![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 16, 2021, 5:08 PM IST
ಮಧುಗಿರಿ: ಕಳೆದ ಒಂದು ವಾರದಿಂದ ಸುರಿದ ಮಳೆಗೆ ತಾಲೂಕಿನಲ್ಲಿ ಹಲವಾರು ಕೆರೆ, ಕಟ್ಟೆಗಳು ಭರ್ತಿಯಾಗಿದ್ದು, ಕೆಶಿಫ್ ರಸ್ತೆ ಬದಿಯಲ್ಲಿ ನಡೆಯುತ್ತಿರುವ ಎತ್ತಿನ ಹೊಳೆ ಕಾಮಗಾರಿಗೆ ಹಿನ್ನಡೆಯಾಗಿದೆ.
ತಾಲೂಕಿನ ಹುಣಸೇಮರದಹಟ್ಟಿ ಬಳಿಯ ಕೆಶಿಫ್ ರಸ್ತೆ ಬದಿಯಲ್ಲಿ ಹಾದುಹೋಗಿದ್ದ ಎತ್ತಿನಹೊಳೆ ಪೈಪುಗಳನ್ನು ಮಣ್ಣಿನಿಂದ ಮುಚ್ಚಲಾ ಗಿತ್ತು. ಈ ಕಾಮಗಾರಿ ಚೋಳೇನಹಳ್ಳಿ ಕೆರೆಗೆ ಹರಿಯುವ ನೀರಿನ ಹಳ್ಳದಲ್ಲಿ ನಿರ್ಮಿಸಿ ಮಣ್ಣು ಮುಚ್ಚಲಾಗಿತ್ತು. ಆದರೆ, ಕಳೆದ ರೆಡು ದಿನ ಸುರಿದ ಭಾರೀ ಮಳೆಗೆ ಮಣ್ಣಿ ನಲ್ಲಿ ಹೂತಿದ್ದ ಎತ್ತಿನಹೊಳೆ ಕಾಮಗಾರಿ ಬೃಹತ್ ಪೈಪುಗಳು ತೇಲಿದ್ದು, ಮತ್ತೆ ಮಣ್ಣು ಹಾಕುವ ಕೆಲಸ ಮಾಡಬೇಕಿದೆ.
ರೈತರ ಬೆಳೆ ನಾಶ: ಹರಿಹರರೊಪ್ಪ ಗ್ರಾಮದ ರಸ್ತೆಯಲ್ಲಿಯೂ ಇದೇ ಚೋಳೇನಹಳ್ಳಿ ಕೆರೆಗೆ ಹರಿವ ನೀರಿನ ಹಳ್ಳ ಭರ್ತಿಯಾಗಿ ಹರಿದಿದ್ದು, ಪಕ್ಕದ ಜಮೀನುಗಳು ನೀರಿನ ಸೆಳೆತಕ್ಕೆ ತನ್ನ ನಿಜ ಸ್ವರೂಪ ಕಳೆದುಕೊಂಡಿದೆ. ಹಲವಾರು ಕಡೆ ವಾಣಿಜ್ಯ ಬೆಳೆಗಳಾದ ಅಡಕೆ, ಟೊಮೆಟೋ, ಜೋಳ, ಮೆಣಸಿನಕಾಯಿ, ರಾಗಿ, ಹುರುಳಿ, ಸೇವಂತಿಗೆ, ಸೇರಿ ಹತ್ತಾರು ಎಕರೆಯ ಬೆಳೆಗೆ ನೀರು ನುಗ್ಗಿದ್ದು, ಬೆಳೆ ನಾಶವಾಗಿ ರೈತರಿಗೆ ಆರ್ಥಿಕವಾಗಿ ಹೊಡೆತ ಬಿದ್ದಿದೆ.
ಇಂತಹ ಕಡೆಗಳಲ್ಲಿ ಸರ್ಕಾರದ ವತಿಯಿಂದ ಕಂದಾಯಾಧಿಕಾರಿ ಜಯರಾಮಯ್ಯ, ವಿಐ ಶಿವರಾಂ ಭೇಟಿ ನೀಡಿ ಪರಿಶೀಲಿಸಿದ್ದು, ತಹಶೀಲ್ದಾರ್‌ಗೆ ಬೆಳೆ ನಷ್ಟದ ಬಗ್ಗೆ ವರದಿ ನೀಡಿದ್ದಾರೆ. ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಚೋಳೇನಹಳ್ಳಿ ಹಾಗೂ ಸಿದ್ದಾಪುರ ಕೆರೆಗಳು ಭಾಗಶಃ ಭರ್ತಿಯಾಗಿ ಅಂತರ್ಜಲ ಮಟ್ಟ ಏರಿಕೆಯಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲದಾಗಿದೆ.
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.