ಸುಂಕ ವಸೂಲಿಗೆ ಮುಂದಾದರೆ ಹೋರಾಟ
Team Udayavani, Feb 16, 2020, 3:00 AM IST
ಮಧುಗಿರಿ: ಪಾವಗಡದಿಂದ ಮಳವಳ್ಳಿವರೆಗಿನ ಕೆಶಿಫ್ ರಸ್ತೆ ಸುಮಾರು 525 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರಾಯೋಜಕತ್ವದ ಹಾಗೂ ವಿಶ್ವ ಬ್ಯಾಂಕಿನ ಕಾರ್ಯಕ್ರಮ. ಇದು ಜನರ ಆಸ್ತಿಯಾಗಿದ್ದು, ಸುಂಕ ವಸೂಲಿ ಮಾಡಲು ಖಾಸಗಿಯವರಿಗೆ ಹಕ್ಕಿಲ್ಲ. ಹಾಗಾಗಿ ಜನ ವಿರೋಧಿಯಾಗಿರುವ ಸುಂಕ ವಸೂಲಿ ಕೇಂದ್ರ ನಿರ್ಮಿಸಲು ಬಿಡುವುದಿಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.
ಪಟ್ಟಣದ ಶ್ರೀವೆಂಕಟರಮಣಸ್ವಾಮಿ ದೇಗುಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪವಿಭಾಗವೇ ಸತತ ಬರಗಾಲದಿಂದ ಕಂಗೆಟ್ಟಿದ್ದು, ಇಂತಹ ಸಂದರ್ಭದಲ್ಲಿ ಕೆಶಿಫ್ ರಸ್ತೆಗೆ ಸುಂಕ ವಸೂಲಿ ಕೇಂದ್ರ ಸ್ಥಾಪಿಸಲು ಮುಂದಾದರೆ ಸುಮ್ಮನಿರುವುದಿಲ್ಲ. ರಸ್ತೆ ಉದ್ಘಾಟನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ರಸ್ತೆಗೆ ಟೋಲ್ ಸಂಗ್ರಹದ ಹೊಣೆಗಾರಿಕೆಯಿಲ್ಲ. ಹಿಂದಿನ ಶಾಸಕರೂ, ಹಾಲಿ ಶಾಸಕರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಿಯಮ ಉಲ್ಲಂ ಸಿ ತುಮಕೂರು ಬಳಿಯ ಓಬಳಾಪುರ, ಕೊರಟಗೆರೆಯ ತುಂಬಾಡಿ ಹಾಗೂ ಮಧುಗಿರಿಯ ಚಿನ್ನೇನಹಳ್ಳಿ ಬಳಿ ಟೋಲ್ ಸಂಗ್ರಹಿಸಲು ಖಾಸಗಿ ಸಂಸ್ಥೆ ಮುಂದಾಗಿರುವುದು ಸರಿಯಲ್ಲ. ಮುಂದುವರಿಸಿದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎಂ.ಕೆ.ನಂಜುಂಡರಾಜು ಮಾತನಾಡಿ, ಟೋಲ್ ಸಂಗ್ರಹ ಯೋಜನೆ ಅವೈಜ್ಞಾನಿಕ ಹಾಗೂ ಕಾನೂನು ಬಾಹಿರ. ಇದರಿಂದ ಜನರಿಗೆ ನಷ್ಟವಾಗಲಿದ್ದು, ಉಪವಿಭಾಗದ ಕೊರಟಗೆರೆ, ಮಧುಗಿರಿ, ಪಾವಗಡದ ಶಾಸಕರು ಈ ಬಗ್ಗೆ ಚಿಂತಿಸಿ ಟೋಲ್ ನಿರ್ಮಾಣ ನಿಲ್ಲಿಸಬೇಕು. ಇಲ್ಲವಾದರೆ ಜನರೆ ಟೋಲ್ ನಿರ್ಮಾಣ ಸಂಸ್ಥೆಯವರಿಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗುತ್ತಿಗೆದಾರ ರಾಧ್ಯೇಶ್ಯಾಮ್ ಮಾತನಾಡಿ, ರಸ್ತೆಯ ಕಾಮಗಾರಿ ಸಂಪೂರ್ಣ ಮುಗಿದಿಲ್ಲ. ಮುಖ್ಯರಸ್ತೆಗೆ ಸಮನಾಗಿ ಸರ್ವೀಸ್ ರಸ್ತೆ ನಿರ್ಮಾವಾಣಗಬೇಕು. ಇದು ವಿಶ್ವಬ್ಯಾಂಕಿನ ನೆರವಿನಿಂದ ನಿರ್ಮಾಣವಾಗಿದ್ದು, ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದ್ದರು. ಈಗ ಏಕಾಏಕಿ ಟೋಲ್ ಸಂಗ್ರಹಕ್ಕೆ ಮುಂದಾಗುವುದು ತಪ್ಪು. ಅಂತಾರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಹಣದ ದುರಾಸೆಗೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಟೋಲ್ ನಿರ್ಮಾಣಕ್ಕೆ ತಡೆ ನೀಡುವಂತೆ ಒತ್ತಾಯಿಸಿದರು. ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್, ಮಾಜಿ ಅಧ್ಯಕ್ಷ ಕೆ.ಪ್ರಕಾಶ್, ಅಯೂಬ್, ಮಾಜಿ ಸದಸ್ಯ ರಮೇಶ್, ಡಾ.ಜಯರಾಂ, ಮಧುಗಿರಿ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ್, ಗುತ್ತಿಗೆದಾರ ಮಹೇಶ್ ಕಾರಮರಡಿ, ಮುಖಂಡರಾದ ನಾರಾಯಣ್, ಧನಪಾಲ್, ಅಕ್ಕಿಸೂರಿ ಇತರರು ಇದ್ದರು.
ಮಳವಳ್ಳಿ-ಪಾವಗಡ ಕೆಶಿಫ್ ರಸ್ತೆ ನಿರ್ಮಾಣ ಸಂಪೂರ್ಣ ವಿಶ್ವಬ್ಯಾಂಕ್ ನೆರವಿನಿಂದ ನಿರ್ಮಾಣವಾಗಿದ್ದು, ಯಾವುದೇ ಕಾರಣಕ್ಕೂ ನಮ್ಮ ಭಾಗದಲ್ಲಿ ಟೋಲ್ ಸಂಗ್ರಹ ಕೇಂದ್ರಗಳ ಸ್ಥಾಪನೆಗೆ ಅವಕಾಶ ನೀಡಲ್ಲ. ಅಂತಹ ಸಂದರ್ಭ ಬಂದರೆ ಹೋರಾಟ ಅನಿವಾರ್ಯ.
-ಎಂ.ವಿ.ವೀರಭದ್ರಯ್ಯ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.