Dr Ranganath; ಲಾರಿ ಚಾಲಕನ ಕೈ ಮೂಳೆ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ಶಾಸಕ
ಡಾ.ರಂಗನಾಥ್ ಅವರ ಮಾದರಿ ಕಾರ್ಯಕ್ಕೆ ನಾಗರಿಕರ ಮೆಚ್ಚುಗೆ
Team Udayavani, Oct 16, 2023, 8:22 PM IST
ಕುಣಿಗಲ್: ಶಾಸಕರಾದ ಬಳಿಕ ಮೂಲ ವೃತ್ತಿಯನ್ನು ಮರೆಯದೆ ಅದನ್ನು ಮಾನವೀಯ ರೂಪದಲ್ಲಿ ಸೇವೆಗೆ ಮೀಸಲಿಟ್ಟು ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಸಾಮಾನ್ಯ ಜನರ ಸೇವೆಗೆ ಟೊಂಕಕಟ್ಟಿ ನಿಂತು ಸೇವೆ ಮಾಡುತ್ತಿರುವುದಕ್ಕೆ ಇನ್ನೊಂದು ಘಟನೆ ಸಾಕ್ಷಿಯಾಗಿದೆ.
ಶಾಸಕ ಡಾ.ರಂಗನಾಥ್ ಅವರು ಎರಡನೇ ಭಾರಿ ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರದಲ್ಲಿ ಮೂರನೇ ಆರ್ಥಿಕ ಅಶಕ್ತಿ ಬಡ ವ್ಯಕ್ತಿಗೆ ತಮ್ಮದೇ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಾನವೀಯತೆ ಮೆರೆದಿರುವುದು ಕ್ಷೇತ್ರದ ಜನಮೆಚ್ಚುಗೆ ಪಾತ್ರರಾಗಿದ್ದಾರೆ.
ಕುಣಿಗಲ್ ಪಟ್ಟಣದ ಕೋಟೆ ಬಡಾವಣೆಯ ಲಾರಿ ಚಾಲಕ ಗಂಗಹನುಮಯ್ಯ(62) ವರ್ಷ ವಯಸ್ಸಿನ ವೃದ್ದರಿಗೆ ಎಂಬವರಿಗೆ ಕೈ ಮೂಳೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿಗಳ ಸಹಾಯದಿಂದ ಸ್ವಂತಃ ಖರ್ಚಿನಲ್ಲಿ ಮಾಡುವ ಮೂಲಕ ಕ್ಷೇತ್ರದ ಜನತೆಗೆ ನಿಮ್ಮ ಜತೆ ವೈದ್ಯನಾಗಿಯೂ ಇದ್ದೇನೆ ಎಂದು ಸಾಬೀತು ಪಡಿಸಿದ್ದಾರೆ.
ಮೂಲತಃ ಮಾಗಡಿ ತಾಲೂಕಿನ ಗಂಗಹನುಮಯ್ಯ ಅವರು ಕಳೆದ 30 ವರ್ಷದಿಂದ ಕುಣಿಗಲ್ ಪಟ್ಟಣದಲ್ಲಿ ವಾಸವಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ಪತ್ನಿ ಇರುವ ಸಂಸಾರ. ಮಕ್ಕಳು ಇನ್ನೂ ವಿದ್ಯಾಬ್ಯಾಸ ಮಾಡುವದರಲ್ಲಿ ಇದ್ದಾರೆ ಕುಟುಂಬಕ್ಕೆ ಯಾವುದೇ ಅದಾಯದ ಮೂಲ ಇಲ್ಲದೇ ಲಾರಿ ಡೈವರ್ ಆಗಿ ಕೆಲಸ ಮಾಡಿ ಕೊಂಡು ಸಂಸಾರ ನಡೆಸುತ್ತಿದ್ದರು. ಲಾರಿ ಚಾಲನೆ ಮಾಡುವಾಗ ಹುಬ್ಬಳ್ಳಿ ಬಳಿ ಅಪಘಾತವಾಗಿ ಗಂಗಹನುಮಯ್ಯ ಅವರ ಬಲಕೈ ಮೋಳೆ ಮರಿತವಾಗುತ್ತದೆ. ಆಗ ಅಪರೇಷನ್ ಮಾಡಿಕೊಂಡರೂ ಮತ್ತೇ ನೋವು ಕಾಣಿಸಿಕೊಂಡು ನರಕಯಾತನೆ ಪಡುತ್ತಿದ್ದರು ಈ ಸಂಬಂಧ ಹುತ್ರಿದುರ್ಗ ವಿಎಸ್‌ಎಸ್‌ಎನ್ ಅಧ್ಯಕ್ಷ ಬೋರೇಗೌಡ ಶಾಸಕ ಡಾ.ರಂಗನಾಥ್ ಅವರ ಗಮನಕ್ಕೆ ತಂದಿದ್ದರೂ ತತ್ ಕ್ಷಣವೇ ಕಾರ್ಯ ಪ್ರವೃತ್ತರಾದ ಶಾಸಕ ಡಾ.ರಂಗನಾಥ್ ಬೋರಿಂಗ್ ಆಸ್ಪತ್ರೆಯ ಸಹದ್ಯೋಗಿಗಳ ಸಂಪರ್ಕ ಮಾಡಿ ಶಸ್ತ್ರ ಚಿಕಿತ್ಸೆಗೆ ಸಿದ್ದತೆ ಮಾಡಿ ಸೋಮವಾರ ಸ್ವತಃ ಅವರೇ ಖುದ್ದು ಶಸ್ತ್ರ ಚಿಕತ್ಸೆ ಮಾಡಿ ಬಡ ಲಾರಿ ಡೈವರ್ ಅವರ ಕುಂಟುಂಬದ ನೋವು ನಿವಾರಣೆ ಮಾಡಿದ್ದಾರೆ.
