ನಿತ್ಯ 50 ಸಾವಿರ ಪ್ಯಾಕೇಟ್ ಹಾಲು ವಿತರಣೆ
ಬಡವರಿಗೆ ನೀಡುವ ಹಾಲನ್ನು ಮಾರಾಟ ಮಾಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ
Team Udayavani, Apr 12, 2020, 6:05 PM IST
ತುಮಕೂರು: ಕೋವಿಡ್-19 ಮಹಾಮಾರಿಯಿಂದ ಇಡೀ ದೇಶ ಲಾಕ್ ಡೌನ್ ಆಗಿದೆ, ಇಂಥ ವೇಳೆಯಲ್ಲಿ ರಾಜ್ಯ ಸರ್ಕಾರ ಕೊಳಚೆ ಪ್ರದೇಶದ ಜನರಿಗೆ ನಂದಿನಿ ಹಾಲು ವಿತರಣೆ ಮಾಡುತ್ತಿರುವುದರಿಂದ ಕೊಳಚೆ ಪ್ರದೇಶದ ಮಕ್ಕಳು ಹಾಲು ಕುಡಿದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಬಡವರಿಗೆ ನೀಡುವ ಹಾಲನ್ನೂ ಕೆಲವು ಕಡೆ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿದೆ. ಇನ್ನೂ ಕೆಲವು ಕಡೆ ಬಡವರಿಗೆ ಹಾಲು ದೊರೆಯುತ್ತಿಲ್ಲ ಎನ್ನುವ ಆರೋಪಗಳೂ ಇವೆ. ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಕೊಳಚೆ ನಿವಾಸಿಗಳು ಹಾಗೂ ನಿರ್ಗತಿಕರು ಮತ್ತು
ಕಡುಬಡವರಿಗೆ ಉಚಿತವಾಗಿ ಹಾಲನ್ನು ವಿತರಿಸಲಾಗುತ್ತಿದೆ.
ಜಿಲ್ಲೆಯ ಕೊಳಚೆ ಪದೇಶಗಳ ಜನರು ಲಾಕ್‌ಡೌನ್ ನಿಂದ ಸಂಕಷ್ಟಪಡುತ್ತಿರುವ ಸಂದರ್ಭದಲ್ಲಿ ಅಲ್ಲಿಯ ಮಕ್ಕಳಿಗೆ ಹಾಲು ವಿತರಿಸುವ ನಿರ್ಧಾರ ಕೈಗೊಂಡು ಕಳೆದ ಒಂದು ವಾರದಿಂದ ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಸಹಕಾರದಿಂದ ಕೊಳಚೆ ಪ್ರದೇಶಗಳಲ್ಲಿ ಪ್ರಾರಂಭದಲ್ಲಿ ಒಂದು ಲೀಟರ್ ಹಾಲು ವಿತರಿಸಲಾಗುತ್ತಿತ್ತು. ಆನಂತರ ಜನರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈಗ ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್ ಹಾಲು ವಿತರಿಸಲಾಗುತ್ತಿದ್ದು, ಈ
ಹಾಲು ವಿತರಣೆಯಿಂದ ಬಡವರಿಗೆ ಹೆಚ್ಚು ಸಹಕಾರಿಯಾಗಿದೆ. ಕಲ್ಪತರು ನಾಡಿನಲ್ಲಿ 129 ಕೊಳಚೆ ಪ್ರದೇಶಗಳಿದ್ದು ಈ ಪ್ರದೇಶಗಳಲ್ಲಿ 25 ಸಾವಿರ ಹೆಚ್ಚು ಕುಟುಂಬಗಳಿದ್ದು ಪ್ರಾರಂಭದಲ್ಲಿ ಈ ಪ್ರದೇಶದಲ್ಲಿನ ಮನೆಗಳಿಗೆ ಸರ್ಕಾರದ ಆದೇಶದ ಅನ್ವಯ ಪ್ರತಿ ಮನೆಗೆಹಾಲನ್ನು ತುಮಕೂರು ಜಿಲ್ಲಾ ಹಾಲು
ಒಕ್ಕೂಟದಿಂದ ವಿತರಿಸಲು ಆದೇಶದ ಹಿನ್ನೆಲೆಯಲ್ಲಿ ಹಾಲು ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರತಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ
ನೇಮಿಸಿರುವ ನೋಡಲ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಕೊಳಗೇರಿಗಳಲ್ಲಿ ವಿತರಿಸಲಾಗುತ್ತಿದೆ.
ಕೆಲವು ಕಡೆಗಳಲ್ಲಿ ಬಡವರಿಗೆ ಕೊಡುವ ಹಾಲನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ ಹಣಕ್ಕೆ ಹಾಲು ಮಾರಿದರೆ ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರ ಮೊ. 7760536536 ಕರೆ ಮಾಡಿ ದೂರು ನೀಡಬಹುದಾಗಿದೆ.
ಕೆಎಂಎಫ್ ವತಿಯಿಂದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಾಗೂ ಬಡವರಿಗೆ ಉಚಿತವಾಗಿ ವಿತರಿಸುತ್ತಿರುವ ಹಾಲನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿದ್ದು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.
ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ.
ತುಮಕೂರಿನ ಕೊಳೆಗೇರಿಗಳಲ್ಲಿ ಇರುವ ಬಡ ಜನರಿಗೆ ವಿತರಿಸುವ ಹಾಲು ಸಮರ್ಪಕವಾಗಿ ಸಿಗಲಿ ಎಂದು ಪಾಲಿಕೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ನಗರದಲ್ಲಿ 18,100 ಪ್ಯಾಕೇಟ್ ಹಾಲು ವಿತರಣೆಯಾಗುತ್ತಿದೆ.
ಟಿ.ಭೂಬಾಲನ್ ಪಾಲಿಕೆ ಆಯುಕ
ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.