ವಿದ್ಯಾರ್ಥಿಗಳ ಮನಗೆದ್ದ ಆದರ್ಶ ಶಿಕ್ಷಕ ಧನ್ಯಕುಮಾರ್‌


Team Udayavani, Sep 5, 2021, 3:54 PM IST

ವಿದ್ಯಾರ್ಥಿಗಳ ಮನಗೆದ್ದ ಆದರ್ಶ ಶಿಕ್ಷಕ ಧನ್ಯಕುಮಾರ್‌

ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌, ಲೇಖನಿ ಸಾಮಗ್ರಿ ವಿತರಿಸಿದ ಸಂದರ್ಭ.

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಶಿಕ್ಷಕ ಧನ್ಯಕುಮಾರ್‌ ಅವರು ಸೇವೆಯ ಪ್ರಾರಂಭದ ದಿನದಿಂದಲೂ ಗ್ರಾಮೀಣ ಮಕ್ಕಳ ಪಾಲಿಗೆ ಆದರ್ಶ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೋಸ್ಕರ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ.

ತಂದೆಯ ಮಾರ್ಗದರ್ಶನ: ಶೈಕ್ಷಣಿಕ ಜಿಲ್ಲೆಯಲ್ಲಿ ಮಧುಗಿರಿ ತಾಲೂಕಿನ ಪುರವರ ಹೋಬಳಿ ಬ್ಯಾಲ್ಯ ಎಂಬ ಪುಟ್ಟ ಗ್ರಾಮದಲ್ಲಿ ವರಲಕ್ಷ್ಯಮ್ಮ ಮತ್ತು ಶ್ರೀರಾಮಶೆಟ್ಟಿ ಅವರಿಗೆ ಹಿರಿಯ ಮಗನಾಗಿ ಸೆ.6, 1960ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಓದಿನಲ್ಲಿ ಆಸಕ್ತಿ ಇದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾ ಭ್ಯಾಸವನ್ನು ಸ್ವಗ್ರಾಮದಲ್ಲಿಯೇ ಮುಗಿಸಿದರು. ಪಿಯುಸಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆ, ಪದವಿಯನ್ನು ಎಇಎಸ್‌ ಕಾಲೇಜಿನಲ್ಲಿ ಪೂರ್ಣಗೊಳಿಸಿ.ಬಿ.ಎಡ್‌ ವಿದ್ಯಾಭ್ಯಾಸವನ್ನು ಮಧುಗಿರಿಯ ಟಿವಿವಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪೂರೈಸಿ ಶಿಕ್ಷಕರ ವೃತ್ತಿ
ತರಬೇತಿ ಮುಗಿಸಿದರು. ತಂದೆ ಶ್ರೀರಾಮಶೆಟ್ಟಿ ಅವರು ಶಿಕ್ಷಕರಾಗಿದ್ದರಿಂದ ಅವರ ಮಾರ್ಗದರ್ಶನದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶ, ರಾಧಾಕೃಷ್ಣ, ಅಂಬೇಡ್ಕರ್‌, ಮಹಾತ್ಮಗಾಂಧೀಜಿ, ತತ್ವ ಸಿದ್ಧಾಂತಗಳನ್ನು ಆದರ್ಶವಾಗಿಟ್ಟುಕೊಂಡು ಬೆಳೆದರು.

ಶಿಕ್ಷಕ ಸೇವೆ ಪ್ರಾರಂಭ: ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಜಯಮಂಗಲಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ 1985ರಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, 1987ರಲ್ಲಿ ಸರ್ಕಾರಿ ಶಾಲೆಯಾಗಿ ಪರಿವರ್ತನೆಗೊಂಡು ಇದೇ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಎರಡು ವಿಷಯಗಳಿಗೂ ಸಹ ಶಿಕ್ಷಕರರಾಗಿ 25 ವರ್ಷ ಯಶಸ್ವಿಯಾಗಿ ಬೋಧನೆ ಮತ್ತು ಪೋಷಕರೊಂದಿಗೆ ಒಡನಾಟ, ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸಾಗಿದರು.

ರಜಾ ದಿನದಲ್ಲೂ ಬೋಧನೆ: ಇವರು ರಜಾ ದಿನಗಳಲ್ಲೂ ಭಾನುವಾರ ಸಹ ವಿಶೇಷವಾಗಿ ಪ್ರೌಢಶಾಲೆಯ ತರಗತಿಗೆ ಬೆಳಗ್ಗೆ10ರಿಂದ ಮಧ್ಯಾಹ್ನ
1 ಗಂಟೆವರೆಗೂ ಹಾಗೂ ಪ್ರತಿ ಶನಿವಾರ 11ರಿಂದ 2ವರೆಗೂ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದರು. ಇನ್ನು ರಾಷ್ಟೀಯ ಹಬ್ಬಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡು ಹಾಗೂ ಸಾರ್ವಜನಿಕರು,ಪೋಷಕರು, ಶಾಲಾ ಶಿಕ್ಷಕರು, ಇಲಾಖೆ ಅಧಿಕಾರಿಗಳ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು.