“ದಿವ್ಯ ಕಲ್ಯಾಣ ಮಂಟಪದಲ್ಲಿ ಸಭೆ ಇತ್ತು. ನಮಗೆ ಪರಿಚಯ ಇದ್ದ ಬೋರೇಗೌಡರು ಶಾಸಕರ ಬಳಿ ಕರೆದುಕೊಂಡು ಹೋಗಿ ನಮ್ಮ ಸಮಸ್ಯೆ ಹೇಳಿದರು ತಕ್ಷಣವೇ ಅಲ್ಲಿಂದಲೇ ದೂರವಾಣಿ ಮೂಲಕ ವೈದ್ಯರ ಬಳಿ ಮಾತನಾಡಿ ಅಪರೇಷನ್‌ಗೆ ವ್ಯವಸ್ಥೆ ಮಾಡಿ ಒಂದು ನಯಾ ಪೈಸೆ ಇಲ್ಲದೇ ನನ್ನ ಪತಿಯ ಕೈ ಅಪರೇಷನ್ ಮಾಡಿಸಿದ್ದಾರೆ ಅವರಿಗೆರ ದೇವರು ಒಳ್ಳೆದು ಮಾಡಲಿ ಎಂಬುದೇ ನಮ್ಮ ಹಾರೈಕೆ.
-ವಸಂತ, ಗಂಗಹನುಮಯ್ಯ ಅವರ ಪತ್ನಿ
ನನಗೆ ಪರಿಚಯಸ್ಥರು ಹೀಗೆ ಸಮಸ್ಯೆ ಆಗಿದೆ ಎಂದು ಹೇಳಿದರು ತತ್ ಕ್ಷಣ ಶಾಸಕರ ಡಾ.ರಂಗನಾಥ್ ಅವರ ಗಮನಕ್ಕೆ ತಂದೆ. ಅವರು ಸಂಬಂಧಪಟ್ಟ ವೈದ್ಯರ ಜತೆಗೆ ಮಾತನಾಡಿ, ಸ್ವತಃ ಅವರೇ ನಿಂತು ಅಪರೇಷನ್ ಮಾಡಿ ಸಹಾಯ ಮಾಡಿದ್ದಾರೆ. ಇಂತಹ ಶಾಸಕರು ನಮಗೆ ಸಿಕ್ಕಿರುವುದು ಕ್ಷೇತ್ರದ ಜನತೆಯ ಪುಣ್ಯ ಎಂದೇ ಭಾವಿಸುತ್ತೇವೆ.
-ಬೋರೇಗೌಡ. ವಿಎಸ್‌ಎಸ್‌ಎನ್. ಹುತ್ರಿದುರ್ಗ
ನಾನು ಶಾಸಕನಾಗಿದ್ದರೂ ನನ್ನ ಮೂಲ ವೈದ್ಯ ವೃತ್ತಿಯನ್ನು ಬಿಡದೇ ಕ್ಷೇತ್ರದ ಜನತೆಗೆ ಸದಾ ಮೀಸಲು ಇಟ್ಟಿದ್ದೇನೆ. ಯಾರಿಗೇ ಏನೆ ತೊಂದರೇ ಆದರೂ ನನ್ನ ಕೈಲಾದ ಸೇವೆ ಮಾಡಲು ಸಿದ್ದನಿದ್ದೇನೆ. ಇದರಲ್ಲಿ ದೊಡ್ಡತನ ಇಲ್ಲ. ನನ್ನ ಕರ್ತವ್ಯ ನಾನು ಮಾಡಿದ್ದೇನೆ.
ಡಾ.ರಂಗನಾಥ್, ಶಾಸಕ
ವರದಿ: ಕೆ.ಎನ್.ಲೋಕೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.