ಸಮಾಜದ ಶಾಂತಿಗೆ ಗಾಂಧಿ ಆದರ್ಶ ಪಾಲಿಸಿ: ರಾಮಯ್ಯ
Team Udayavani, Oct 3, 2020, 3:11 PM IST
ಕೊರಟಗೆರೆ: ಅಹಿಂಸೆ ಸತ್ಯಾಗ್ರಹ ಮೂಲಕ ನ್ಯಾಯಕ್ಕಾಗಿ ಹೋರಾಡಲು ಸಾಧ್ಯ ಎಂದು ತೋರಿಸಿಕೊಟ್ಟ ರಾಷ್ಟಪಿತ ಮಹಾತ್ಮ ಗಾಂಧೀಜಿರವರ ಆದರ್ಶ ಸಮಾಜದ ಶಾಂತಿ ಪಾಲನೆಗೆ ಹಾಗೂ ಎಲ್ಲಾ ವರ್ಗದ ಜನತೆಗೆ ನೆಮ್ಮದಿಯ ಜೀವನಕ್ಕೆ ಸೂತ್ರವಾಗಿದೆ ಎಂದು ತಾಪಂ ಅಧ್ಯಕ್ಷ ಟಿ.ಸಿ. ರಾಮಯ್ಯ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿಯಿಂದ ತಾಲೂಕುಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗಾಂಧೀಜಿ ಅವರ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವದ ಇತಿಹಾಸದಲ್ಲಿ ಹಲವು ಕಾಂತಿಗಳು ನಡೆದಿವೆಬಹುತೇಕಎಲ್ಲಾಕ್ರಾಂತಿಕಾರಿಗಳು ಅನುಸರಿಸಿದ ನೀತಿ ಹಿಂಸೆಯೆ ಆದರೆ ನಮ್ಮ ಮಹಾತ್ಮ ಗಾಂಧೀಜಿ ಅಹಿಂಸೆ ಧರ್ಮದಮೂಲಕವೇ ಕ್ರಾಂತಿಕಾರಿಯಾಗಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದವರು ಎಂದರು.
ಶಿಕ್ಷಣಾಧಿಕಾರಿ ಸುಧಾಕರ್‌ಮಾತನಾಡಿ, ಗಾಂಧೀಜಿ ಶಾಂತಿ ಸ್ವರೂಪದ ಸ್ವಾತಂತ್ರ್ಯ ಹೋರಾಟದ ಮಾರ್ಗದಿಂದ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಗಾಂಧೀಜಿ ವ್ಯಕ್ತಿ ಅಲ್ಲ ಶಕ್ತಿ ಸಮಾಜದಲ್ಲಿ ವಿವಿಧ ರಂಗಗಳಲ್ಲಿನ ಅನೇಕ ಸಮಸ್ಯೆಗಳ ನಿವಾರಣೆಗೆ ಅವರ ಚಿಂತನೆಗಳು ನಮಗೆ ದಾರಿ ದೀಪವಾಗಿದೆ. ಪ್ರತಿ ವರ್ಷ ಅವರ ಜಯಂತಿ ಆಚರಣೆಯಿಂದ ಅವರ ಚಿಂತನೆಗಳನ್ನು ಮನನ ಮಾಡಲು ಅವಕಾಶ ವಾಗಿದೆ ಎಂದು ತಿಳಿಸಿದರು.
ಹಿಂದು ಧರ್ಮದ ಮಹತ್ವವನ್ನು ಶಿವಕುಮಾರ್, ಕೈಸ್ತ ಧರ್ಮದ ಮಹತ್ವ ವನ್ನು ಪಾದರಿ ಸುರೇಶ್‌ಬಾಬು, ಇಸ್ಲಾಂ ಧರ್ಮದ ಮಹತ್ವವನ್ನು ಮುತ್ತುವಲ್ಲಿ ಇದಾಯತ್ ಉಲ್ಲಾ ಷರೀಫ್ ತಿಳಿಸಿದರು. ತಾಪಂ ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯೆ ನರಸಮ್ಮ, ಮುಖಂಡರಾದ ನರಸಿಂಹ ಮೂರ್ತಿ, ಉಪತಹಶೀಲ್ದಾರ್ ಚಂದ್ರಪ್ಪ, ತಾಲೂಕು ವೈದ್ಯಾಧಿಕಾರಿ ವಿಜಯ್ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಕಂದಾಯ ಇಲಾಖಾ ಅಧಿಕಾರಿಗಳಾದ ಚಿಕ್ಕರಾಜು, ಜಯ ಪ್ರಕಾಶ್, ಪ್ರತಾಪ್, ಬಸವರಾಜು, ನಕುಲ್, ಯಶೋಧ, ರಘು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.