ಮಹಿಳಾ ಸಬಲೀಕರಣವೇ ನಮ್ಮ ಉದ್ದೇಶ : ಡಾ| ವೀರೇಂದ್ರ ಹೆಗ್ಗಡೆ
Team Udayavani, Jul 7, 2022, 12:55 AM IST
ಮಧುಗಿರಿ: ರಾಜ್ಯದಲ್ಲಿ ಮಹಿಳಾ ಸಬಲೀಕರಣವೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶವೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.
ಮಧುಗಿರಿಯಲ್ಲಿ ನಡೆದ ಸ್ವ-ಉದ್ಯೋಗ ಮೇಳ ಹಾಗೂ ಸಾಧನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಬಡತನ ಹೋಗಲಾಡಿಸಲು ಯೋಜನೆಯು ಸದಾ ಸಿದ್ಧವಿದೆ. ಅದರಂತೆ ಸಾಮಾಜಿಕ ಸಾಮರಸ್ಯ ಬೆಸೆಯಲು ಜಾತಿ, ಧರ್ಮ ಮೀರಿ ಸದಸ್ಯರನ್ನು ಹೊಂದಿದ್ದು, ಎಲ್ಲ ಸಮಸ್ಯೆಗೂ ಸಂಘದಲ್ಲಿ ಪರಿಹಾರವಿದೆ. ಸಂಘವು ಶಿಕ್ಷಣ ಹಾಗೂ ಸ್ವ ಸಾಮರ್ಥ್ಯವನ್ನು ನೀಡಲಿದ್ದು, ದುಡಿದ ಸಂಪತ್ತು ಸೋರಿಕೆಯಾಗದಂತೆ ಆರ್ಥಿಕವಾದ ಸ್ವಾವಲಂಬನೆಯ ಬದುಕನ್ನು ನೀಡುತ್ತದೆ ಎಂದರು. ಶಾಸಕ ಡಾ| ಜಿ. ಪರಮೇಶ್ವರ್ ಮತ್ತಿತರ ಗಣ್ಯರಿದ್ದರು.
ಹೆಗ್ಗಡೆ ಸಂಸ್ಕೃತಿಯ ರಾಯಭಾರಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ರಾಜ್ಯದ ಬಡವರ ಸಬಲೀಕರಣಕ್ಕೆ ಪೂಜ್ಯರು ಮಂಜುನಾಥನ ಆಜ್ಞೆಯಂತೆ ಮುಂದಡಿಯಿಟ್ಟಿದ್ದಾರೆ. ಅವರು ನಡೆದಾಡುವ ಮಂಜುನಾಥನೇ ಆಗಿದ್ದು, ಈ ಕಾರ್ಯಕ್ಕೆ ನಾವೆಲ್ಲ ಜತೆಯಾಗಬೇಕು. ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಸೊÌàದ್ಯೋಗ ಸೃಷ್ಟಿಗೆ ಪೂಜ್ಯ ಡಾ| ಹೆಗ್ಗಡೆಯವರು ಮತ್ತಷ್ಟು ಪ್ರೋತ್ಸಾಹ ನೀಡಬೇಕೆಂದರು.
ಸಂಘದ ಸದಸ್ಯರ 10 ರೂ. ಉಳಿತಾಯದಿಂದ 367 ಕೋಟಿ ರೂ. ಸಂಗ್ರಹವಾಗಿದ್ದು, 1,400 ಕೋಟಿ ರೂ. ಹಣವು ಸಾಲದ ರೂಪದಲ್ಲಿ ಬಳಕೆಯಾಗಿ ಮರುಪಾವತಿಯಾಗಿದೆ. ಸರಕಾರದ ಸವಲತ್ತುಗಳನ್ನು ಪರಿಚಯ ಮಾಡಲು 326 ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಸಾರ್ವಜನಿಕರಿಗೆ ಯೋಜನೆಯ ಅರಿವು ಹಾಗೂ ಲಾಭವನ್ನು ತಂದುಕೊಡಲಿದೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ
ಉತ್ತಮ ಸಮಾಜ ನಿರ್ಮಾಣಕ್ಕೆ ಕೇಂದ್ರ-ರಾಜ್ಯ ಸರಕಾರಗಳು ಪೂಜ್ಯ ಹೆಗ್ಗಡೆಯವರೊಂದಿಗೆ ಕೈಜೋಡಿಸಿವೆ. ಸಂಸ್ಕಾರಯುತ, ಆರ್ಥಿಕ ಶಿಸ್ತಿನ ಜತೆ ವ್ಯಸನಮುಕ್ತ ಸಮಾಜ ನಿರ್ಮಾಣವಾದರೆ ಪೊಲೀಸ್ ಇಲಾಖೆಗೆ ಅರ್ಧ ಕೆಲಸ ಕಡಿಮೆಯಾಗುತ್ತದೆ. ಪ್ರಧಾನಿ ಮೋದಿಯವರೇ ಪೂಜ್ಯರಲ್ಲಿ ಮನವಿ ಮಾಡಿದ್ದು, ಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಕೋರಿರುವುದು ಪೂಜ್ಯರ ಆಶಯಕ್ಕಿರುವ ಶಕ್ತಿ.
– ಆರಗ ಜ್ಞಾನೇಂದ್ರ, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.