಾನವನ ನಿರ್ವಹಣೆ: ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಪಡಿಸುತ್ತಿರುವ ಉದ್ಯಾನವನವನ್ನು ನಿರ್ವಹಣೆಯನ್ನು ಪಾಲಿಕೆಯೊಂದಿಗೆ ಸೇರಿಈಭಾಗದ ನಾಗರಿಕರು ಮಾಡಿದರೆ ಉತ್ತಮವಾಗಿ ಉಳಿಯುತ್ತದೆ ಎಂದ ಅವರು, ಪಾಲಿಕೆಯ ವಾರ್ಡ್‌ಗಳಿಗೆ ಸಿಗದ ಅನುದಾನವನ್ನು ಉದ್ಯಾನವನದ ಅಭಿವೃದ್ಧಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂ ರಪ್ಪ ಅವರಿಗೆ ನಾಗರಿಕರು ಧನ್ಯವಾದವನ್ನು ಸಲ್ಲಿಸಬೇಕು ಎಂದು ಹೇಳಿದರು.
ಸಾರ್ವಜನಿಕರಲ್ಲಿ ಮನವಿ: ಪಾಲಿಕೆ ಮೇಯರ್ ಫರೀದಾಬೇಗಂ ಮಾತನಾಡಿ, ನಿರ್ವಹಣೆ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದ್ದ ಉದ್ಯಾನವನ್ನು ಅಭಿವೃದ್ಧಿಪಡಿಸಲು ಶಾಸಕರು ಸ್ಮಾರ್ಟ್‌ಸಿಟಿಯಿಂದ ಅನುದಾನ ವನ್ನು ನೀಡಿದ್ದು, ಸಾರ್ವಜನಿಕರು ಯಾರಾದರೂ ದತ್ತು ತೆಗೆದುಕೊಂಡು ನಿಮ್ಮ ಉದ್ಯಾನವನವನ್ನು ನೀವೇ ಉಳಿಸಿಕೊಳ್ಳಬೇಕು, ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಪಡಿಸಿದಂತೆ ಉಳಿಸಿಕೊಂಡು ನಿರ್ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಾಲಿಕೆ ಸದಸ್ಯೆ ಲಲಿತಾ ರವೀಶ್ ಮಾತನಾಡಿ, ಈ ಭಾಗದಲ್ಲಿ ನಾಗರಿಕರ ಅನುಕೂಲವಾಗಿದ್ದ ಪಾರ್ಕ್ ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದ್ದು,ನಾಗರಿಕರಹಿತದೃಷ್ಟಿಯಿಂದ ಶಾಸಕರು ಅನುದಾನವನ್ನು ಒದಗಿಸಿದ್ದು, ಇದರಿಂದ ಪಾರ್ಕ್ ಅತ್ಯಾಧುನಿಕವಾಗಿ ರೂಪುಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಉಪಮೇಯರ್ ಶಶಿಕಲಾ ಗಂಗ ಹನುಮಯ್ಯ ಸೇರಿದಂತೆ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಇದ್ದರು.
ನಗರದಲ್ಲಿ ಇರುವ ಕೆಲವು ಉದ್ಯಾನವನಗಳನ್ನು ಸ್ಮಾರ್ಟ್ ಸಿಟಿಯೋಜನೆಯಲ್ಲಿ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂಕೆಲವು ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅಭಿವೃದ್ಧಿ ಪಡಿಸಿರುವ ಉದ್ಯಾನವನಗಳನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಅಲ್ಲಿಯ ನಾಗರಿಕರ ಜವಾಬ್ದಾರಿಯಾಗಿರುತ್ತದೆ. – ಜಿ.ಬಿ.ಜ್ಯೋತಿಗಣೇಶ್, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.