ಇದನ್ನೂ ಓದಿ:ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಕೊಲೆ ಬೆದರಿಕೆ

ಹೃದಯ ತಪಾಸಣೆ ಚಿಕಿತ್ಸೆ: ಶಿಕ್ಷಕ ಧನ್ಯಕುಮಾರ್‌ ಮಕ್ಕಳಿಗೋಸ್ಕರ ಅಂದು ಬೆಂಗಳೂರು ಎಂ.ಎಸ್‌.ರಾಮಯ್ಯ ಆಸ್ಪತ್ರೆ ವತಿಯಿಂದ ಉಚಿತವಾಗಿ ಹೃದಯದ ತಪಾಸಣೆ ಕೂಡ ಮಾಡಿಸಿದರು. ಇದರಿಂದ4ಮಕ್ಕಳಿಗೆ ಹೃದಯದಲ್ಲಿ ರಂಧ್ರ ಇರುವುದು ಕಂಡು ಬಂದಿತು. ಇಂತಹ ಮಕ್ಕಳನ್ನು ಗುರುತಿಸಿ ಎಂ.ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ಉಚಿತ ಆಪರೇಷನ್‌ ಕೂಡ ಮಾಡಿಸಲಾಗಿತ್ತು.

ಪ್ರಶಸ್ತಿ ಪುರಸ್ಕಾರ: ಶಿಕ್ಷಣ ಜ್ಞಾನ ಮಾಸಪತ್ರಿಕೆವತಿಯಿಂದ ಹೊಸದುರ್ಗದಲ್ಲಿ 10ನೇ ವರ್ಷದ(ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು) ಪ್ರಶಸ್ತಿ
ಕೊಟ್ಟು ಗೌರವಿಸಿದರು. ಅನೇಕ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಕಟ್ಟಲಾಗದ ಪ್ರತಿ ವಿದ್ಯಾರ್ಥಿಗಳಿಗೆ, ಎಲ್ಲ ಲೇಖನಿ ಸಾಮಗ್ರಿಗಳನ್ನು ತಮ್ಮ ದುಡಿಮೆಯಿಂದ ಬಂದ ಸಂಬಳದಿಂದ ನೀಡುತ್ತಿದ್ದರು. ಬಡವರು, ನಿರ್ಗತಿಕರು, ಶಾಲೆಯಿಂದ ಹೊರಗೂಳಿದಮಕ್ಕಳಿಗೂ ಸಹ ಶಾಲಾ ಶುಲ್ಕ ನೀಡಿ, ಅವರ ಕುಟುಂಬಕ್ಕೆ ಧೈರ್ಯ ತುಂಬಿ ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು.

ಮಕ್ಕಳಿಗೆ ಪ್ರೇರಣೆ: ಧನ್ಯಕುಮಾರ್‌ರ ಸ್ಫೂರ್ತಿದಾಯಕ ಮಾತುಗಳನ್ನು ಕೇಳುತ್ತ ಕೂತರೆ ಕನ್ನಡ ಸರಸ್ವತಿಯೇ ಇವರ ಪದಗಳಲ್ಲಿ ಇರುವಂತಹ
ಅನುಭೂತಿ. ಸಾಮಾನ್ಯರಂತೆ ಇದ್ದು ನಮ್ಮಲ್ಲಿ ಗುರಿ ಸಾಧಿಸುವ ಛಲ ಹುಟ್ಟಿಸಿದ ಗುರು ಎಂದರೆ ಅವರೇ ನಮ್ಮ ಡಿ.ಎಸ್‌.ಧನ್ಯಕುಮಾರ್‌ ಆದರ್ಶ ಶಿಕ್ಷಕರು. 2009ರಲ್ಲಿ ಬಾಲಕಿಯರ ಪ್ರೌಢಶಾಲೆ ಹೊಳವನ ಹಳ್ಳಿಯಲ್ಲಿ 11 ವರ್ಷ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 2020ರಲ್ಲಿ ನಿವೃತ್ತರಾದರು. ಇವರ ಮಾರ್ಗ ದರ್ಶನದಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ, ಶಾಲಾ ಆವರಣದಲ್ಲಿ ಕಾಲುವೆ ಮುಚ್ಚಿಸಿದ್ದು, ಶಾಲಾಭಿವೃದ್ಧಿ, ಮಕ್ಕಳಿಗೆ ಸಲಹೆ ಮತ್ತು ಮಾರ್ಗ ದರ್ಶನ. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತಜ್ಞ ವೈದ್ಯರಿಂದ ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು ಸ್ವಚ್ಛತೆ ಬಗ್ಗೆಮಾರ್ಗದರ್ಶನ,ರಾಜ್ಯಮಟ್ಟದಲ್ಲಿ ವಾಲಿಬಾಲ್‌, ಜಾವೆಲಿನ್‌ ಎಸೆತ, ರನ್ನಿಂಗ್‌ ಓಟದಲ್ಲಿ ಭಾಗವಹಿಸು ವಂತೆ ಮಕ್ಕಳಿಗೆ ಪ್ರೇರಣೆ ನೀಡಿದ್ದರು.

ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ನನಗೆ ನೈತಿಕ ಮೌಲ್ಯ ಮತ್ತು ಆದರ್ಶ ಗುಣ ಬೆಳೆಸಿದ ಶ್ರೇಷ್ಠ ಗುರು. ನನ್ನ ಭವಿಷ್ಯ ರೂಪಿಸಿಕೊಳ್ಳಲು ದಾರಿದೀಪ ತೋರಿದ ಗುರುವಿಗೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅನಂತ ನಮನ ಸಲ್ಲಿಸುತ್ತೇನೆ.
-ಎಚ್‌.ಎಂ ಮಂಜುನಾಥ್‌, ಪತ್ರಿಕಾ
ವಿತರಕ, ಹೊಳವನಹಳ್ಳಿ

ನಿವೃತ್ತ ಶಿಕ್ಷಕ ಧನ್ಯಕುಮಾರ್‌ ಅವರು ಶಿಕ್ಷಕ ವೃತ್ತಿಗೆ ಗೌರವಕೊಟ್ಟಂತಹ ವ್ಯಕ್ತಿ. ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಕೌಶಲ ಗಳನ್ನು ಬೆಳೆಸಿ ಕೊಟ್ಟಂತಹ ವ್ಯಕ್ತಿ. ವೃತ್ತಿ ಜೀವನ ದಲ್ಲಿ ತರಗತಿಯಲ್ಲಿ ಬೋಧನೆ ಮತ್ತು ಆಡಳಿ ತಾತ್ಮಕ ಜವಾಬ್ದಾರಿ, ವೃತ್ತಿ ಬದ್ಧತೆಕರ್ತವ್ಯ ನಿಷ್ಠೆ ತೋರಿ ಇತರೆ ಶಿಕ್ಷಕರಿಗೆ ಮಾದರಿಯಾದವರು.
-ರುದ್ರೇಶ್‌, ಅಧ್ಯಕ್ಷರು, ಸರ್ಕಾರಿ ನೌಕರರ
ಸಂಘ, ಕೊರಟಗೆರೆ ತಾಲೂಕು

ಧನ್ಯಕುಮಾರ್‌ ಉತ್ತಮ ಮುಖ್ಯ ಶಿಕ್ಷಕರಾಗಿದ್ದರು. ಇವರು ಶಾಲಾ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಪೋಷಕರು, ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳ ಜೊತೆ ಉತ್ತಮ ಸಲಹೆ ಸಂವಹನ, ಮಾರ್ಗ ದರ್ಶನ ಹಾಗೂ ಸಮಾಜಮುಖೀ ಕೆಲಸ ಮಾಡುತ್ತಾ ತಮ್ಮ ಸೇವೆಯಲ್ಲಿ ಪ್ರಾಮಾಣಿಕತೆತೋರಿದ ಮಾದರಿ ಮುಖ್ಯ ಶಿಕ್ಷಕರಾಗಿದ್ದರು.
-ಎನ್‌.ಎಸ್‌.ಸುಧಾಕರ್‌, ಕ್ಷೇತ್ರ
ಶಿಕ್ಷಣಾಧಿಕಾರಿ, ಕೊರಟಗೆರೆ

-ಸಿದ್ದರಾಜು ಕೆ.

ಟಾಪ್ ನ್ಯೂಸ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

6

Malpe ಬೀಚ್‌ ಸ್ವಚ್ಛತೆ: 3 ದಿನದಲ್ಲಿ 26 ಲೋಡ್‌ ಕಸ ಸಂಗ್ರಹ

5

Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ

4

Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.