ಪವರ್‌ ಸ್ಟೇಷನ್‌ ನಿರ್ಮಿಸಲು ಜಾಗ ನೀಡಲ್ಲ 


Team Udayavani, May 25, 2022, 5:17 PM IST

ಪವರ್‌ ಸ್ಟೇಷನ್‌ ನಿರ್ಮಿಸಲು ಜಾಗ ನೀಡಲ್ಲ 

ತಿಪಟೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಡಿಂಕನಹಳ್ಳಿ ಗ್ರಾಮದಲ್ಲಿಕೆಪಿಟಿಸಿಎಲ್‌ ವತಿಯಿಂದ 400 ಕೆವಿಯ ಸ್ವಿಚಿಂಗ್‌ಸ್ಟೇಷನ್‌ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳವನ್ನುಬದಲಾಯಿಸುವಂತೆ ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ದಿಗ್ವಿಜಯ್‌ ಬೋಡ್ವೆಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್‌ ಮಾತನಾಡಿ, ಡಿಂಕನಹಳ್ಳಿ ಗ್ರಾಮದಲ್ಲಿ ರೈತರ ಫ‌ಲವತ್ತಾದ ಭೂಮಿಯನ್ನೇ ಗುರಿಯಾಗಿಸಿಕೊಂಡು ಸುಮಾರು 36.8 ಎಕರೆ ಜಾಗವನ್ನುಪವರ್‌ ಸ್ಟೇಷನ್‌ ಸ್ಥಾಪಿಸಲು ಉದ್ದೇಶಿರುವುದುಸರಿಯಲ್ಲ. ಈ ಭಾಗದ ಸುತ್ತಮುತ್ತಲಿನ ಫ‌ಲವತ್ತಾದಭೂಮಿಯಲ್ಲಿರುವ ರೈತರ ಜೀವನಾಧಾರ ಬೆಳೆಗಳಾದತೆಂಗು, ಅಡಕೆ, ಮಾವು, ಹುಣಸೆ, ಹಲಸು ಇತ್ಯಾದಿ ಮರಗಳಿವೆ.

ರೈತರು ಇವುಗಳನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.ಇನ್ನೂ ಕೆಲ ರೈತರು ಸಾಲಶೂಲ ಮಾಡಿಕೊಂಡು ಬೋರ್‌ವೆಲ್‌ ಕೊರೆಸಿ ನಿತ್ಯದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸ್ಟೇಷನ್‌ ಸ್ಥಾಪಿಸಿದರೆ ರೈತರ ಶೇ. 70ರಷ್ಟು ತೆಂಗು ಮತ್ತು ಅಡಕೆ ನಾಶವಾಗಲಿದೆ. ಅಲ್ಲದೆ ಇಲ್ಲಿಅತ್ಯಧಿಕ ಶಕ್ತಿಯ 20ಕ್ಕೂ ಹೆಚ್ಚು ವಿದ್ಯುತ್‌ ಲೈನುಗಳುಹಾದು ಹೋಗಲಿದ್ದು, ಇಲ್ಲಿ ಸರ್ಕಾರಿ ಶಾಲೆ ಇದ್ದು500ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಭವಿಷ್ಯ ಹಾಳಾಗಲಿದೆ ಎಂದರು.

