ಸಸಿ ನೆಟ್ಟು ಪೋಷಣೆ ಮಾಡದ ಅರಣ್ಯ ಇಲಾಖೆ
ಒಣಗಲು ಶುರುವಾದ ನೂರಾರು ಸಸಿಗಳು ರಸ್ತೆ ಬದಿಯಲ್ಲಿ ನೆಟ್ಟ ಸಸಿಗಳಿಗೆ ನೀರೇ ಇಲ್ಲ
Team Udayavani, May 4, 2019, 4:30 PM IST
ಹುಳಿಯಾರು ಯಳನಾಡು ರಸ್ತೆಯಲ್ಲಿ ನಿರ್ಮಿಸಿರುವ ನೆಡುತೋಪು ಒಣಗಿರುವುದು
ಹುಳಿಯಾರು: ರಸ್ತೆ ಬದಿ ನೆಟ್ಟಿರುವ ಸಸಿಗಳನ್ನು ಅರಣ್ಯ ಇಲಾಖೆ ಸಂಪೂರ್ಣವಾಗಿ ಮರೆತಿದೆ. ಇಲ್ಲಿನ ಯಳನಾಡು ರಸ್ತೆಯ ಎರಡು ಬದಿಯ ಇಕ್ಕೆಲಗಳಲ್ಲಿ ವಿವಿಧ ಬಗೆಯ ಸಸಿಗಳು ಇನ್ನೂ ಬೆಳವಣಿಗೆ ಹಂತದ್ದು ನಿಷ್ಕಾಳಜಿಯ ಕಾರಣ ಬಿಸಿಲು ಮತ್ತು ದನಕರುಗಳ ದಾಳಿಗೆ ಒಳಗಾಗಿವೆ. ಹಸಿರೀಕರಣ ಯೋಜನೆ ಅರಣ್ಯ ಇಲಾಖೆಯ ಮಹತ್ವಾ ಕಾಂಕ್ಷಿ ಕಾರ್ಯಕ್ರಮ. ಈ ಯೋಜನೆಗೆ ಪೂರಕವಾಗಿ ಹುಳಿಯಾರಿನಿಂದ ಯಳನಾಡು ಗ್ರಾಮದವರೆಗೂ ನೆಡುತೋಪು ನಿರ್ಮಿಸಿತ್ತು. ಆದರೆ, ನಿರ್ವಹಣೆ ಇಲ್ಲದೇ ಹಾಕಿರುವ ಸಸಿಗಳು ಒಣಗುತ್ತಿದ್ದು, ಖರ್ಚು ಮಾಡಿರುವ ಹಣ ವ್ಯರ್ಥವಾಗಿದೆ.
ನಿರ್ಲಕ್ಷ್ಯ: ರಸ್ತೆ ಬದಿ ಸಸಿಗಳನ್ನು ನೆಟ್ಟು ಪೋಷಿಸಲು ಸರ್ಕಾರ ಉದ್ದೇಶಿಸಿ ನೌಕರರನ್ನು ನಿಯೋಜಿಸಿತ್ತು. ದಿನಗೂಲಿ ಸಿಬ್ಬಂದಿ, ಅಧಿಕಾರಿಗಳು ನಿಯೋಜಿಸಿ ರುವ ಜಾಗಗಳಲ್ಲಿ ಸಸಿ ನೆಟ್ಟು ಪೋಷಣೆ ಮಾಡ ಬೇಕು. ಆದರೆ ಈ ಕೆಲಸಕ್ಕೆ ನಿರ್ಲಕ್ಷ್ಯ ವಹಿಸಿದ್ದು ಯೋಜನೆ ಹಳ್ಳ ಹಿಡಿದಿದೆ.
ಟ್ಯಾಂಕರ್ ಮೂಲಕ ಸಸಿಗಳಿಗೆ ನೀರು ಹಾಕದೆ ನಿರ್ಲಕ್ಷ್ಯಿಸಿರುವುದರಿಂದ ಬೇಸಿಗೆ ಬಿಸಿಲಿನ ಝಳಕ್ಕೆ ಹಲವು ಸಸಿಗಳು ಸಂಪೂರ್ಣ ಒಣಗಿ ನಿಂತಿವೆ. ತಡೆಬೇಲಿ ಕಿತ್ತುಹೋಗಿವೆ. ಕೆಲ ಕಡೆ ಬೀಡಾಡಿ ದನಗಳಿಂದ ಸಸಿಗಳು ಅರ್ಧಕ್ಕೆ ಮುರಿದಿವೆ. ಅತ್ತ ದಾರಿ ಹೋಕರಿಗೆ ನೆರಳಿನ ಕೊಡೆಯಂತಿ ರುತ್ತಿದ್ದ ರಸ್ತೆ ಬದಿ ಸಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿ ಸುತ್ತಿದೆ. ಇತ್ತ ಮರ ಸಸಿಗಳ ರಕ್ಷಣೆ ಮತ್ತು ಪೋಷಣೆ ಹೊಣೆ ಹೊತ್ತ ಅರಣ್ಯ ಇಲಾಖೆ ಮಾತ್ರ ನೆಟ್ಟ ಸಸಿಗಳ ಬಗ್ಗೆ ಮುತುವರ್ಜಿ ವಹಿಸದೆ ಒಣಗಲು ಬಿಟ್ಟು ಪರಿಸರ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಯೋಜನೆ ತಲುಪಿಸಿ: ಅರಣ್ಯ ಇಲಾಖೆ ಜವಾಬ್ದಾರಿ ಯುತವಾಗಿ ಕೆಲಸ ಮಾಡಲು ಮುಂದಾಗಬೇಕಿದೆ. ನೆಡು ತೋಪು ನಿರ್ವಹಣೆ ಹೊಣೆ ಹೊತ್ತ ಸಿಬ್ಬಂದಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಹಾಕುವಂ ತೆಯೂ, ಕಿತ್ತು ಹೋಗಿರುವ ಬೇಲಿ ಸರಿಪಡಿಸು ವಂತೆಯೂ ನಿರ್ದೇಶನ ನೀಡಬೇಕಿದೆ. ಹುಳಿಯಾರಿನ ಪರಿಸರ ಪ್ರೇಮಿ ರಾಜುಬಡಗಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ನೆಪದಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆದಿದೆ. ಕಳೆದ 2-3 ತಿಂಗಳ ಹಿಂದಷ್ಟೇ ಹುಳಿಯಾರು ಪಟ್ಟಣದ ನೂರಾರು ವರ್ಷ ಹಳೆಯ ಹೆಮ್ಮರಗಳನ್ನು ಧರೆಗುರುಳಿಸಿದ್ದರು. ಆದರೆ ಬೆಳಸುವ ಕಾರ್ಯ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ. ಸಸಿ ಬೆಳೆಸ ಲೆಂದೇ ಸರ್ಕಾರ ಹಣ ಕೊಟ್ಟರೂ ಪ್ರಯೋಜನ ವಾಗುತ್ತಿಲ್ಲ. ಹಾಗಾಗಿಯೇ ಈ ಭಾಗ ನಿರಂತರ ಬರಲಾಗಕ್ಕೆ ತುತ್ತಾಗುತ್ತಿದೆ ಎಂದು ತಿಳಿಸಿದ್ದಾರೆ.
.ಎಚ್.ಬಿ.ಕಿರಣ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.