ಪ್ರತಿದಿನ ಶ್ರೀಗಳ ನೆನೆದು ದಿನಚರಿ ಆರಂಭಿಸುವೆ: ಸಿಎಂ ಯಡಿಯೂರಪ್ಪ
Team Udayavani, Jan 22, 2021, 7:56 PM IST
ತುಮಕೂರು: ಶ್ರೀಮಠಕ್ಕೆ ಭೇಟಿ ನೀಡಿದಾಗಲೆಲ್ಲಾ ಮಾರ್ಗದರ್ಶನ ಮಾಡುತ್ತಿದ್ದ ಶ್ರೀಗಳು ನಾನು ದಾಹೋಹ ಮಾಡದೇ ವಾಪಾಸಾಗಲು ಬಿಡುತ್ತಿರಲಿಲ್ಲ. ಧರ್ಮ, ಜಾತಿ ಭೇದವಿಲ್ಲದೇ ಕಾಯಕ ಮಾಡಿದ ಶ್ರೀಗಳು ಬಸವಣ್ಣ ಅವರ ತತ್ವಗಳನ್ನು ಅನುಸರಿಸಿ ಧಾರ್ಮಿಕ ಸಂಸ್ಥೆಗಳ ಮಾನವೀಯ ಮುಖವನ್ನು ಜಗತ್ತಿಗೆ ತೋರಿಸಿ ನಾಡಿಗೆ ದೇವರಾಗಿದ್ದಾರೆ. ಪ್ರತಿನಿತ್ಯ ನನ್ನ ದಿನಚರಿಯನ್ನು ಶ್ರೀಗಳ ಸ್ಮರಣೆ ಮಾಡಿಕೊಂಡು ಆರಂಭಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.
ಶ್ರೀಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಿಂ. ಡಾ. ಶ್ರೀ ಶಿವಕುಮಾರಸ್ವಾಮೀಜಿ ಅವರ ದ್ವಿತೀಯ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೂರನ್ನೊಂದು ವರ್ಷಗಳ ಕಾಲ ಭಕ್ರರ ಪಾಲಿಗೆ ನಡೆದಾಡುವ ದೇವರೆಂದೇ ಬದುಕಿದ ಶ್ರೀಗಳ ಬದುಕು ಮತ್ತು ವ್ಯಕ್ತಿತ್ವ ಸಾರುವ ಉದ್ದೇಶದಿಂದ ಅವರ ಹುಟ್ಟೂರಾದ ವೀರಾಪುರದಲ್ಲಿ 111 ಅಡಿ ಪುತ್ಥಳಿ ಸ್ಥಾಪನೆಗೆ 80 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.
ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಮಾತನಾಡಿ, ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಕಳೆದ ಎರಡು ವರ್ಷಗಳ ಹಿಂದೆ ಭಕ್ತರಿಗೆ ನೋಡುವ ಭಾಗ್ಯವಿತ್ತು. ಎರಡು ವರ್ಷದ ನಂತರ ಅವರ ಸ್ಮರಣೆಯೇ ದರ್ಶನವಾಗಿದೆ. ಶ್ರೀಗಳನ್ನು ಪಡೆದ ಈ ನಾಡೇ ಪುಣ್ಯ ಎನ್ನುವ ಭಾವನೆ ಭಕ್ತಗಣದಲ್ಲಿದೆ ಎಂದು ಹೇಳಿದರು.
ಇದನ್ನೂ ಓದಿ:ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ ಪಂಡಿತ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಚಿವಪ್ರತಾಪ್ ಚಂದ್ರ ಸಾರಂಗಿ, ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಪಂಚಮಸಾಲಿ ಮಠದ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ ಮಾತನಾಡಿದರು. ಕೈಗಾರಿಕಾ ಸಚಿವಜಗದೀಶ್ ಶೆಟ್ಟರ್, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಜಯರಾಂ, ರಾಜೇಶ್‌ಗೌಡ, ಚಿದಾನಂದಗೌಡ, ಮಾಜಿ ಸಚಿವ ಸೊಗಡು ಎಸ್.ಶಿವಣ್ಣ, ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ, ಕ್ರೇಡಲ್ ಅಧ್ಯಕ್ಷ ರುದ್ರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ಗೌಡ, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್ ಸೇರಿದಂತೆ ಮಠಾಧ್ಯಕ್ಷರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.