ಯಾವುದೇ ಕಾರಣಕ್ಕೂ ಪವರ್‌ ಸ್ಟೇಷನ್‌ ನಿರ್ಮಿಸಲು ಸ್ಥಳ ಕೊಡುವುದಿಲ್ಲ. ಬೇರೆಡೆಗೆ ವರ್ಗಾವಣೆ ಮಾಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೇರೆಡೆಗೆ ವರ್ಗಾವಣೆಗೆ ಆಗ್ರಹ: ಹಸಿರು ಸೇನೆ ರಾಜ್ಯಾಧ್ಯಕ್ಷ ಕೆಂಕೆರ ಸತೀಶ್‌ ಮಾತನಾಡಿ, ಚಿಕ್ಕ ನಾಯಕನ ಹಳ್ಳಿ ತಾ. ಡಿಂಕನಹಳ್ಳಿಯ ಫ‌ಲವತ್ತಾದ ಭೂಮಿಯಲ್ಲಿಯೇ ಪವರ್‌ ಸ್ಟೇಷನ್‌ ನಿರ್ಮಿಸಲುಹೊರಟಿರುವ ಅಧಿಕಾರಿಗಳಿಗೆ ಧಿಕ್ಕಾರ. ಸಚಿವರಾದಮಾಧುಸ್ವಾಮಿ ರೈತರಿಗೆ ಸ್ಪಂದಿಸಬೇಕಿದೆ. ತಹಸೀಲ್ದಾರ್‌, ಎಸಿ ಹಾಗೂ ಇತರೆ ಅಧಿಕಾರಿ ವರ್ಗದವರುಜಾಗವನ್ನು ಪರಿಶೀಲನೆ ಮಾಡಿ ಬೇರೆಡೆಗೆ ಪವರ್‌ಸ್ಟೇಷನ್‌ನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಸರ್ಕಾರಕ್ಕೆ ಸಲ್ಲಿಸುತ್ತೇನೆ: ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ದಿಗ್ವಿಜಯ್‌ ಬೋಡ್ವೆ, ನಿಮ್ಮ ಎಲ್ಲಾ ಸಮಸ್ಯೆಗಳು ನಮಗೆ ಅರ್ಥವಾಗಿದ್ದು,ಆದರೆ ಭೂ ಸ್ವಾಧೀನಕ್ಕೆ ಮಾತ್ರ ನಮಗೆ ಅಧಿಕಾರವಿದ್ದುನೀವು ಈ ಬಗ್ಗೆ ಕೆಪಿಟಿಸಿಎಲ್‌ ಅಧಿಕಾರಿಗಳೊಂದಿಗೆಚರ್ಚಿಸಬೇಕು. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದರು.

ನಗರದ ಶ್ರೀ ಕೆಂಪಮ್ಮದೇವಿ ದೇವಸ್ಥಾನದಿಂದಪಾದಯಾತ್ರೆ ಮೂಲಕ ತೆರಳಿ ಉಪವಿಭಾಗಾಧಿಕಾರಿಗಳಕಚೇರಿ ಮುಂಭಾಗ ಬಿ.ಎಚ್‌.ರಸ್ತೆ ತಡೆದು ಪ್ರತಿಭಟನೆನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಬಸ್ತಿಹಳ್ಳಿ ರಾಜಣ್ಣ,ದೇವರಾಜು ತಿಮ್ಲಾಪುರ, ಶ್ರೀಕಾಂತ್‌ ಕೆಳಹಟ್ಟಿ, ಕೆಆರ್‌ಎಸ್‌ ಪಕ್ಷ ಗಂಗಾಧರ್‌ ಕರೀಕೆರೆ, ಕೃಷಿಕ ಸಮಾಜದಹೊನ್ನರಾಜು, ಜಯಶ್ರೀ, ಪಾಂಡುರಂಗ, ರಾಜಣ್ಣ,ದಿನೇಶ್‌, ಬಸವರಾಜು, ಅಜ್ಜನಪಾಳ್ಯದ ಕಾಂತರಾಜು,ಬರಗೀಹಳ್ಳಿ ಮೂರ್ತಿ ಸೇರಿದಂತೆ ನೂರಾರುಸಂಖ್ಯೆಯಲ್ಲಿ ಅರಳೀಕೆರೆ, ಸಾಲಾಪುರ, ಅಜ್ಜನಪಾಳ್ಯ,ಡಿಂಕನಹಳ್ಳಿ, ಕೋರಗೆರೆ ಬರಗಿಹಳ್ಳಿ, ಬಟ್ಟರಹಳ್ಳಿ,ಹನುಮಂತಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮದಮಹಿಳೆಯರು, ಭೂಮಿ ಕಳೆದುಕೊಂಡವರು ಭಾಗವಹಿಸಿದ್ದರು.

