ತಾಲೂಕಿನಲ್ಲಿ ಶಾಶ್ವತ ಯೋಜನೆ ಅನುಷ್ಠಾನ
Team Udayavani, Jan 21, 2023, 4:52 PM IST
ಪಾವಗಡ: ಕೇವಲ ಮನೆ ನಿರ್ಮಾಣ, ರಸ್ತೆ ನಿರ್ಮಾಣ ಮಾಡಿದರೆ ಸಾಲದು, ತಾಲೂಕಿನಲ್ಲಿ ಶಾಶ್ವತವಾಗಿ ನೂರಾರು ವರ್ಷಗಳ ಕಾಲ ಜನತಗೆ ಉಪಯೋಗವಾಗ ಯೋಜನೆಗಳನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.
ಪಟ್ಟಣದಲ್ಲಿ ಹಲವು ವಾರ್ಡ್‌ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿರುವವರ ಬಗ್ಗೆ ತಾಲೂಕಿನ ಜನತೆಗೆ ಗೊತ್ತಿದೆ. ತಾಲೂಕಿನಲ್ಲಿ ಶಾಶ್ವತ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದವರನ್ನು ಜನತೆ ಎಂದಿಗೂ ಮರೆಯೋದಿಲ್ಲ ಎಂದರು.
ತಾಲೂಕಿನ ಜನತೆಗೆ ಗೊತ್ತು: ನಾಗಲಮಡಿಕೆ ಗ್ರಾಮ ದಲ್ಲಿ ಉತ್ತರ ಪಿನಾಕಿನಿ ನದಿಗೆ ಕಟ್ಟಲಾದ ಡ್ಯಾಂ, ಭದ್ರ ಮೇಲ್ದಂಡೆ ಯೋಜನೆ, ತುಂಗಭದ್ರದಿಂದ ತಾಲೂಕಿಗೆ ಕುಡಿಯುವ ನೀರಿನ, ಎತ್ತಿನಹೊಳೆ ಸೇರಿದಂತೆ ಮತ್ತಿತರ ಯೋಜನೆಗಳನ್ನು ತರಳು ಯಾರು ಎಷ್ಟು ಶ್ರಮವಹಿಸಿ ದ್ದಾರೆಂದು ತಾಲೂಕಿನ ಜನತೆಗೆ ಗೊತ್ತು ಎಂದರು.
ಹಾಸ್ಟೆಲ್ ನಿರ್ಮಾಣಕ್ಕೆ ವಿರೋಧ: ಪಟ್ಟಣದ ತುಮಕೂರು ರಸ್ತೆ ಕಣಿವೆ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ನಿರ್ಮಾಣ ಮಾಡುತ್ತಿರುವ ಹಾಸ್ಟೆಲ್ ಕಟ್ಟಲು ವಿರೋಧ ವ್ಯಕ್ತಪಡಿಸಿದ ಮಾಜಿ ಶಾಸಕ ತಿಮ್ಮರಾಯಪ್ಪ ಇಂದು ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಕಾರ್ಯಕರ್ತರನ್ನು ಕೇಳಲಿ: ಕೇವಲ ಚುನಾವಣೆ ಸಮಯದಲ್ಲಿ ಕಾಣಿಸಿಕೊಂಡು ಎಲ್ಲಾ ನಾನೇ ಮಾಡಿದ್ದು ಎಂದು ಹೇಳುವ ಮಾಜಿ ಶಾಸಕರು, ತಾಲೂಕುನಲ್ಲಿ ತಾವು ಮಾಡಿಸಿರುವ ಶಾಶ್ವತ ಯೋಜನೆ ಬಗ್ಗೆ ಹೇಳಲಿ. ಮನೆ ಕಟ್ಟಿಸಿದೆ, ರಸ್ತೆ ಹಾಕಿಸದೆ, ವಸತಿ ನಿಲಯ ನಿರ್ಮಾಣ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗಾಡುವ ಬದಲು ತಾಲೂಕಿನಲ್ಲಿ ಮಾಡುತ್ತಿರುವ ಕಾಮಗಾರಿಗಳ ಬಗ್ಗೆ ಅವರ ಪಕ್ಷದ ಕಾರ್ಯಕರ್ತರನ್ನು ಕೇಳಲಿ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಆಡಳಿತವಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕುಡಿಯುವ ನೀರಿನ ಯೋಜನೆಗೆ ಹೋರಾಟ ಮಾಡಿದ್ದು ಯಾರೆಂಬುದು ಜನರಿಗೆ ಗೊತ್ತಿದೆ ಎಂದರು. ಚುನಾವಣೆ ಸಮಯದಲ್ಲಿ ಕಾಣಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಮಾಜಿ ಶಾಸಕರ ಬಗ್ಗೆ ಜನತೆಗೆ ಗೊತ್ತು, ಮುಂದಿನ ಚುನಾವಣೆಯಲ್ಲಿ ಅವರಿಗೆ ಜನರೆ ಬುದ್ಧಿ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
ಪುರಸಭೆ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಶಶಿಕಲಾ, ಸದಸ್ಯರಾದ ಸುದೇಶ್ ಬಾಬು, ರಾಜೇಶ್, ಟೆಂಕಾಯಲ ರವಿ, ಮಹಮ್ಮದ್ ಇಮ್ರಾನ್, ನಾಗಭೂಷಣರೆಡ್ಡಿ, ವಿಜಯ ಕುಮಾರ್, ಮಣಿ, ರಾಮಾಂಜಿನಪ್ಪ, ವೆಂಕಟರಮಣಪ್ಪ, ಮಾಲಿನ್ ತಾಜ್, ಜಾಹ್ನವಿ, ಸುಧಾಲಕ್ಷ್ಮೀ, ಮಾಜಿ ಅಧ್ಯಕ್ಷರಾದ ವೇಲುರಾಜು, ಶಂಕರ್‌ರೆಡ್ಡಿ, ಗುರ್ರಪ್ಪ, ಮುಖಂಡರಾದ ಪ್ರಮೋದ್ ಕುಮಾರ್ ಮಾತನಾಡಿದರು. ಮುಖಂಡರಾದ ನಾನಿ ವೆಂಕಟಮ್ಮನಹಳ್ಳಿ, ಕೋಳಿ ಬಾಲಾಜಿ, ಹನುಮಂತರಾಯ, ವಿಶ್ವನಾಥ್, ಫಜುಲುಲ್ಲಾ ಸಾಬ್, ಅಭಿ, ಕಿರಣ್, ಶ್ರೀನಿವಾಸ್, ಹನುಮೇಶ್, ಪಾಪಣ್ಣ, ಮಂಜುನಾಥ್, ಅಲಿ, ವೀಣಾ ಅಂಜನ್ ಕುಮಾರ್, ಸುಮಾ ಅನಿಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.