ಕುರುಡುಗಾನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ
Team Udayavani, Jun 18, 2022, 3:43 PM IST
ಕೊರಟಗೆರೆ : ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಾಲ್ಲೂಕಿನ ವಡ್ಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಗಾನಹಳ್ಳಿ ಗ್ರಾಮದಲ್ಲಿ ನೆಡೆಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್, ಮಾತನಾಡಿ, ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದೆ.ಪಿಂಚಣಿಗಳ ಅದಾಲತ್ ಮೂಲಕ ವಿಶೇಷ ಚೇತನರಿಗೆ ವೃದ್ಧರಿಗೆ, ರೈತರ ಕುಟುಂಬಗಳಿಗೆ ಕೃಷಿ ಇಲಾಖೆ ಎಲ್ಲಾ ಸೇವೆಗಳನ್ನು ನೀಡುವಲ್ಲಿ ಜಿಲ್ಲೆಯಲ್ಲಿ ಕೊರಟಗೆರೆ ಪ್ರಮುಖ ಪಾತ್ರ ವಹಿಸಿದೆ.
ಕೃಷಿ ಇಲಾಖೆಯ ಮೂಲಕ ಅನೇಕ ಪರಿಹಾರಗಳನ್ನು ನೀಡಲಾಗುತ್ತಿವೆ. ರೈತರ ಬಣವೆಗಳು ಬೆಂಕಿಹಾನಿಗೊಳಗಾದಾಗ, ರೈತನಿಗೆ ಹಾವು ಕಡಿತದಿಂದ , ಆಕಸ್ಮಿಕವಾಗಿ ಸಿಡಿಲು ಬಡಿತದಿಂದಾಗಿ ಜೀವ ಹಾನಿಗೊಳಗಾದಾಗ ತುರ್ತಾಗಿ ಪರಿಹರಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುವ ಕಮಿಟಿ ರಚಿಸಲಾಗಿದೆ. ರೈತರಿಗೆ ಸಾವಯವ ಗೊಬ್ಬರಗಳ ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಜೊತೆಗೆ ಇಲಾಖೆಗಳಲ್ಲಿ ಜಿಂಕ್ ಗೊಬ್ಬರ ರಸಗೊಬ್ಬರಗಳನ್ನು ಕೃಷಿ ಅಧಿಕಾರಿಗಳ ಮೂಲಕ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿ ಬಳಸುವುದು ಒಳಿತು. ಸರ್ಕಾರ ಮುಖ್ಯಮಂತ್ರಿ ರೈತ ವಿಧ್ಯಾ ನಿಧಿಯನ್ನು ಕಾರ್ಯಕ್ರಮವನ್ನು ರೈತ ಮಕ್ಕಳು ಬಳಸಿಕೊಳ್ಳುವಂತೆ ತಿಳಿಸಿದರು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸಮ್ಮಾನ್ ಕಿಸಾನ್ ಯೋಜನೆ , ಫಸಲ್ ಭಿಮಾ ಯೋಜನೆಯಂತಹ ಕಾರ್ಯಕ್ರಮಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ರೈತ ಬಾಂದವರಿಗೆ ತೋಟಗಾರಿಕೆಯಲ್ಲಿ ಹಲವಾರು ಯೋಜನೆಗಳನ್ನು ಪಡೆಯಬಹುದಾಗಿದೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಸತಿ, ರೈತರಿಗೆ ಜಾಬ್ ಕಾರ್ಡುಗಳ ಮೂಲಕ ಸ್ತ್ರೀ ಶಕ್ತಿ ಸಂಘಗಳ ಮೂಲಕ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಉತ್ತೇಜನ ನೀಡಲಾಗುತ್ತಿದೆ. ನರೇಗಾ ದ ಮೂಲಕ ರೇಷ್ಮೆ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಸಹಾಯ ಧನ ನೀಡುವ ಮೂಲಕ ಉತ್ತೇಜಿಸಲಾಗುತ್ತಿದೆ. ಸಲಕರಣೆಗಳಿಗೆ ಸಹಾಯ ಧನ ನೀಡಲಾಗುತ್ತಿದೆ ರೇಷ್ಮೆ ಬೆಳೆಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಯುವ ರೈತರು ರೇಷ್ಮೆ ಕೃಷಿಯತ್ತ ಮುಖಮಾಡುತ್ತಿದ್ದು ಸ್ವಾವಲಂಬಿ ಜೀವನ ನೆಡೆಸುತ್ತಿದ್ದಾರೆ ಎಂದು ಕೃಷಿ ಅಧಿಕಾರಿ ಹೆಚ್. ನಾಗರಾಜ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಂಬಿಕಾ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಮೂಲಕ ಮಕ್ಕಳಿಗೆ ಹಾಲು ಮೊಟ್ಟೆ, ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅತಂಹ ಮಕ್ಕಳಿಗೆ ವಿಶೇಷ ಹಾರೈಕೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಗರ್ಭಿಣಿ ಭಾಣಂತಿಯರಿಗೆ ಪೌಷ್ಟಿಕಾಂಶ ಕೊರತೆಯಾಗದಂತೆ ಹಲವಾರ ಕಾರ್ಯಗಳನ್ನು ರೂಪಿಸಲಾಗಿದೆ. ಆರೋಗ್ಯ ಇಲಾಖೆಯ ಮೂಲಕ ಇದೇ ಗ್ರಾಮದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಲಾಗಿದೆ ಕೋವಿಡ್ ನತಂಹ ಸಂದರ್ಭದಲ್ಲಿ ಸಮರ್ಥವಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ನಿಭಾಯಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಡ್ಡಗೆರೆ ಗ್ರಾ ಪಂ ಅದ್ಯಕ್ಷರಾದ ವಸಂತರಾಜು, ಉಪಾಧ್ಯಕ್ಷರಾದ ಗೌರಮ್ಮ, ತಾ. ಪಂ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಪ್ಪ, ಆರೋಗ್ಯಧಿಕಾರಿ ಡಾ.ವಿಜಯ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ ನಾಗರಾಜು, ಪಶುವೈದ್ಯ ಡಾ. ಸಿದ್ದನಗೌಡ, ಅರಣ್ಯಾಧಿಕಾರಿ ಸುರೇಶ್, ಸಿ.ಡಿ.ಪಿ.ಓ ಅಂಬಿಕಾ, ಬಿ.ಇ.ಓ ಸುಧಾಕರ್, ಮಲ್ಲಿಕಾರ್ಜುನ ಆರ್.ಡಿ.ಪಿ.ಆರ್ ಇಂಜಿನಿಯರ್ ರವಿಕುಮಾರ್, ರೇಷ್ಮೇ ಸಹಾಯಕ ನಿರ್ದೇಶಕ ಮುರಳಿಧರ, ಸಮಾಜ ಕಲ್ಯಾಣಾಧಿಕಾರಿ ಉಮಾದೇವಿ, ಬೆಸ್ಕಾ ಎ.ಇ ಇ ಮಲಯ್ಯ, ಪುಷ್ಪಲತಾ, ಪೋಲಿಸ್ ಇಲಾಖೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಶಂಖರ್ ನಾರಾಯಣ, ಅಬಕಾರಿ ಇಲಾಖೆಯ ಶ್ರೀಲತಾ, ಮೀನುಗಾರಿಕೆ ನಿರ್ದೇಶಕ ಮಹೇಶ್ವರ, ಪ್ರಕಾಶ್ ಎಎಸ್ ಐ ರಾಮಚಂದ್ರ, ಗ್ರೇಡ್ -2 ನರಸಿಂಹಮೂರ್ತಿ, ತಾಪಂ ಇಓ ದೊಡ್ಡಸಿದ್ದಪ್ಪ , ಪಿಡಿಓ ಪೃಥ್ವಿ, ಶಿರಸ್ತೇದಾರರಾದ ಚಂದ್ರಪ್ಪ ರಾಜಸ್ವ ನಿರೀಕ್ಷಕರಾದ ಪ್ರತಾಪ್ ಕುಮಾರ್, ಗ್ರಾಮ ಲಿಕ್ಕಿಗರಾದ ಬಸವರಾಜು, ಮಂಜುನಾಥ್, ರವಿಶಂಕರ್, ವೀಣಾ ರಾಕೇಶ್, ಮಮತ, ಭಾನು ಪ್ರಕಾಶ, ಜಯಪ್ರಕಾಶ್, ವಡ್ಡಗೆರೆ ಗ್ರಾ ಪಂ ಸದಸ್ಯರುಗಳಾದ ಗೌರಿಶಂಕರ್ ಕೆ.ಎಸ್, ನಾಗಮ್ಮ, ಪುಟ್ಟರಾಜು, ಸಂತೋಷ್, ರವಿ ಬುರುಗನಹಳ್ಳಿ, ರಕ್ಷಿತಾ ವೀರಕ್ಯಾತರಾಯ, ರವಿಂದ್ರಬಾಬು, ಸಿಎ ಕೃಷ್ಣ, ರಂಗನಾಥ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
Koratagere; ರೈತರಿಂದ 26ರೂ.ಗೆ ಹಾಲು ಖರೀದಿಸಿ ಗ್ರಾಹಕರಿಗೆ 44ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
England vs Newzeland Test: ನ್ಯೂಜಿಲ್ಯಾಂಡ್ ಹಿಡಿತದಲ್ಲಿ ಹ್ಯಾಮಿಲ್ಟನ್ ಟೆಸ್ಟ್
Womens T20 Cricket: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಗೆಲುವು
Ali Trophy: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬಯಿಗೆ ಪ್ರಶಸ್ತಿ ಸಂಭ್ರಮ
Friendly Cricket: ರಾಜ್ಯಸಭಾ ತಂಡದೆದುರು ಲೋಕಸಭಾ ತಂಡಕ್ಕೆ ಜಯ
Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.