ಅಭಿವೃದ್ಧಿಕಾಮಗಾರಿ ಚಾಲನೆಗೆ ಅಧಿಕಾರಿಗಳ ಗೈರು: ಆಕ್ರೋಶ
Team Udayavani, Mar 10, 2021, 4:58 PM IST
ಕುಣಿಗಲ್: ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮಗಳಿಗೆ ಗೈರು ಹಾಜರಾಗುವ ಮೂ ಲಕ ಸರಿಯಾದ ಮಾಹಿತಿ ನೀಡದೆ ಬೇಜ ವಾಬ್ದಾರಿ ತನದಿಂದ ವರ್ತಿಸಿದ ತಾಲೂಕಿನ ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಡಾ.ರಂಗ ನಾಥ್ ಇಇ ಅವರಿಗೆ ದೂರವಾಣಿ ಮೂಲಕ ತರಾಟೆ ತೆಗೆದುಕೊಂಡರು.
ತಾಲೂಕಿನ ರಾಜಗೆರೆ ಗ್ರಾಮದಿಂದ ಕೆಂಪನಹಳ್ಳಿ ಮುಖ್ಯ ರಸ್ತೆ ವರೆಗಿನ 1.8ಕೋಟಿ ರೂ. ವೆಚ್ಚದಲ್ಲಿ ರಸ್ತೆಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಡಾ. ರಂಗನಾಥ್ ಕಾಮಗಾರಿಯ ಕ್ರಿಯಾ ಯೋಜನೆ ತೋರಿಸುವಂತೆ ಲೋಕೋಪ ಯೋಗಿ ಇಲಾಖೆಯ ಎಂಜಿಯರ್ ರಾಜಣ್ಣ ಅವರನ್ನು ಪ್ರಶ್ನೆ ಮಾಡಿದರು.
ಸಾರ್ ಕ್ರಿಯಾಯೋಜನೆ ತಂದಿಲ್ಲ ಇದು ನನ್ನವ್ಯಾಪ್ತಿಗೆ ಬರುವುದಿಲ್ಲ ಎಂಜಿಯರ್ ಗಿರಿಗೌಡ ಅವರ ವ್ಯಾಪ್ತಿಗೆ ಸೇರಿರುತ್ತದೆ. ಅವರು ಬಂದಿಲ್ಲ ಎಂದು ಉತ್ತರಿಸಿದರು ಇದಕ್ಕೆ ಕೆಂಡ ಮಂಡಲರಾದ ಶಾಸಕರುಕಳೆದ ನಾಲ್ಕು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಇದೇರೀತಿ ನಿಮ್ಮ ಎಇಇ ಮೋಹನ್ ಕುಮಾರ್ ಹಾಗೂಎಂಜಿನಿಯರ್ ಗಿರಿಗೌಡ ಗೈರು ಹಾಜರಾಗುತ್ತಿದ್ದಾರೆ. ಏಕೆ ಶಾಸಕರ ಕಾರ್ಯಕ್ರಮಗಳಿಗೆ ಹಾಜ ರಾಗು ತ್ತಿಲ್ಲ ಸರಿಯಾದ ಮಾಹಿತಿಯನ್ನು ನೀಡದೇ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿದ್ದಾರೆ. ಕೂಡಲೇ ಇವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಪತ್ರ ಬರೆಯುವುದಾಗಿ ಎಚ್ಚರಿಸಿದರು.
ಜೊತೆಗೆ ಸ್ಥಳದಲ್ಲೇ ತುಮಕೂರು ಲೋಕೋ ಪಯೋಗಿ ಇಲಾಖೆಯ ಇಇ ಸಂಜೀವ್ ರಾಜ್‌ಅವರಿಗೆ ದೂರುವಾಣಿ ಕರೆ ಮಾಡಿ ನಿಮ್ಮ ಅಧಿಕಾರಿ ಗಳನಡವಳಿಕೆ ನಮಗೆ ಸರಿ ಕಾಣುತ್ತಿಲ್ಲ. ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳದಿದ್ದರೇ ನಾನು ಏನೂಮಾಡಬೇಕೆಂದು ಗೊತ್ತಿದೆ ಎಂದು ತರಾಟೆ ತೆಗೆದುಕೊಂಡರು.
ನನ್ನ ಊರಿನವನೂ ಎಂದು ಎಂಜಿನಿಯರ್‌ಗಿರಿಗೌಡ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾನೆ. ನನ್ನ ಮೃದು ಧೋರಣೆಯನ್ನು ದುರುಪಯೋಗ ಮಾಡಿಕೊಂಡರೇ ನಾನು ಸುಮ್ಮನಿ ಇರುವುದಿಲ್ಲ. ಅಧಿಕಾರಿ ಗಳನ್ನು ಕಟ್ಟಿ ಹಾಕುವುದು ಹೇಗೆ ಅಂತ ನನಗೂ ಗೊತ್ತಿದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಹುತ್ರಿದುರ್ಗ ಹೋಬಳಿಯಲ್ಲಿ ಸುಮಾರು 40ವರ್ಷಗಳಿಂದ ರಸ್ತೆ ಅಭಿವೃದ್ಧಿ ಮಾಡದೇ ಎಲ್ಲಾ ರಸ್ತೆಗಳುಸಂಪೂರ್ಣವಾಗಿ ಹದಗೆಟ್ಟಿವೆ. ಸಮಿಶ್ರ ಸರಕಾರದಅವಧಿಯಲ್ಲಿ ತಂದಿದ್ದ ಅನುದಾನದ ಪೈಕಿ ಕೆಲವುರಸ್ತೆಗಳನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಿನಬಿಜೆಪಿ ಸರಕಾರ ತಾಲೂಕಿಗೆ ತಂದಿದ್ದ 800 ಕೋಟಿ ಅನುದಾನವನ್ನು ತಡೆಹಿಡಿದಿದೆ. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಹಾಗೂ ನಾನು ಸರಕಾರದ ಮುಂದೆ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಅನುಧಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.ತಾಲೂಕಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲುಬಿಡಲು ಸಾಧ್ಯವೇ ಇಲ್ಲ ಹೋರಾಟ ಮಾಡಿಯಾದರೂತಾಲೂಕಿನ ಅಭಿವೃದ್ಧಿ ಮಾಡಿಯೇ ತೀರುತ್ತೇನೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷ ಉಮೇಶ್,ಹುತ್ರಿ ವಿಎಸ್‌ಎಸ್‌ಎನ್ ಅಧ್ಯಕ್ಷ ಬೋರೇಗೌಡ,ಕಾಂಗ್ರೆಸ್ ಮುಖಂಡರಾದ ಕೆಂಪಿರೇಗೌಡ, ರಾಮಣ್ಣ, ಅಮೀದ್, ಗ್ರಾಪಂ ಸದಸ್ಯರಾದ ರಮೇಶ್, ಅಹುಚ್ಚೇಗೌಡ, ಕುಮಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.