ಖಾಸಗಿ ಬಸ್ ವೇಗಕ್ಕೆ ಬೀಳಲಿ ಕಡಿವಾಣ
Team Udayavani, Nov 8, 2019, 5:32 PM IST
ತುಮಕೂರು: ತುಮಕೂರು, ಪಾವಗಡ ರಸ್ತೆ ಪ್ರತಿನಿತ್ಯ ಅಪಘಾತದ ಸ್ಥಳವಾಗಿ ಮಾರ್ಪಟ್ಟಂತಿದೆ. ಹೊಸ ಕೆಶಿಪ್ ರಸ್ತೆ ಆಗಿರುವುದರಿಂದ ಚಾಲಕರು ವೇಗವಾಗಿ ವಾಹನ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ವೇಗಕ್ಕೆ ಕಡಿವಾಣ ಹಾಕಿ ಎಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ತುಮಕೂರಿನಿಂದ ಮಧುಗಿರಿ ಮತ್ತು ಪಾವಗಡಕ್ಕೆ ಪ್ರತಿ ಐದು ನಿಮಿಷಕ್ಕೊಮ್ಮೆ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಒಂದು ಬಸ್ ನಿಲ್ದಾಣದಿಂದ, ಇನ್ನೊಂದು ನಿಲ್ದಾಣಕ್ಕೆ ನಿಗದಿಪಡಿಸಿದ ಅವಧಿಯೊಳಗೆ ತಲುಪಬೇಕು ಎನ್ನುವ ಕಾರಣಕ್ಕೆ ಚಾಲಕರು ವೇಗವಾಗಿ ಬಸ್ ಚಲಾಯಿಸುತ್ತಾರೆ. ಮಾರ್ಗಮಧ್ಯೆ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಿಕೊಳ್ಳುವ ವೇಳೆ ತಡವಾದರೆ, ಬಸ್ ನಿಲ್ದಾಣದಲ್ಲಿ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ನಿಯಮ ಉಲ್ಲಂಸಿ ವಾಹನ ಓಡಿಸುತ್ತಾರೆ. ಈ ರೀತಿ ಚಾಲಕರು ವೇಗವಾಗಿ ಬಸ್ ಚಲಿಸುವಾಗ ಎದುರುಗಡೆ ಬರುವ ವಾಹನ, ಪ್ರಾಣಿ, ಪಾದಚಾರಿಗಳು ಬಂದಾಗ ಹಠಾತ್ ಬ್ರೇಕ್ ಹಾಕಿದಾಗ ಅಪಘಾತಗಳು ಸಂಭವಿಸುತ್ತವೆ.
ಅಪಘಾತ ಅಂಕಿ-ಅಂಶ: ತುಮಕೂರಿನಿಂದ ಮಧುಗಿರಿ ಮತ್ತು ಪಾವಗಡ ವ್ಯಾಪ್ತಿ ಯಲ್ಲಿ ಕಳೆದ ಮೂರು ವರ್ಷಗಳಿಂದ ಆಗಿರುವ ಅಪಘಾತ ಅಂಕಿ-ಅಂಶ ನೋಡಿದರೆ ಆತಂಕ ಮೂಡಿಸುವಂತಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದ ಅಪಘಾತದಲ್ಲಿ 39 ಸಾವು, 77 ಗಾಯ, 2018ರಲ್ಲಿ 45 ಸಾವು, 88 ಗಾಯ, 2019ರಲ್ಲಿ 28 ಸಾವು, 71 ಗಾಯ, ಕೊರಟಗೆರೆ 2017ರಲ್ಲಿ 13 ಸಾವು, 35 ಗಾಯ, 2018ರಲ್ಲಿ 15 ಸಾವು, 83 ಗಾಯ, 2019 11 ಸಾವು, 43 ಗಾಯ, ಮಧುಗಿರಿ 2017ರಲ್ಲಿ 15 ಸಾವು, 70 ಗಾಯ, 2018ರಲ್ಲಿ 22 ಸಾವು, 74 ಗಾಯ, 2019ರಲ್ಲಿ22 ಸಾವು, 57 ಗಾಯ, ಮಿಡಿಗೇಶಿ 2017ರಲ್ಲಿ 20 ಸಾವು, 16 ಗಾಯ, 2018ರಲ್ಲಿ 23 ಸಾವು, 31 ಗಾಯ, 2019 ರಲ್ಲಿ 21 ಸಾವು, 26 ಗಾಯ, ಪಾವಗಡ 2017 ರಲ್ಲಿ 8 ಸಾವು, 6 ಗಾಯ, 2018ರಲ್ಲಿ 16 ಸಾವು, 12 ಗಾಯ, 2019ರಲ್ಲಿ 14 ಸಾವು, 7 ಗಾಯ ಸಂಭವಿಸಿದೆ.ಜನ ಸಂಚಾರ ಪ್ರದೇಶ ಗಳಲ್ಲೂ ನಿಧಾನ ವಾಗಿ ಚಲಿಸದೆ ವೇಗವಾಗಿ ವಾಹನ ಓಡಿಸು ತ್ತಾರೆ. ಇದರಿಂದ ಅಪಘಾತ ಸಂಭವಿಸುತ್ತಿವೆ. ಇದಕ್ಕೆ ನಿಯಂತ್ರಣ ಹಾಕಿ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಾಗರೀಕರು.
-ಚಿ.ನಿ. ಪುರುಷೋತ್ತಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.