ಡಿಜಿಟಲ್ ಗ್ರಂಥಾಲಯಕ್ಕೆ ಪ್ರಶಸ್ತಿಯ ಗರಿ
Team Udayavani, Jun 27, 2021, 10:16 PM IST
ತುಮಕೂರು: ಶೈಕ್ಷಣಿಕ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಡಿಜಿಟಲ್‌ಗ್ರಂಥಾಲಯ ಐಎಸ್‌ಎಸಿ- 2020 ಸಾಲಿನ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಕಲ್ಪತರು ಸ್ಮಾರ್ಟ್ ಸಿಟಿಯೋಜನೆಗೆ ಮತ್ತೂಂದು ಪ್ರಶಸ್ತಿ ಗರಿ ಲಭಿಸಿದೆ.
ಧಾರ್ಮಿಕ, ಶೈಕ್ಷಣಿಕವಾಗಿ ಹೆಸರಾಗಿರುವತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವತಿಯಿಂದಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿಒಂದಾದ”ಡಿಜಿಟಲ್ ಲೈಬ್ರರಿ’ ಯೋಜನೆಗೆ ” “social aspects’ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಕೇಂದ್ರಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳಸಚಿವಾಲಯದಿಂದ ಸ್ಮಾರ್ಟ್ ಸಿಟಿ ಯೋಜನೆಪ್ರಾರಂಭವಾಗಿ 6ನೇ ವರ್ಷ ತುಂಬಿದ ಹಿನ್ನೆಲೆ ಜೂ.25ರಂದುದೆಹಲಿಯಲ್ಲಿನಡೆದ ವಾರ್ಷಿಕೋತ್ಸವಸಮಾರಂಭದಲ್ಲಿ ವಿವಿಧ ವಿಭಾಗಗಳಿಗೆ ಪ್ರಶಸ್ತಿಘೋಷಿಸಿದ್ದು, ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿಅನುಷ್ಠಾನಗೊಂಡಿರುವ ಉತ್ತಮ ಯೋಜನೆಗಳಪೈಕಿ ದೇಶದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸಾವಿರಾರು ಜನರಿಗೆ ಅನುಕೂಲವಾಗುತ್ತಿರುವ ಡಿಜಿಟಲ್ ಲೈಬ್ರರಿಯೋಜನೆಗೆ ಪ್ರಶಸ್ತಿ ದೊರಕಿದೆ.
ಈ ಪ್ರಶಸ್ತಿಯು ವಿಶಿಷ್ಟಹಾಗೂ ವಿನೂತನ ವಾಗಿದ್ದು, ದೇಶದ 100 ಸ್ಮಾರ್ಟ್‌ಸಿಟಿಗಳ ಪೈಕಿ ಡಿಜಿಟಲ್ ಲೈಬ್ರರಿ ಯೋಜನೆ ಇದೇಮೊದಲನೆಯದಾಗಿದೆ.ಡಿಜಿಟಲ್ ಲೈಬ್ರರಿ ಯೋಜನೆ ಓದುಗರಿಗೆ ಒಂದುಸೊಗಸಾದ ಯೋಜನೆಯಾಗಿದ್ದು, ಸಾಂಪ್ರದಾಯಿಕ ಗ್ರಂಥಾಲಯಗಳಿಗಿಂತ ವಿಭಿನ್ನವಾಗಿರುತ್ತದೆ.
ಎಲ್ಲಿಂದಾದರೂ ಓದು ಎನ್ನುವುದು ಈ ಯೋಜನೆಯವಿಶೇಷತೆ. ಇದರಲ್ಲಿ ಅಪರೂಪದ ಪುಸ್ತಕಗಳು ಈಡಿಜಿಟಲ್ ಲೈಬ್ರರಿಯಲ್ಲಿದೆ. ಜೊತೆಗೆ ವಿವಿಧಕ್ಷೇತ್ರಗಳಿಗೆ ಹಾಗೂ ಕೋರ್ಸ್‌ಗಳಿಗೆ ಸಂಬಂಧಪಟ್ಟಪುಸ್ತಕಗಳನ್ನು ಡಿಜಿಟಲ್ ಲೈಬ್ರರಿಯಲ್ಲಿ ಸಂಗ್ರಹಿಸಲಾಗಿದೆ. ಈವರೆಗೂ ಈ ಯೋಜನೆಯ ಅಡಿಯಲ್ಲಿ26 ಸಾವಿರಕ್ಕಿಂತ ಹೆಚ್ಚು ಬಳಕೆದಾರರು ಮಕ್ಕಳು,ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಧ್ಯಾಪಕರು, ಸರ್ಕಾರಿನೌಕರರು ಮತ್ತು ಕೈಗಾರಿಕ ವೃತ್ತಿಪರರು ಇತ್ಯಾದಿಜನರು ಅನುಕೂಲ ಪಡೆಯುತ್ತಿದ್ದಾರೆ.
ಹೆಚ್ಚು ಜ್ಞಾನ ಸಂಪಾದಿಸಲು ಅನುಕೂಲ: ಡಿಜಿಟಲ್‌ಲೈಬ್ರರಿ ಪೋರ್ಟಲ್, ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ. ಈ ಸೌಲಭ್ಯವನ್ನು ಏಕಕಾಲದಲ್ಲಿ 20 ಬಳಕೆದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಬಹುದಾಗಿದೆ. ದೇಶದ ಇತರೆ ನಗರಗಳು ಈವಿನೂತನ ಯೋಜನೆಯನ್ನು ಪ್ರಶಂಸಿಸಿ ತಮ್ಮ ತಮ್ಮನಗರಗಳಲ್ಲೂ ಕೂಡ ಅನುಷ್ಠಾನಗೊಳಿಸಲುಪ್ರಯತ್ನಿಸುತ್ತಿದ್ದಾರೆ.
ಶೈಕ್ಷಣಿಕ ನಗರ ಎಂದೇ ಪ್ರಸಿದ್ದಿಪಡೆದಿರುವ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿಯೋಜನೆಯಿಂದ ಪ್ರಾರಂಭಿಸಿರುವ ಈ ಡಿಜಿಟಲ್‌ಲೈಬ್ರರಿ ಈಗ ಹಳೆಯ ಕೇಂದ್ರ ಗ್ರಂಥಾಲಯದಲ್ಲಿ ನಡೆಯುತ್ತಿದೆ. ಅಲ್ಲಿ 20 ಕಂಪ್ಯೂಟರ್ ಸೌಲಭ್ಯಇದ್ದು, ಹೆಚ್ಚು ವಿದ್ಯಾರ್ಥಿಗಳು ಅನುಕೂಲ ಪಡೆಯುತ್ತಿದ್ದಾರೆ. ಇಲ್ಲಿ ಇಂಟರ್‌ನೆಟ್ ಸೌಲಭ್ಯವಿದ್ದುವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರಿಗೆ ಹೆಚ್ಚು ಜ್ಞಾನ ಸಂಪಾದಿಸಲುಅನುಕೂಲವಾಗುತ್ತಿದೆ ಎನ್ನುತ್ತಾರೆ ತುಮಕೂರುಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಬಿ.ಟಿ.ರಂಗಸ್ವಾಮಿ.
ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.