ರೈತರ ಪಟ್ಟು, ವಾಗ್ವಾದ : ಎಸಿ ಯಾವುದೋ ಮೀಟಿಂಗ್‌ನಲ್ಲಿ ಬ್ಯುಸಿ ಇದ್ದಕಾರಣ ಕಚೇರಿಯ ಒಳಗಡೆ ಬಂದು ಮನವಿನೀಡಿ ಎಂದು ಸಿಬ್ಬಂದಿಗಳು ತಿಳಿಸಿದಾಗ ಆಕ್ರೋಶ ಗೊಂಡ ರೈತರು, ನಾವು ಎರಡು ಕಿ. ಮೀ. ಪಾದಯಾತ್ರೆ ಮಾಡಿ ಬಂದಿದ್ದೇವೆ. ಅಧಿಕಾರಿಗಳಾದನೀವು ಸೌಜನ್ಯಕ್ಕಾದರೂ ಬಂದು ನಮ್ಮ ಕಷ್ಟಅರ್ಥಮಾಡಿಕೊಳ್ಳದೇ ಕುಳಿತಲ್ಲಿಯೇ ಮಾತನಾಡುತ್ತಾರೆ. ಉಪವಿಭಾಗಾಧಿಕಾರಿಗಳು ಹೊರ ಗಡೆ ಬಂದು ಮನವಿ ತೆಗೆದುಕೊಳ್ಳುವವರೆಗೂನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.ನಂತರ ಉಪವಿಭಾಗಾಧಿಕಾರಿಗಳು ಬಂದು ಮನವಿ ಸ್ವೀಕರಿಸಿದರು.

ರೈತರನ್ನು ಒಕ್ಕಲೆಬ್ಬಿಸುವ ಕೆಲಸ : ಭಾರತೀಯ ಕೃಷಿಕ ಸಮಾಜದ ಗೌರವಾಧ್ಯಕ್ಷಪುಟ್ಟರಾಜು ಮಾತನಾಡಿ, ಉದ್ದೇಶ ಪೂರ್ವಕವಾಗಿಯೇ ರೈತರನ್ನು ಒಕ್ಕಲೆಬ್ಬಿಸುವ ಕೆಲಸಮಾಡಲಾಗುತ್ತಿದೆ. ರೈತರ ಜಮೀನಿನಲ್ಲಿ ಪವರ್‌ಸ್ಟೇಷನ್‌ ನಿರ್ಮಿಸಿ ವಿದ್ಯುತ್‌ ತಂತಿಗಳು ಹಾದುಹೋಗುವುದರಿಂದ ರೈತರು ಸಾವಿರಾರು ಎಕರೆಭೂಮಿಯನ್ನು ಕಳೆದುಕೊಳ್ಳಬೇಕಿದೆ. ರೈತಕುಟುಂಬಗಳು ಬೀದಿಗೆ ಬೀಳಲಿದ್ದು ನಮ್ಮ ಪ್ರಾಣಹೋದರೂ ಪರವಾಗಿಲ್ಲ ಭೂಮಿಯನ್ನುಬಿಟ್ಟುಕೊಡುವುದಿಲ್ಲ. ಬಂಜರು ಭೂಮಿ ಅಥವಾಜನರು ವಾಸಿಸುವ ಸ್ಥಳದಿಂದ ದೂರ ಇರುವ ಕಡೆಗೆ ಸ್ಟೇಷನ್‌ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

 

ಟಾಪ್ ನ್ಯೂಸ್

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

12-koratagere

Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ

11-koratagere

ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ

10-

Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

1(1

Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ  ಇನ್ನೂ ಮೀನ ಮೇಷ ಎಣಿಕೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.