ಸಮರ್ಥ ಯೋಜನೆಯಿಂದ ರಾಷ್ಟ್ರ ಅಭಿವೃದ್ಧಿ
Team Udayavani, Sep 19, 2020, 6:52 PM IST
ತುಮಕೂರು: ರಾಷ್ಟ್ರದ ಸಮಗ್ರ ಅಭಿವೃದ್ಧಿಯಲ್ಲಿ ನೀರಾವರಿ ಯೋಜನೆಗಳು, ಕಾಲುವೆಗಳು ಪ್ರಮುಖವಾದ ಪಾತ್ರ ವಹಿಸುತ್ತವೆ ಎಂದು ಜಲ ಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯಪಾಲಕ ಅಭಿಯಂತರ ಎಚ್.ಬಿ.ಮಲ್ಲೇಶ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದಜಿ.ಎಸ್. ಪರಮಶಿವಯ್ಯ ಅಧ್ಯಯನ ಕೇಂದ್ರದಿಂದ ಎಂಜಿನಿಯರ್ದಿನದಅಂಗವಾಗಿ ಹಮ್ಮಿಕೊಂಡ ನೀರಾವರಿ ಯೋಜನೆಯಲ್ಲಿ ಎಂಜಿನಿಯರ್‌ಗಳ ಪಾತ್ರ ಎಂಬ ವಿಷಯದಲ್ಲಿ ಮಾತನಾಡಿದರು.
ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಜಿ.ಎಸ್. ಪರಮಶಿವಯ್ಯ ಈ ದೇಶ ಕಂಡ ಶ್ರೇಷ್ಠಎಂಜಿನಿಯರ್‌ಗಳು. ಅವರ ಯೋಜನೆಗಳಾದ ನೀರಾವರಿ ಕಾಲುವೆ, ಹಳ್ಳ, ಅಣೆಕಟ್ಟು, ಜಲ ಸಂರಕ್ಷಣೆ, ಸಸ್ಯ ಸಂರಕಣೆ, Ò ಸಂಬಂಧಪಟ್ಟ ಹೆಜ್ಜೆಗಳು ಅಭಿವೃದ್ಧಿಯಲ್ಲಿ ಸೂಕ್ತವಾಗಿ ಬಳಸಿ ಕೊಂಡಲ್ಲಿ ಆಧುನಿಕ ಜ್ವಲಂತ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂದರು.
ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನಿಲ್ ಪ್ರಸಾದ್ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರ ಆಡಳಿತಾತ್ಮಕ ಚಿಂತನೆ, ಕಲ್ಪನೆಗಳನ್ನು ಪೂರ್ಣವಾಗಿ ಅಳವಡಿಸಿಕೊಂಡಾಗ ಯುವ ಜನತೆಗೆ ಯೋಗ್ಯವಾದ ಭವಿಷ್ಯವನ್ನು ಮತ್ತು ಆಶಾದಾಯಕವಾದ ಲಕ್ಷಣಗಳನ್ನು ಸ್ಫೂರ್ತಿಯಿಂದ ಮೈಗೂಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಜಿ.ಎಸ್. ಪರಮಶಿವಯ್ಯ ಈ ದೇಶಕಂಡ ಶ್ರೇಷ್ಠ ನೀರಾವರಿ ತಜ್ಞರು ಇವರ ನೀರಾವರಿ ದೃಷ್ಟಿಕೋನ, ಧ್ಯೇಯವನ್ನು ಗ್ರಾಮೀಣ ಜನತೆಯ ಮತ್ತು ಪಟ್ಟಣದ ಅಭಿವೃದ್ಧಿಯ ದೃಷ್ಟಿಯಲ್ಲಿ ಹಂತ ಹಂತವಾಗಿ ಅಳವಡಿಸಿಕೊಂಡಲ್ಲಿ ಪ್ರಸಕ್ತವಾಗಿ ಕಾಡುತ್ತಿರುವ ಹಸಿವು ಮತ್ತು ಜಲ ನೋವುಗಳನ್ನು ನಿವಾರಿಸಬಹುದು ಎಂದರು.
ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್, ಜಿ.ಎಸ್. ಪರಮಶಿವಯ್ಯ ಅಧ್ಯಯನ ಪೀಠದ ಕಾರ್ಯನಿರ್ವಾಹಕ ಡಾ. ರವೀಂದ್ರಕುಮಾರ್ ಇದ್ದರು . ಕಾರ್ಯಕ್ರಮದ ನೆನಪಿಗಾಗಿ ವಿವಿ ಆವರಣದಲ್ಲಿ ಶ್ರೀಗಂಧದ ಗಿಡವನ್ನು ನೆಡಲಾಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ರಸ್ತೆ ದಾಟುವಾಗ ಅಪಘಾತದಲ್ಲಿ ಕರಡಿ ಸಾವು
ಶಿವಕುಮಾರ ಮಹಾಸ್ವಾಮಿ ಪುಣ್ಯಸ್ಮರಣೆ ದಿನ ರಾಷ್ಟ್ರೀಯ ದಾಸೋಹ ದಿನಾಚರಣೆಯನ್ನಾಗಿಸಲು ಆಗ್ರಹ
Koratagere: ಶ್ರೀ ಶಿವಕುಮಾರ ಸ್ವಾಮಿಗಳ ಸೇವಾ ಮನೋಭಾವ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ
Tumkur: ಪತ್ರಕರ್ತರಿಗೆ ಉಚಿತ ಆರೋಗ್ಯ ವಿಮೆ ಕೊಡಿ: ಸರಕಾರಕ್ಕೆ ಒತ್ತಾಯ
Tumakuru: ಎಲ್ಲ ಪತ್ರಕರ್ತರಿಗೆ ಆರೋಗ್ಯ ವಿಮೆ, ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್: ಸಿಎಂ