ರೈತರ ಸೆಳೆದ ಕೃಷಿ ವಸ್ತು ಪ್ರದರ್ಶನ
ಗಾಜಿನ ಮನೆಯಲ್ಲಿ ಆಯೋಜನೆ • ಯಂತ್ರಗಳ ಪ್ರದರ್ಶನ, ಮಾರಾಟ •ತಜ್ಞರಿಂದ ವಿಚಾರಗೋಷ್ಠಿ
Team Udayavani, Jul 21, 2019, 4:04 PM IST
ತುಮಕೂರು: ಗಾಜಿನ ಮನೆಯಲ್ಲಿ 2ದಿನಗಳಿಂದ ನಡೆಯುತ್ತಿರುವ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ನಡೆಯುತ್ತಿರುವ ಸೌತ್ ಇಂಡಿಯಾ ಆಗ್ರೋ ಎಕ್ಸ್‌ಪೋ ಕೃಷಿ ಮತ್ತು ಪೂರಕ ವಸ್ತು ಪ್ರದರ್ಶನ ರೈತರು, ಉದ್ಯಮಿಗಳು, ನಾಗರಿಕರನ್ನು ಆಕರ್ಷಿಸುತ್ತಿದೆ.
ಉಪಕರಣ ಮಾರಾಟ: ಮೇಳದಲ್ಲಿ ಕೃಷಿಗೆ ಪೂರಕ ವಾಗಿರುವ ಹಲವು ಯಂತ್ರಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇವೆ. ತುಮಕೂರು ಜಿಲ್ಲೆ ತೆಂಗು ಬೆಳೆಯುವ ನಾಡಾಗಿರುವುದರಿಂದ ತೆಂಗು ಬೆಳೆ ಯುವ ರೈತರು ಮನೆಗೆ ಬೇಕಾಗಿರುವ ಎಣ್ಣೆ ಮನೆ ಯಲ್ಲೇ ಮಾಡಿಕೊಳ್ಳಬಹುದಾದ ಯಂತ್ರ, ಕಬ್ಬಿನ ಹಾಲು ತೆಗೆಯುವ ಯಂತ್ರ, ಗೃಹಪಯೋಗಿ ವಸ್ತು ಗಳು ಜೊತೆಗೆ ರೈತರು ಬೆಳೆಯುವ ಸಾವಯವ ಪ್ಲಾಸ್ಟಿಕ್ ಚೀಲ ಸೇರಿದಂತೆ ವಿವಿಧ ಬಗೆಯ ವಸ್ತುಗಳು ಆಕರ್ಷಿಸುತ್ತಿವೆ. ಹನಿ, ತುಂತುರು ನೀರಾವರಿ, ಸಬ್ ಮರ್ಸಿಬಲ್ ಪಂಪ್, ಬೋರ್‌ವೆಲ್ಗೆ ಅಳವಡಿಸುವ ಉಪಕರಣ, ವಿದ್ಯುತ್ ಉಳಿತಾಯ ಉಪಕರಣ, ಗ್ಯಾಸ್‌ನಿಂದ ಆಗುವ ತೊಂದರೆ ನೀಗಿಸುವ ಉಪಕರಣಗಳ ಪ್ರದರ್ಶನ, ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ವಿಚಾರಗೋಷ್ಠಿಗೆ ಆದ್ಯತೆ: ಕೃಷಿ ಚಟುವಟಿಕೆ ಪೂರಕ ಉಪಕರಣಗಳ ಜೊತೆಗೆ ದಿನ ಉಪಯೋಗಿ ವಸ್ತುಗಳು, ಆಯುರ್ವೇದಿಕ್ ಔಷಧಿ, ಗೃಹಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ ನಡೆಯುತ್ತಿದೆ. ಮೇಳದಲ್ಲಿ ವಿಚಾರ ಸಂಕಿರಣ, ಕೃಷಿ, ತೋಟಗಾರಿಕೆ, ಪುಷ್ಪೋದ್ಯಮ, ರೇಷ್ಮೆ, ಜೈವಿಕ ತಂತ್ರಜ್ಞಾನ, ಮೀನುಗಾರಿಕೆ, ಪಶು ಸಂಗೋಪನೆ, ಡೈರಿ, ಕೋಳಿ ಸಾಕಾಣಿಕೆ, ಅಹಾರ ಸಂಸ್ಕರಣೆ ಮಾಹಿತಿ ಸೇರಿದಂತೆ ತಜ್ಞರಿಂದ ವಿಚಾರಗೋಷ್ಠಿಗೂ ಆದ್ಯತೆ ನೀಡಿರುವುದು ವಿಶೇಷ.
ರೈತಪಯೋಗಿ ಪ್ಲಾಸ್ಟಿಕ್ ಚೀಲ: ಧವಸಧಾನ್ಯ ಸಂರಕ್ಷಣೆ ರೈತರಿಗೆ ಕಷ್ಟವಾಗುತ್ತಿದೆ. ಚೀಲಗಳಲ್ಲಿ ತುಂಬಿ ಇಟ್ಟರೆ, ನೀರು ತಾಗಿದರೆ ಧವಸ ಹಾಳಾಗುತ್ತವೆ. ಜೊತೆಗೆ ಹುಳುವಿನ ಕಾಟ. ಇದಕ್ಕೆ ಪರಿಹಾರವಾಗಿ ಬೆಂಗಳೂರಿನ ಯುನಿವರ್ಸಲ್ ಎಂಟರ್‌ಪ್ರೖಸಸ್ ರೈತಪಯೋಗಿ ಪ್ಲಾಸ್ಟಿಕ್ ಚೀಲ ತಯಾರಿಸಿದೆ. ಗಾಳಿಮುಕ್ತ, ಕೀಟನಾಶಕ ರಹಿತ, ಸಾವಯವ ಸಂಗ್ರಹಣೆ ಇರುವ ಪರಿಸರ ಸ್ನೇಹಿ ಪ್ಲಾಸ್ಟಿಕ್ ಇದಾಗಿದ್ದು, 7 ಏಳು ಪದರಗಳ ರಕ್ಷಣೆ ಇದೆ. ಆಹಾರ ಪದಾರ್ಥಗಳ ತಾಜಾತನ, ಸುವಾಸನೆ, ರುಚಿ ಉಳಿಸಬಹುದು ಎನ್ನುತ್ತಾರೆ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಪೂರ್ಣಿಮಾ.
● ಚಿ.ನಿ. ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.